ಡೆಸ್ಕ್ ಮೇಲೆ ನಿದ್ದಿಗೆ ಜಾರಿದ ಉದ್ಯೋಗಿ ವಜಾ, ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ ಪರಿಹಾರ!

Published : Nov 24, 2024, 08:51 PM ISTUpdated : Nov 24, 2024, 08:54 PM IST
ಡೆಸ್ಕ್ ಮೇಲೆ ನಿದ್ದಿಗೆ ಜಾರಿದ ಉದ್ಯೋಗಿ ವಜಾ, ಕಾನೂನು ಹೋರಾಟದಲ್ಲಿ ಸಿಕ್ತು 4 ಕೋಟಿ ರೂ ಪರಿಹಾರ!

ಸಾರಾಂಶ

ಕಚೇರಿಯಲ್ಲಿ ತೂಕಡಿಸುತ್ತಿದ್ದ ಉದ್ಯೋಗಿ ಕೆಲಸದ ನಡುವೆ ಡೆಸ್ಕ್ ಮೇಲೆ ಮಲಗಿದ್ದಾನೆ. ಕೆರಳಿ ಕೆಂಡವಾದ ಕಂಪನಿ ಉದ್ಯೋಗಿಯ ವಜಾಗೊಳಿಸಿತ್ತು. ಆದರೆ ಕಂಪನಿ ವಿರುದ್ದ ಕಾನೂನು ಹೋರಾಟ ಮಾಡಿದ ಈತನಿಗೆ ಕಂಪನಿ ಬರೋಬ್ಬರಿ 4 ಕೋಟಿ ರೂ ಪರಿಹಾರ ನೀಡಿದೆ.

ಝೈಂಗ್ಸೂ(ನ.24) ಕಚೇರಿಯಲ್ಲಿ ಉದ್ಯೋಗಿಯೊಬ್ಬ ತೂಕಡಿಸಿದ್ದಾನೆ. ನಿದ್ದೆ ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಾಗೇ ಡೆಸ್ಕ್ ಮೇಲೆ ಮಲಗಿದ್ದಾನೆ. ಆದರೆ ಕೆಲಸದ ಸಮಯದಲ್ಲೇ ನಿದ್ದೆಗೆ ಜಾರಿದ ಉದ್ಯೋಗಿ ವಿರುದ್ಧ ಕೆಮಿಕಲ್ ಕಂಪನಿ ಕಠಿಣ ಕ್ರಮ ತೆಗೆದುಕೊಂಡಿದೆ. ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದೆ. ಆದರೆ ಕಂಪನಿ ವಿರುದ್ದ ಕಾನೂನು ಹೋರಾಟ ಮಾಡಿದ ಉದ್ಯೋಗಿಗೆ ಇದೀಗ ಪರಿಹಾರ ಸಿಕ್ಕಿದೆ. ಕಂಪನಿ ವಿರುದ್ಧ ಕೋರ್ಟ್ ಕಠಿಣ ಕ್ರಮ ಕೈಗೊಂಡಿದೆ. ಬರೋಬ್ಬರಿ 4 ಕೋಟಿ ರೂಪಾಯಿ ಪರಿಹಾರದ ರೂಪದಲ್ಲಿ ಉದ್ಯೋಗಿಗೆ ನೀಡುವಂತೆ ಆದೇಶಿಸಿದ ಘಟನೆ ಚೀನಾದ ಝೈಂಗ್ಸೂ ಪ್ರಾಂತ್ಯದಲ್ಲಿ ನಡೆದಿದೆ.

