ಕೊರೋನಾ ಬದಲಿಸಿದ ಫ್ಯಾಷನ್ ಟ್ರೆಂಡ್: ಬ್ರೇಸಿಯರ್ಸ್‌ಗೂ ನಾರಿ ಹೇಳುತ್ತಿದ್ದಾಳೆ ಗುಡ್ ಬೈ!

First Published Jun 22, 2020, 4:17 PM IST

ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗ ಕಾಲಿಟ್ಟಿದ್ದೇ ಕಾಲಿಟ್ಟಿದ್ದು, ಯಾವುದು ಅಸಾಧ್ಯ ಎನಿಸುತ್ತಿತ್ತೋ, ಅವೆಲ್ಲವನ್ನೂ ಸಾಧ್ಯವಾಗಿಸಿದೆ. ನೈಟ್ ಕ್ಲಬ್, ಸೋಷಿಯಲ್ ಗ್ಯಾದರಿಂಗ್  ಸೇರಿ ಹತ್ತು ಹಲವು ಚಟುವಟಿಕೆಗಳಿಗೆ ಫುಲ್ ಸ್ಟಾಪ್ ಇಟ್ಟಾಗಿದೆ. ಇದನ್ನು ನಂಬಿಯೇ ಜೀವನ ನಡೆಸುತ್ತಿದ್ದ ಹಲವರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಅದರಿಲಿ, ಬಟ್ಟೆ ವ್ಯಾಪಾರವೂ ಕಳೆಗುಂದಿದೆ. ಮಾಸ್ಕ್‌ ಕೊಳ್ಳುವುದೀಗ ಟ್ರೆಂಡ್. ಅಷ್ಟೇ ಅಲ್ಲ ಮಹಿಳೆಯರೂ ಧರಿಸುವ ಬ್ರೇಸಿಯರ್ಸ್‌ಗೂ ಕೊರೋನಾ ವೈರಸ್ ತಂದಿದೆ ಕುತ್ತು. ಮನೆಯಿಂದಾನೇ ಕೆಲಸ ಹಾಗೂ ಜನರೊಂದಿಗೆ ಬೆರೆಯಲಾಗದ ಮಹಿಳೆಯರು ಬ್ರಾ ತೊಡುವುದನ್ನೂ ನಿಲ್ಲಿಸಿದ್ದಾರಂತೆ! ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ #WorkFromHome ಫೋಟೋಗಳಲ್ಲಿ ಮಹಿಳೆಯರು ಬ್ರಾ ಇಲ್ಲದೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಫ್ಯಾಷನ್ ಲೋಕದಲ್ಲಿ ವಿಶೇಷ ಸ್ಥಾನ ಪಡೆದ ಬ್ರಾ ಬಗ್ಗೆ ಮಹಿಳೆಯರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. 

ಬ್ರಾ ತೊಡುವ ಸಾಧಕ ಬಾಧಕಗಳ ಬಗ್ಗೆ ಹತ್ತು ಹಲವು ಥಿಯರಿಗಳಿವೆ. ಕೆಲವರು ಈ ಒಳ ಉಡುಪು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದರೆ, ಮತ್ತೆ ಕೆಲವರು ಇದು ಕೇವಲ ಸೌಂದರ್ಯ ಹೆಚ್ಚಿಸುವ ಒಂದು ಉಡುಗೆಯೇ ಹೊರತು, ಸ್ತನಗಳ ಆರೋಗ್ಯಕ್ಕೆ ಒಳ್ಳೇಯದಲ್ಲವೆನ್ನುತ್ತಾರೆ.
undefined
ಆರಾಮಾಗಿ, ಸುಲಭವಾಗಿ ಉಸಿರಾಡುವಂತೆ ನೆರವಾಗಲು ಇದೀಗ ಮನೆಯಿಂದಾನೇ ಕಾರ್ಯ ನಿರ್ವಹಿಸುವ ಮಹಿಳೆಯರು ಈ ಔಟ್‌ಫಿಟ್‌ಗೆ ಬೈ ಹೇಳುತ್ತಿದ್ದಾರೆ. ಈ ಬೆನ್ನಲ್ಲೇ ಬ್ರಾ ತೊಡುವ ಅಗತ್ಯತೆ ಬಗ್ಗೆಯೂ ಚರ್ಚೆ ಮುನ್ನಲೆಗೆ ಬಂದಿದೆ.
