ಪೋರ್ನ್‌ ನೋಡಿ ಹೆಣ್ಮಕ್ಕಳ ಹತ್ಯೆ, ಲೈಂಗಿಕ ಕಾರ್ಯಕರ್ತರಲ್ಲಿ ಸಾವಿನ ಭಯ!

First Published Sep 4, 2021, 4:14 PM IST

ಅಫ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ, ತಾಲಿಬಾನ್ ಹೋರಾಟಗಾರರು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಸದ್ಯ ತಾಲಿಬಾನಿಯರು ಪೋರ್ನ್‌ ಸೈಟ್‌ಗಳ ಮೂಲಕ ಅಫ್ಘಾನಿಸ್ತಾನದ ಲೈಂಗಿಕ ಕಾರ್ಯಕರ್ತರ ಹುಡುಕಾಟ ಆರಂಭಿಸಿದ್ದಾರೆ. ಅವರನ್ನು ಪತ್ತೆ ಹಚ್ಚಿ ಕೊಲ್ಲುವುದೇ ತಾಲಿಬಾನಿಯರ ಉದ್ದೇಶವಾಗಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿದ ಬಳಿಕ ಉಗ್ರ ಭೀತಿಯಿಂದ 1,20,000 ಕ್ಕೂ ಹೆಚ್ಚು ಜನರು ಕಾಬೂಲ್ ವಿಮಾನ ನಿಲ್ದಾಣದ ಮೂಲಕ ತಮ್ಮ ದೇಶ ಬಿಟ್ಟು ತೆರಳಿದ್ದಾರೆ. ಅಮೆರಿಕ ಮತ್ತು ಬ್ರಿಟನ್‌ಗೆ ಸಹಾಯ ಮಾಡಿದ್ದಕ್ಕಾಗಿ ತಮ್ಮನ್ನು ಉಗ್ರರು ಕೊಲ್ಲಬಹುದೆಂಬ ಭೀತಿಯಲ್ಲಿ ಹೀಗೆ ಪಲಾಯನ ಮಾಡಿದ್ದಾರೆನ್ನಲಾಗಿದೆ.
 

ತಾಲಿಬಾನಿಯರ ಟಾರ್ಗೆಟ್‌ ಸೆಕ್ಸ್‌ ವರ್ಕರ್ಸ್‌

ಮಾಧ್ಯಮ ವರದಿಗಳ ಪ್ರಕಾರ, ಕಳೆದ 20 ವರ್ಷಗಳಲ್ಲಿ ಈ ದಂಧೆ ಮೂಲಕ ಸಾಕಷ್ಟು ಹಣವನ್ನು ಗಳಿಸಿದ ಲೈಂಗಿಕ ಕಾರ್ಯಕರ್ತರು ಸದ್ಯ ತಾಲಿಬಾನಿಯರ ಟಾರ್ಗೆಟ್‌ ಎನ್ನಲಾಗಿದೆ. ಅಂಥವರನ್ನು ತಾಲಿಬಾನ್ ಹುಡುಕಿ ಕೊಲ್ಲುತ್ತಿದೆ. ದಿ ಸನ್ ವರದಿ ಪ್ರಕಾರ, ಕೆಲವರು ಸಾಮಾಜಿಕ ಜಾಲತಾಣ ಅಥವಾ ಅಂತರ್ಜಾಲದಿಂದ ಇಂತಹ ವಿಡಿಯೋಗಳನ್ನು ತೆಗೆಯುತ್ತಿದ್ದಾರೆ. ತಾಲಿಬಾನಿಯರು ಕೊಲ್ಲುತ್ತಾರೆಂಬ ಭೀತಿಯಲ್ಲಿ ಅನೇಕ ಲೈಂಗಿಕ ಕೆಲಸಗಾರರು ಈಗ ಅಫ್ಘಾನಿಸ್ತಾನದಲ್ಲಿ ಬದುಕಲು ಹೆದರುತ್ತಿದ್ದಾರೆ. ಯಾಕೆಂದರೆ ಮಹಿಳೆಯರು ಹಿಜಾಬ್‌ ಧರಿಸಿಕೊಂಡೇ ಇರಬೇಕು ಎಂದು ತಾಲಿಬಾನ್ ಸ್ಪಷ್ಟವಾಗಿ ಹೇಳಿದೆ.