ಝ್ಹಾಂಗ್ ಅನ್ನೋ ಉದ್ಯೋಗಿ ಕಳೆದ 20 ವರ್ಷದಿಂದ ಕೆಮಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. 2004ರಲ್ಲಿ ಕೆಮಿಕಲ್ ಕಂಪನಿಗೆ ಸೇರಿಕೊಂಡಿದ್ದ. ಕೆಲಸ ಒತ್ತಡ, ಹೆಚ್ಚುವರಿ ಕೆಲಸ ಸೇರದಂತೆ ಹಲವು ಸವಾಲುಗಲನ್ನು ಝ್ಹಾಂಗ್ ಪ್ರತಿ ದಿನ ನಿಭಾಯಿಸುತ್ತಿದ್ದ. ಹೀಗಿರುವಾಗ ಕೆಲ ಉದ್ಯೋಗಿಗಳು ಕಂಪನಿ ತೊರೆದಿದ್ದರು. ಹೀಗಾಗಿ ಈ ಜವಾಬ್ದಾರಿಯೂ ಝ್ಹಾಂಗ್ ಹೆಗಲೇರಿತ್ತು. ತಡರಾತ್ರಿವರೆಗೂ ಕೆಲಸ ಮಾಡಿ ತೆರಳಿದ್ದ ಝ್ಹಾಂಗ್ ಮರುದಿನ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದ.

ಮುಂದೇನು ಮಾಡಲಿ? ಬೆಳಗ್ಗೆ 5 ಗಂಟೆಗೆ ಬಂದ ಇಮೇಲ್‌ಗೆ ಕಾರು ಕಂಪನಿ ನಿರ್ದೇಶಕ ಕಂಗಾಲು!

ಆದರೆ ಮಧ್ಯಾಹ್ನದ ವೇಳೆ ಝ್ಹಾಂಗ್ ತೂಕಡಿಸಲು ಆರಂಭಿಸಿದ್ದ. ಮುಖ ತೊಳೆದುಕೊಂಡು ಬಂದು ಮತ್ತೆ ಕೆಲಸ ಮಾಡಲು ಆರಂಭಿಸಿದ್ದ. ಆದರೆ ಸಾಧ್ಯವಾಗಿಲ್ಲ. ಏನೇ ಮಾಡಿದರೂ ನಿದ್ದೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲಸ ಮಾಡುತ್ತಿದ್ದ ಡೆಸ್ಕ್‌ನಲ್ಲಿ ಮಲಗಿದ್ದಾನೆ. ತೀವ್ರ ಸುಸ್ತು, ಸರಿಯಾಗಿ ನಿದ್ದೆ ಇಲ್ಲದ ಕಾರಣ ಝ್ಹಾಂಗ್ ಸುಮಾರು 1 ಗಂಟೆಗಳ ಕಾಲ ನಿದ್ರಿಸಿದ್ದಾನೆ. ಬಳಿಕ ಎದ್ದು ಕೆಲಸ ಮುಂದುವರಿಸಿದ್ದಾನೆ. ಮರುದಿನ ಬೆಳಗ್ಗೆ ಝ್ಹಾಂಗ್ ಕೆಲಸಕ್ಕೆ ಬಂದಾಗ ಕಂಪನಿ ಮ್ಯಾನೇಜ್ಮೆಂಟ್ ಗರಂ ಆಗಿತ್ತು.

