Covid-19 Cases: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳ, ಮಹಾರಾಷ್ಟ್ರದಲ್ಲಿ ವ್ಯಕ್ತಿ ಸಾವು

By Vinutha Perla  |  First Published Dec 31, 2022, 11:12 AM IST

ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ಸಕ್ರಿಯ ಪ್ರಕರಣಗಳು 3,609ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ನವದೆಹಲಿ: ಭಾರತದಲ್ಲಿ 243 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,609ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಅಂಕಿ ಅಂಶಗಳು ತಿಳಿಸಿವೆ. ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,78,158) ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು (Death), ಸಾವಿನ ಸಂಖ್ಯೆ 5,30,699 ಆಗಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಡೇಟಾವನ್ನು ನವೀಕರಿಸಲಾಗುತ್ತದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕು (Virus)ಗಳಲ್ಲಿ ಶೇಕಡಾ 0.01 ರಷ್ಟಿದ್ದರೆ, ರಾಷ್ಟ್ರೀಯ ಕೋವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 98.80 ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ.

ಸಚಿವಾಲಯ ನಡೆಸುತ್ತಿರುವ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಡಿಯಲ್ಲಿ ಇದುವರೆಗೆ ದೇಶದಲ್ಲಿ 220.46 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಭಾರತದ ಕೋವಿಡ್ -19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿದೆ, ಆಗಸ್ಟ್ 23 ರಂದು 30 ಲಕ್ಷಗಳು, ಸೆಪ್ಟೆಂಬರ್ 5 ರಂದು 40 ಲಕ್ಷಗಳು ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷಗಳಷ್ಟು ಪ್ರಕರಣ ದಾಖಲಾಗಿದೆ. ದೇಶವು ಕಳೆದ ವರ್ಷ ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಯಷ್ಟು ಪ್ರಕರಣ, ಈ ವರ್ಷ ಜನವರಿ 25 ರಂದು ನಾಲ್ಕು ಕೋಟಿ ಗಡಿ ದಾಟಿದೆ.

Latest Videos

undefined

ಚೀನಾ ಕೋವಿಡ್ ರಹಸ್ಯ ವರದಿ ಲೀಕ್, 20 ದಿನದಲ್ಲಿ 250 ಮಿಲಿಯನ್ ಮಂದಿಗೆ ಕೊರೋನಾ!

ಮೂಗಿನ ಮೂಲಕ ಕೋವಿಡ್‌ ಲಸಿಕೆ
ಮೂಗಿನ ಮೂಲಕ ಪಡೆಯಬಹುದಾದ ‘ಇನ್‌ಕೋವ್ಯಾಕ್‌’ ಕೋವಿಡ್‌-19 ಲಸಿಕೆ  ದರವನ್ನು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿಯು ಮಂಗಳವಾರ ಪ್ರಕಟಿಸಿದೆ. ಲಸಿಕೆಯು ಕೋವಿನ್‌ ಪೋರ್ಟಲ್‌ನಲ್ಲಿ ಲಭ್ಯವಿದ್ದು, ಖಾಸಗಿ ಆಸ್ಪತ್ರೆಯಲ್ಲಿ 800 ರೂ. (ಜಿಎಸ್‌ಟಿ ಹೊರತುಪಡಿಸಿ) ಇರಲಿದೆ. ಇನ್ನು ಸರ್ಕಾರಕ್ಕೆ ಪೂರೈಸುವ ಲಸಿಕೆಗೆ 325 ರೂ. (ಜಿಎಸ್‌ಟಿ ಹೊರತುಪಡಿಸಿ) ಇರಲಿದೆ ಎಂದು ಕಂಪನಿ ಹೇಳಿದೆ. ಕೋವಿನ್‌ ಪೋರ್ಟಲ್‌ ಮೂಲಕವೇ ಇನ್‌ಕೋವ್ಯಾಕ್‌ ಅನ್ನು ಬುಕ್‌ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಲಸಿಕೆ (Vaccine) ಪಡೆಯಬಹುದಾಗಿದೆ. ಇದು ಮೂಗಿನ ಮೂಲಕ ಪಡೆಯಬಹುದಾದ ಜಗತ್ತಿನ ಮೊದಲ ಲಸಿಕೆಯಾಗಿದ್ದು, 2023ರ ಜನವರಿ 4ನೇ ವಾರದಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತದ 14 ಕಡೆ ಲಸಿಕೆ ಪ್ರಯೋಗ ನಡೆಸಿದ್ದು, ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಭಾರತ್‌ ಬಯೋಟೆಕ್‌ನ ಕಾರ್ಯಾಧ್ಯಕ್ಷ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ಇನ್‌ಕೋವ್ಯಾಕ್‌ ಅನ್ನು ಕೋವಿಡ್ -19 ಗಾಗಿ ಪ್ರಾಥಮಿಕ 2 - ಡೋಸ್ ವೇಳಾಪಟ್ಟಿಗಾಗಿ ಮತ್ತು ಹೆಟೆರೊಲಾಜಸ್ ಬೂಸ್ಟರ್ ಡೋಸ್‌ಗೆ ಅನುಮೋದನೆ ಪಡೆದ ವಿಶ್ವದ ಮೊದಲ ಇಂಟ್ರಾನೇಸಲ್ ಲಸಿಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್‌ಕೋವ್ಯಾಕ್‌ ಅನ್ನು ಪ್ರಾಥಮಿಕ ಡೋಸ್ ಆಗಿ ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಯಿತು ಮತ್ತು ಭಾರತದಲ್ಲಿ ಸಾಮಾನ್ಯವಾಗಿ ಜನರು ಪಡೆದುಕೊಳ್ಳುತ್ತಿರುವ 2 ಕೋವಿಡ್-19 ಲಸಿಕೆಗಳ (ಕೋವ್ಯಾಕ್ಸಿನ್‌, ಕೋವಿಶೀಲ್ಡ್‌) ಎರಡು ಡೋಸ್‌ಗಳನ್ನು ಈ ಹಿಂದೆ ಸ್ವೀಕರಿಸಿದವರಿಗೂ ಹೆಟೆರೊಲಾಜಸ್ ಬೂಸ್ಟರ್ ಡೋಸ್‌ನಂತೆ ಇದನ್ನು ನೀಡಲಾಗಿದೆ. 

Covid 19: ದೀರ್ಘಕಾಲ ಕಾಡುವ ಕೋವಿಡ್‌ ಲಕ್ಷಣಕ್ಕೆ ಇಲ್ಲಿದೆ ಮನೆ ಮದ್ದು

ಇತ್ತೀಚೆಗಷ್ಟೇ ಬೂಸ್ಟರ್‌ ಡೋಸ್‌ ಆಗಿ ಭಾರತ್‌ ಬಯೋಟೆಕ್‌ನ ಇನ್‌ಕೋವ್ಯಾಕ್‌ ಲಸಿಕೆ ಬಳಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. 18 ವರ್ಷದ ಮೇಲ್ಪಟ್ಟ, ಮೊದಲ ಎರಡು ಡೋಸ್‌ ಆಗಿ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಪಡೆದವರು ಕೂಡಾ ಇದನ್ನು ಪಡೆಯಬಹುದು ಎಂದು ಸರ್ಕಾರ ಹೇಳಿತ್ತು. ಆದರೆ ಲಸಿಕೆ ಉಚಿತ ಎಂದು ಇದುವರೆಗೆ ಸರ್ಕಾರ ಘೋಷಿಸಿಲ್ಲ.

click me!