undefined
ಬ್ರಾ ತೊಡದೇ 14 ದಿನಗಳು ಕಳೆದವು. ಆರಾಮಾಗಿರುವ ಅನುಭವ ನೀಡುತ್ತಿದೆ, ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದರು. ಈ ಟ್ವೀಟಿಗೆ ಹಲವರು ಧ್ವನಿಗೂಡಿಸಿದ್ದರು.
undefined
ಕೇವಲ ಒಂದು ರೂಮ್ ಅಥವಾ ಮನೆಗೆ ಲಾಕ್‌ಡೌನ್ ಸೀಮಿತಗೊಳಿಸುತ್ತಿದ್ದು, ವರ್ಕ್ ಫ್ರಂ ಹೋಂ ನ್ಯೂ ನಾರ್ಮಲ್‌ನ ಹೊಸ ಭಾಗವಾಗಿದೆ. ಆ ಕಾರಣದಿಂದ ಮಹಿಳೆಯ ಜೀವನಶೈಲಿಯೇ ಬದಲಾಗಿದ್ದು, ಫ್ಯಾಷನ್ ಬಗೆಗಿನ ವ್ಯಾಖ್ಯಾನವೇ ಬದಲಾಗಿದೆ. ಜೋತು ಬೀಳುವ ಸ್ತನಗಳ ಆಕೆಗೀಗ ತಲೆ ಬಿಸಿಯೇ ಇಲ್ಲ.
undefined
ಪ್ಯಾಂಟ್‌ನಂಥ ಉಡುಪಿಲ್ಲದೇ, ಬ್ರಾಲೆಸ್, ಮೇಕಪ್ ಇಲ್ಲದೇ ದಿನ ಕಳೆಯುವುದು ಹೆಣ್ಣೀಗಿಗ ಯೂಸ್ ಆಗಿದೆ.
undefined
ಟಿವಿ ಪರ್ಸನಲಾಟಿ ಪದ್ಮಾವತಿ 'ಅಡುಗೆ ಮಾಡುವಾಗ ಬ್ರಾ ಹಾಕಿ ಕೊಳ್ಳದಿರುವುದು ಅನೈತಿಕ' ಎಂದು ಹೇಳಿದ್ದಕ್ಕೆ ಮಹಿಳಾ ಮಣಿಗಳು ವಿರೋಧ ವ್ಯಕ್ತಪಡಿಸಿದ್ದರು. '2020ರಲ್ಲಿ ಮಹಿಳೆಯ ದೇಹವನ್ನು ಜಡ್ಜ್ ಮಾಡುವಂತಿಲ್ಲ,' ಎಂದೇ ಹಲವರು ಅಭಿಪ್ರಾಯ ಪಟ್ಟಿದ್ದಾರೆ.
undefined
ಫ್ಯಾಷನೇಬಲ್ ಬ್ರೇಸಿಯರ್ಸ್ ಮಾರಾಟವೂ ಗಣನೀಯವಾಗಿ ಇಳಿಮುಖವಾಗಿದ್ದು, ಬದಲಾಗಿ ಆರಾಮಾದಾಯಕ ಒಳ ಉಡುಪಿಗೆ ಮಾತ್ರ ಡಿಮ್ಯಾಂಡ್ ಕ್ರಿಯೇಟ್ ಆಗಿದೆ, ಎಂದು ಪ್ರಸಿದ್ಧ ಒಳ ಉಡುಪು ಮಾರಾಟಗಾರರಾದ ಲಿಂಗರೀ ಹೇಳಿಕೊಂಡಿದೆ. ಈ ಟ್ರೆಂಡ್ ಇನ್ನೂ ಹಲವು ತಿಂಗಳ ಕಾಲ ಮುಂದುವರಿಯುತ್ತದೆ, ಎಂಬುವುದು ಫ್ಯಾಷನ್ ಪ್ರಿಯರ ಅಂಬೋಣ.
