5ರ ಕಂದನ ರೇಪ್, ಹತ್ಯೆ: ನಾಲ್ವರು ಕಾಮುಕರು ಎನ್‌ಕೌಂಟರ್, ಮೂವರು ಪರಾರಿ!
First Published | Apr 26, 2020, 2:16 PM ISTಕೊರೋನಾ ವಿರುದ್ಧ ಸಮರ ಸಾರಿರುವ ವಿಶ್ವದಲ್ಲಿ ಸದ್ಯ ಬೇರಾವ ಸಮಸ್ಯೆಗಳು ಕಾಣದಿರಬಹುದು, ಆದರೆ ಸಂಭವಿಸುತ್ತಿರುವ ಕೆಲ ಘಟನೆಗಳು ಮನುಷ್ರನ್ನು ತಲೆ ತಗ್ಗಿಸುವಂತೆ ಮಾಡಿವೆ. ಸದ್ಯ ಪಾಕಿಸ್ತಾನದಲ್ಲಿ ಇಂತಹ ಘಟನೆ ವರದಿಯಾಗಿದೆ. ಕೊರೋನಾದಿಂದ ಬಲಲುತ್ತಿರುವ ಪಾಕಿಸ್ತಾನದಲ್ಲಿ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗಲೇ ಫೈಸಲಾಬಾದ್‌ನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಏಳು ಮಂದಿ ಕಾಮುಕರು, ಐದು ವರ್ಷದ ಪುಟ್ಟ ಮಗುವಿನ ರೇಪ್ ಮಾಡಿ, ಹತ್ಯೆಗೈದಿದ್ದಾರೆ. ಈ ಘಟನೆ ಬೆನ್ನಲ್ಲೇ ಇಲ್ಲಿನ ಸಿಪಿಓ ತೆಗೆದುಕೊಂಡ ನಿರ್ಧಾರಕ್ಕೆ ಸದ್ಯ ಎಲ್ಲರೂ ಭೇಷ್ ಎಂದಿದ್ದಾರೆ. ಹೌದು ಸಿಪಿಓ ಈ ಏಳು ಮಂದಿಯಲ್ಲಿ ನಾಲ್ವರನ್ನು ಎನ್‌ಕೌಂಡರ್ ಮಾಡಿದ್ದಾರೆ. ಆದರೆ ಮೂವರು ಅಪರಾಧಿಗಳು ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ. ಸದ್ಯ ವಿಶ್ವದೆಲ್ಲೆಡೆ ಸಿಪಿಓ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.