
ರಾಜ್ಯ ಕಮಲ ಪಾಳಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ನಾನಾ? ನೀನಾ ಅಂತರ್ಯುದ್ಧ ಶುರುವಾಗಿದೆ. ಡಿಸೆಂಬರ್‌ನಲ್ಲಿ ಕಮಲ ಕೋಟೆಯೊಳಗೆ ನಡೆಯುತ್ತಾ ಮಹಾಕ್ರಾಂತಿ ಎನ್ನುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ನ.27): ವಕ್ಫ್ ವಿರುದ್ಧದ ಯುದ್ಧದಲ್ಲಿ ಕಮಲಪಡೆ ಇಬ್ಭಾಗವಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಭಿನ್ನಾಬಿಪ್ರಾಯ ಮೊದಲಿಗಿಂತ ಹೆಚ್ಚು ನಿಚ್ಚಳವಾಗಿ ಕಾಣತೊಡಗಿದೆ.
ಅದರಲ್ಲೂ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಮನೆಯೊಂದು ಮೂರು ಬಾಗಿಲು ಅಂದಂತಾಗಿದೆ. ಕಮಲ ಕೋಟೆಯಲ್ಲಿ ಭಿನ್ನಮತದ ಬೆಂಕಿ ಧಗಧಗಿಸುತ್ತಿದ್ದು, ಮುಂದೇನು ಅನ್ನೋದು ರಾಜಕೀಯ ಕ್ಷೇತ್ರದ ಕುತೂಹಲವಾಗಿದೆ.
ಭಿನ್ನರಿಗೆ ಯಡಿಯೂರಪ್ಪ ವಾರ್ನಿಂಗ್: ಯತ್ನಾಳ್ ಟೀಂ ವಿರುದ್ಧ ಬಿಎಸ್‌ವೈ ಕಿಡಿ
ರಾಜ್ಯಾಧ್ಯಕ್ಷ ವಿಜಯೇಂಧ್ರ ವಿರುದ್ಧ ಯತ್ನಾಳ್ ಬಂಡಾಯವೆದ್ದು ತಮ್ಮದೇ ದಂಡು ಕಟ್ಟಿದ್ದಾರೆ. ಇನ್ನೊಂದೆಡೆ ರೆಬಲ್ ಯತ್ನಾಳ್ ವಿರುದ್ಧ ಅಧ್ಯಕ್ಷರ ಪಡೆ ಸಿಡಿದು ನಿಂತಿದೆ. ಏನೇ ಮಾಡಿದರೂ ಭಿನ್ನಮತ ಶಮನವಾಗ್ತಿಲ್ಲ ಅನ್ನೋದು ಹಿರಿಯ ನಾಯಕರ ಚಿಂತೆಯಾಗಿದ್ದರೆ, ಹೈಕಮಾಂಡ್‌ನತ್ತ ಕಾರ್ಯಕರ್ತರು ದೃಷ್ಟಿ ನೆಟ್ಟಿದ್ದಾರೆ.