undefined
ಮತ್ತೊಂದು ಅಧ್ಯಯನ ಬ್ರಾ ತೊಡದೇ ಹೋದರೆ ಕೂಪರ್ಸ್ ಲಿಗಮೆಂಟ್ ಅಂದರೆ ಸ್ತನದ ಕೆಳಗಿನ ಅಸ್ತಿಗೆ ಅಪಾಯವೆಂದು ಹೇಳಲಾಗುತ್ತಿದೆ. ಗುರುತ್ವಾಕರ್ಷಣ ಬಲದಿಂದ ಸ್ತನದ ಸೌಂದರ್ಯವೇ ಕುಂದಲಿದ್ದು, ಜೋತು ಬೀಳಲಿದೆ ಎಂದೂ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
undefined
ಆದರೆ, 15 ವರ್ಷಗಳ ಕಾಲ ನಡೆದ ಸುದೀರ್ಘ ಅಧ್ಯಯನವೊಂದು 2013ರಲ್ಲಿ ಹೊರ ಬಿದ್ದಿದ್ದು, ಬ್ರಾ ತೊಡುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ. ಇದು ಸ್ತನವನ್ನು ಆಧಾರವಾಗಿರುವ ಮಾಂಸಖಂಡಗಳ ಆರೋಗ್ಯಕ್ಕೆ ಅಪಾಯವೆಂದಿದೆ.
undefined
ವೈದ್ಯಕೀಯವಾಗಿ, ಶಾರೀರಿಕವಾಗಿ ಹಾಗೂ ಅಂಗರಚನಾ ಶಾಸ್ತ್ರದ ಪ್ರಕಾರವೂ ಗುರುತ್ವಾಕರ್ಷಣ ಪ್ರಭಾವ ಸ್ತನದ ಮೇಲೆ ಬೀಳುವುದಿಲ್ಲ. ಬದಲಾಗಿ ಬ್ರೇಸಿಯರ್ಸ್ ಧರಿಸುವುದರಿಂದ ಸ್ತನ ಸೌಂದರ್ಯವೇ ಹಾಳಾಗೋ ಸಾಧ್ಯತೆಗಳು ಹೆಚ್ಚಂತೆ.
undefined
ಅಲ್ಲದೇ ಚಿಕ್ಕ ವಯಸ್ಸಿನ ಯುವತಿಯರೂ ಬ್ರಾ ಧರಿಸುವುದನ್ನು ನಿಲ್ಲಿಸಿದಾಗ, ಅವರ ಸ್ತನ ವಿರೂಪಗೊಂಡಿಲ್ಲವೆಂದು ಅಧ್ಯಯನ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ ಸ್ತನ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ಬ್ರೇಸಿಯರ್ ಬಳಸುವುದೇ ಹೊರತು, ಅದರಿಂದ ಆರೋಗ್ಯಕ್ಕೆ ಒಳ್ಳೇದಲ್ಲ, ಎಂದಾಯಿತು.
undefined
ಅದರಲ್ಲಿ ಕಪ್ಪು ಬಣ್ಣದ ಒಳ ಉಡುಪು ಹಾಗೂ ನಮ್ಮ ತ್ವಚೆಗೆ ಹೊಂದಿಕೊಳ್ಳದ ಕ್ವಾಲಿಟಿ ಇದ್ದರೆ ಅನಾರೋಗ್ಯ ಕಾಡುವುದು ಗ್ಯಾರಂಟಿ. ಅತೀ ಬಿಗಿಯಾದ ಬ್ರೇಸಿಯರ್ಸ್ ಉಸಿರಾಟದ ಸಮಸ್ಯೆ ತಂದಿಡುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ ಆರೋಗ್ಯಕ್ಕೆ ಹೊಂದಿಕೊಳ್ಳುವಂಥ, ಆರೋಗ್ಯದಾಯಕ ಅನುಭವ ನೀಡುವಂಥ ಒಳ ಉಡುಪಿನ ಆಯ್ಕೆಗೆ ಮಹಿಳೆಯರು ಆದ್ಯತೆ ನೀಡುವುದು ಒಳಿತು.
undefined
click me!