ಸಿಸಿಟಿವಿ ದೃಶ್ಯಗಳನ್ನು ಪರಿಶೀಸಿಲಿದಾಗ ಝ್ಹಾಂಗ್ ನಿದ್ದೆ ಮಾಡುತ್ತಿರುವುದು ಪತ್ತೆಯಾಗಿದೆ. 1 ಗಂಟೆಗೂ ಹೆ್ಚ್ಚು ಕಾಲ ನಿದ್ದೆಗೆ ಜಾರಿರುವುದು ಕಂಪನಿ ಆಕ್ರೋಶಕ್ಕೆ ಕಾರಣಾಗಿದೆ. ತಕ್ಷಣವೆ ಝ್ಹಾಂಗ್‌ಗೆ ಇಮೇಲ್ ಮೂಲಕ ಕಾರಣ ನೀಡಿ ಕೆಲಸದಿಂದ ವಜಾ ಮಾಡಿದೆ. 2004ರಲ್ಲಿ ಕೆಲಸಕ್ಕೆ ಹಾಜರಾಗುವಾಗ ಕಂಪನಿಯ ಒಪ್ಪಂದ, ಷರತ್ತುಗಳಿಗೆ ಸಹಿ ಹಾಕಿದ್ದೀರಿ. ಆದರೆ ಕಚೇರಿ ಸಮಯದಲ್ಲಿ, ಕರ್ತವ್ಯದ ನಡುವೆ ಗಂಟೆಗಳ ಕಾಲ ಮಲಗಿದ್ದೀರಿ.ಈ ಮೂಲಕ ಕಂಪನಿಯ ಶೂನ್ಯ ಸಹಿಷ್ಣುತೆಗೆ ನಿಯಮವನ್ನು ಉಲ್ಲಘಿಸಿದ್ದೀರಿ. ಕಂಪನಿಯ ಸಮಯ ವ್ಯರ್ಥ ಮಾಡಿದ್ದೀರಿ. ಇದರಿಂದ ಉತ್ಪಾದಕತೆ ಕಡಿಮೆಯಾಗಿದೆ. ಇಂತಹ ನಡವಳಿಕೆಯನ್ನು ಕಂಪನಿ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಅಮಾನತು ಮಾಡಿರುವುದಾಗಿ ಇಮೇಲ್ ಮಾಡಲಾಗಿತ್ತು.

ನಿದ್ದೆ ಮಾಡಿದ ಕಾರಣಕ್ಕೆ ಏಕಾಏಕಿ ಕೆಲಸದಿಂದ ತೆಗೆದುಹಾಕಿದ ಕಂಪನಿ ವಿರುದ್ದ ಝ್ಹಾಂಗ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ. ಪ್ರಕರಣವನ್ನು ಪೀಪಲ್ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಕಚೇರಿಯಿಂದ ವರದಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿತ್ತು.ವಿಚಾರಣೆ ವೇಳೆ ಕೋರ್ಟ್ ಕಂಪನಿಗೆ ಛೀಮಾರಿ ಹಾಕಿತ್ತು. 20 ವರ್ಷಗಳಿಂದ ಕಂಪನಿಗಾಗಿ ದುಡಿದ್ದಾರೆ. ಕರ್ತವ್ಯ ಸಮಯದಲ್ಲಿ ಮಲಗುವುದು ಕಚೇರಿ ನಿಯಮದ ಪ್ರಕಾರ ತಪ್ಪು ಅನ್ನೋದು ಸರಿ. ಆದರೆ ಇದಕ್ಕೆ ಶಿಕ್ಷೆ ಈ ರೀತಿ ಕೊಡವುದು ಎಲ್ಲಿಯ ನ್ಯಾಯ. 2 ದಶಕಗಳಿಂದ ಕಂಪನಿಯಲ್ಲಿ ಕೆಲಸ ಮಾಡಿದ ವ್ಯಕ್ತಿಗೆ ಎಷ್ಟು ಪ್ರಮೋಶನ್ ನೀಡಿದ್ದೀರಿ. ವೇತನ ಎಷ್ಟು ಬಾರಿ ಹೆಚ್ಚಿಸಿದ್ದೀರಿ ಎಂದು ಪ್ರಶ್ನಿಸಿದೆ. ಮಲಗಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಕಲು ಕಾರಣವೇ ಅಲ್ಲ. ಹೀಗಾಗಿ ಮರು ಮಾತನಾಡದೇ ಉದ್ಯೋಗಿಗೆ 4 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಸ್ಯಾಲರಿ ಇಲ್ಲ, ನೀವೇ 20 ಲಕ್ಷ ಜೊಮ್ಯಾಟೋಗೆ ಕೊಡ್ಬೇಕು ಅಂದ್ರೂ ನೌಕರಿಗಾಗಿ ಬಂತು 10,000 ಅರ್ಜಿ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