ಕರ್ನಾಟಕದಲ್ಲಿ ತಯಾರಾದ ಹೋಂಡಾ ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

Published : Nov 27, 2024, 08:33 PM IST

ಹೊಚ್ಚ ಹೊಸ ಹೋಂಡಾ ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಸ್ಕೂಟರ್ ನಿರ್ಮಾಣವಾಗಿರುವುದು ಕರ್ನಾಟಕದಲ್ಲಿ. ರಿವೋವೇಬಲ್ ಬ್ಯಾಟರಿ ಆಯ್ಕೆಯೂ ಲಭ್ಯವಿದೆ. ಈ ಹೊಸ ಸ್ಕೂಟರ್ ಮೈಲೇಜ್ ಸೇರಿದಂತೆ ಇತರ ಡಿಟೇಲ್ಸ್ ಇಲ್ಲಿದೆ.  

PREV
16
ಕರ್ನಾಟಕದಲ್ಲಿ ತಯಾರಾದ ಹೋಂಡಾ ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಹೋಂಡಾ ಆಕ್ಟಿವಾ ಇ ಮತ್ತು QC1 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. QC1 ಶಾಶ್ವತ ಬ್ಯಾಟರಿಯನ್ನು ಹೊಂದಿದೆ ಮತ್ತು ವಿದ್ಯುತ್ ಪಡೆಯಲು ಚಾರ್ಜಿಂಗ್ ಕೇಬಲ್ ಅನ್ನು ಅವಲಂಬಿಸಿದೆ, ಆದರೆ ಆಕ್ಟಿವಾ ಇ ಬದಲಾಯಿಸಬಹುದಾದ ಬ್ಯಾಟರಿ ವ್ಯವಸ್ಥೆಯನ್ನು ಬಳಸುತ್ತದೆ. 

26

ಹೋಂಡಾ ಆಕ್ಟಿವಾ ಇ ಸಂಪೂರ್ಣವಾಗಿ ಹೊಸ ಮಾದರಿಯಾಗಿದ್ದು, ಜನಪ್ರಿಯ ICE ಸ್ಕೂಟರ್‌ನ ಹೆಸರನ್ನು ಮುಂದುವರೆಸಿದೆ. ಇದು ಸ್ಕೂಟರ್‌ನ ಹೆಸರಿನ ಜೊತೆಗೆ ಅದರ ICE ಪ್ರತಿರೂಪದ ದೇಹ ಮತ್ತು ಚೌಕಟ್ಟನ್ನು ಅಳವಡಿಸಿಕೊಂಡಿದೆ. ಆದರೆ EV ಯ ವಿನ್ಯಾಸವು ಸಾಕಷ್ಟು ಭಿನ್ನವಾಗಿದೆ. ಆಕ್ಟಿವಾ ಇ ಸೀಟಿನ ಹಿಂದೆ ಬದಲಾಯಿಸಬಹುದಾದ ಬ್ಯಾಟರಿ ವ್ಯವಸ್ಥೆಯಲ್ಲಿ ಎರಡು 1.5 kWh ಬ್ಯಾಟರಿಗಳನ್ನು ಹೊಂದಿದೆ 

36

QC1 ಅನ್ನು ನಿರ್ದಿಷ್ಟವಾಗಿ ಭಾರತೀಯ ಮಾರುಕಟ್ಟೆಗಾಗಿ ಪರಿಚಯಿಸಲಾಗುವುದು. ಕಡಿಮೆ-ದೂರ ಪ್ರಯಾಣಕ್ಕಾಗಿ ಉದ್ದೇಶಿಸಲಾದ ಸ್ಕೂಟರ್‌ನ ಏಪ್ರನ್ ಮತ್ತು ಸೈಡ್ ಪ್ಯಾನೆಲ್‌ಗಳು ಆಕ್ಟಿವಾ ಇ ನೊಂದಿಗೆ ವಿನ್ಯಾಸ ಅಂಶಗಳನ್ನು ಹಂಚಿಕೊಳ್ಳುತ್ತವೆ.  QC1 1.5 kWh ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಫ್ಲೋರ್‌ಬೋರ್ಡ್‌ನ ಮೇಲಿರುವ ಕನೆಕ್ಟರ್ ಮೂಲಕ, ಸ್ಕೂಟರ್‌ನ್ನು ವಿಶೇಷ ಚಾರ್ಜರ್‌ಗೆ ಲಿಂಕ್ ಮಾಡಬಹುದು.

46

ಸ್ವಾಪ್ ಬ್ಯಾಟರಿ ಹೋಂಡಾ ಆಕ್ಟಿವಾ ಇ ಸ್ಕೂಟರ್‌ನಲ್ಲಿ 1.5 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು 5.6 bhp ಪವರ್ ನೀಡಲಿದೆ. ಈ ಪವರ್‌ನ್ನು ಗರಿಷ್ಠ 8 bhp ವರೆಗೂ ಮಾಡಬಹುದು. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಈ ಸ್ಕೂಟರ್ 102 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಸ್ಟಾಂಡರ್ಡ್, ಸ್ಪೋರ್ಟ್ ಹಾಗೂ ಇಕಾನ್ ರೈಡಿಂಗ್ ಮೂಡ್ ಹೊಂದಿದೆ.  

56

ಹೋಂಡಾ QC1 ಸ್ಕೂಟರ್‌ನಲ್ಲಿ ಫಿಕ್ಸೆಡ್ 1.5 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಚಾರ್ಜಿಂಗ್ ಸಾಕೆಂಟ್ ಮೂಲಕ ಪ್ಲಗ್ ಮಾಡಿ ಚಾರ್ಜ್ ಮಾಡಬೇಕು. 1.6 bhp ಪವರ್ ಹಾಗೂ 2.4 bhp ಪವರ್ ಆಯ್ಕೆ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 

66

ಆ್ಯಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್  LED ಹೆಡ್‌ಲ್ಯಾಂಪ್ಸ್, ಟರ್ನ್ ಇಂಡಿಕೇಟರ್, LED DRL, ರೇರ್ ಎಂಡ್‌ನಲ್ಲಿ ಆ್ಯಕ್ಚೀವಾ ಬ್ಯಾಡ್ಜ್ ಹೊಂದಿದೆ. QC1 ಸ್ಕೂಟರ್‌ನಲ್ಲಿ 5 ಇಂಚಿನ LCD ಇನ್ಸ್‌ಸ್ಟ್ರುಮೆಂಟ್ ಪ್ಯಾನೆಲ್ ಹೊಂದಿದೆ. ಇದು ರೈಡರ್‌ಗೆ ಮೈಲೇಡ್ ರೇಂಡ್, ಬ್ಯಾಟರಿ ಚಾರ್ಜ್ ಸೇರಿದಂತೆ ಹಲವು ಮಾಹಿತಿ ನೀಡುತ್ತದೆ. ಸೀಟಿನ ಕೆಳೆಗೆ ಸ್ಟೋರೇಜ್ ಸ್ಪೇಸ್, USB ಸಿ ಟೈಪ್ ಸಾಕೆಟ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

Read more Photos on
click me!

Recommended Stories