ಕೊಲೆ ಮಾಡುವ ಮುನ್ನ ಸಾಮೂಹಿಕ ಅತ್ಯಾಚಾರದ ಭಯ

ಲೈಂಗಿಕ ಕಾರ್ಯಕರ್ತರು ಅಥವಾ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ, ತಾವು, ತಾಲಿಬಾನಿಗಳ ಕೈಗೆ ಸಿಲುಕಿದರೆ, ಮೊದಲು ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಶಿರಚ್ಛೇದ, ಕಲ್ಲೆಸೆದು ಅಥವಾ ಜೀವಂತವಾಗಿ ನೇಣು ಹಾಕುವ ಶಿಕ್ಷೆ ವಿಧಿಸುತ್ತಾರೆ ಎಂಬ ಭಯ ಇದೆ.

ಮಾಧ್ಯಮ ವರದಿಗಳ ಪ್ರಕಾರ, ತಾಲಿಬಾನ್ ಪೋರ್ನೋಗ್ರಫಿಯನ್ನು ನಿಂದಿಸುವಂತೆ ನಟಿಸುತ್ತದೆ. ಆದರೆ ಅವರೂ ಪೋರ್ನ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿರುವ ವಿಡಿಯೋದಲ್ಲಿ ಕಾಣುವ ಮಹಿಳೆಯರನ್ನು ತಮ್ಮ ಗುಲಾಮರನ್ನಾಗಿ ಮಾಡಲು ಅವಕಾಶ ಹುಡುಕುತ್ತಿರುತ್ತಾರೆನ್ನಲಾಗಿದೆ.

ಹ್ಯೂಮನ್ ರೈಟ್ಸ್ ವಾಚ್ ಏನು ಹೇಳಿದೆ?

ಹ್ಯೂಮನ್ ರೈಟ್ಸ್ ವಾಚ್ ಸಂಯೋಜಕ ಹೀದರ್ ಬಾರ್ರ್ ಈ ಬಗ್ಗೆ ಮಾತನಾಡುತ್ತಾ ತಾನು 2012 ರಲ್ಲಿ ಅಫ್ಘಾನಿಸ್ತಾನದ ಲೈಂಗಿಕ ಚಟುವಟಿಕೆ ಮೂಲಕ ಹಣ ಸಂಪಾದಿಸುವ ಮಹಿಳೆಯರನ್ನು ಮೊದಲು ಭೇಟಿಯಾಗಿದ್ದಾಗಿ ಹೇಳಿದ್ದಾರೆ. ಅವರೊಂದಿಗಿನ ಸಂಭಾಷಣೆ ಮೂಲಕ ಅವರನ್ನು ಆ ದಂಧೆಗೆ ಒತ್ತಾಯಪೂರ್ವಕವಾಗಿ ತಳ್ಳಲಾಗಿದೆ ಎಂದು ತಿಳಿದು ಬಂತು. ಬದುಕುಳಿಯಲು ಇದು ಅವರ ಏಕೈಕ ಆಯ್ಕೆಯಾಗಿತ್ತು ಎಂದಿದ್ದಾರೆ.

ಹೀದರ್ ಬಾರ್ರ್ ಪ್ರಕಾರ, ಲೈಂಗಿಕ ಕಾರ್ಯಕರ್ತರು ಪ್ರತಿ ಬಾರಿ ಗ್ರಾಹಕರಿಂದ ಸುಮಾರು 2 ಸಾವಿರ ರೂ. ಪಡೆಯುತ್ತಾರೆ. ಬಾರ್ರ್ ಪ್ರಕಾರ, ಪ್ರತಿ ಬಾರಿಯೂ ತಾನು ಹೆದರುತ್ತಿದ್ದೆ ಎಂದು ಲೈಂಗಿಕ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ. ಯಾಕೆಂದರೆ ಈ ದಂಧೆಯಲ್ಲಿ ಮಹಿಳೆಯೊಬ್ಬಳು ಕೋಣೆಯಲ್ಲಿ ಅಪರಿಚಿತ ಪುರುಷನೊಂದಿಗೆ  ಏಕಾಂಗಿಯಾಗಿರಬೇಕು. ಆತ ಆಕೆಗೇನು ಮಾಡುತ್ತಾನೆಂಬ ಭಯ ಯಾವತ್ತೂ ಇರುತ್ತದೆ ಎಂದಿದ್ದಾರೆ.

ಇಂತಹ ವೇಶ್ಯಾಗೃಹಗಳ ಬಗ್ಗೆ ಪೋರ್ನ್ ವಿಡಿಯೋಗಳಳ ಮೂಲಕ ತಾಲಿಬಾನಿಯರು ಮಾಹಿತಿ ಪಡೆಯುತ್ತಾರೆ. ಬಳಿಕ ಅವರ ಕೊಲೆಗೈಯ್ಯುತ್ತಾರೆ.

click me!