ಭಾವಿ ಸೊಸೆ ಮುಂದೆ ಅಖಿಲಾಂಡೇಶ್ವರಿ ಸುಸ್ತು! ನಿಜಕ್ಕೂ ಇಂಥವರು ಸಿಕ್ರೆ ಏನಪ್ಪಾ ಅಂತಿದ್ದಾರೆ ಅತ್ತೆಯಂದಿರು!

By Suvarna News  |  First Published May 5, 2024, 1:43 PM IST

ಮಹಾನಟಿ ರಿಯಾಲಿಟಿ ಷೋನಲ್ಲಿ ಅಖಿಲಾಂಡೇಶ್ವರಿ ಎದುರು ಭಾವಿ ಸೊಸೆ ನಡೆದುಕೊಂಡ ರೀತಿ ನೋಡಿ ಫ್ಯಾನ್ಸ್​ ಸುಸ್ತಾಗಿದ್ದಾರೆ. ಏನೆಲ್ಲಾ ಹೇಳಿದ್ರು ನೋಡಿ...
 


ಅಖಿಲಾಂಡೇಶ್ವರಿ ಎಂದರೆ ಥಟ್ ಅಂತ ಎಲ್ಲರ ಕಣ್ಣ ಮುಂದೆ ಬರುವುದು ಈಚೆಗಷ್ಟೇ ಮುಗಿದಿರುವ ಜೀ ಕನ್ನಡ ವಾಹಿನಿಯ ಸೀರಿಯಲ್​ ಪಾರು. ಗತ್ತಿನ ಅತ್ತೆ ಅಖಿಲಾಂಡೇಶ್ವರಿ ಪಾತ್ರದಲ್ಲಿ ಮಿಂಚಿದವರು ವಿನಯಾ ಪ್ರಸಾದ್​. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಮಹಾನಟಿ ರಿಯಾಲಿಟಿ ಷೋನಲ್ಲಿ ವಿವಿಧ ಕಲಾವಿದೆಯರು ನಟಿಯಾಗುವ ಕನಸು ಹೊತ್ತು ಇಲ್ಲಿಗೆ ಬಂದಿದ್ದಾರೆ. ಇವರ ಪೈಕಿ ಹಲವರು ಅದ್ಭುತ ನಟನೆ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇವರಿಗೆ ಪ್ರತಿವಾರವೂ ಒಂದೊಂದು ಟಾಸ್ಕ್​ ನೀಡಲಾಗುತ್ತದೆ. ಇದರಲ್ಲಿ ಈ ಬಾರಿ ಸ್ಪರ್ಧಿ ಧನ್ಯಶ್ರೀ ಅವರಿಗೆ ಅಖಿಲಾಂಡೇಶ್ವರಿಯ ಭಾವಿ ಸೊಸೆಯ ರೋಲ್​ ನೀಡಲಾಗಿದೆ. 

ಭಾವಿ ಅತ್ತೆಯನ್ನು ಹೇಗೆ ಇಂಪ್ರೆಸ್​ ಮಾಡಬೇಕು ಎನ್ನುವುದು ಧನ್ಯಶ್ರೀ ಅವರಿಗೆ ಇರುವ ಟಾಸ್ಕ್​. ಅದಕ್ಕಾಗಿ ಭಾವಿ ಅತ್ತೆಯ ಮನೆಗೆ ಬಂದಿದ್ದಾರೆ ಧನ್ಯಶ್ರೀ. ಆಗ ಅಖಿಲಾಂಡೇಶ್ವರಿ ಅರ್ಥಾತ್​ ವಿನಯಾ ಪ್ರಸಾದ್​ ಅವರು ಏನು ನನ್ನ ಮಗ ಸಂತೋಷ್​ ಹೇಳಿದ ಹುಡುಗಿ ತಾನೇ ಎಂದು ಕೇಳುತ್ತಾರೆ. ಅದಕ್ಕೆ ಧನ್ಯಶ್ರೀ ಹೌದು ಎನ್ನುತ್ತಲೇ ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ವಿನಯಾ ಅವರು ಎದ್ದು ನಿಂತಿರುತ್ತಾರೆ. ಆಗ ಸಿಟ್ಟಿಗೆದ್ದ ಈ ಭಾವಿ ಅತ್ತೆ, ನಿಮ್ಮ ಮನೆಯಲ್ಲಿ ದೊಡ್ಡವರು ನಿಂತಿದ್ದಾಗ, ಚಿಕ್ಕವರು ಕುಳಿತುಕೊಳ್ಬಾರ್ದು ಅಂತ ಹೇಳಿಕೊಟ್ಟಿಲ್ವಾ ಎಂದು ಕೇಳುತ್ತಾರೆ. ಕೂಡಲೇ ಧನ್ಯಶ್ರೀ, ಸಾರಿ ಆಂಟಿ ಕೂತ್ಕೊಳಿ ಎಂದು ಅವರನ್ನು ಕುಳ್ಳರಿಸುತ್ತಾರೆ. 

Tap to resize

Latest Videos

ಪತ್ನಿ ವಿರುದ್ಧ ಹೋಗೋ ಮುನ್ನ ಒಂದ್ಸಲ ಹೀಗೂ ಯೋಚಿಸಿ ನೋಡ್ರಪ್ಪೋ ಗಂಡಂದಿರಾ...!

ಆಗ ಅಖಿಲಾಂಡೇಶ್ವರಿ ಉರ್ಫ್​ ವಿನಯಾ ಪ್ರಸಾದ್​, ಈ ಮದ್ವೆ ನಡೆಯುತ್ತೆ ಎಂದು ಅಂದ್ಕೊಂಡಿದ್ದಿಯಾ ಎಂದಾಗ ಈ ಭಾವಿ ಸೊಸೆ, ಆಫ್​ ಕೋರ್ಸ್​... ಮದ್ವೆಯಾಗ್ತಿರೋದು ನಾನು ಮತ್ತು ನಿಮ್​ ಮಗ ಎನ್ನುತ್ತಾರೆ. ಆಗ ಅಖಿಲಾಂಡೇಶ್ವರಿ ಈ ಮದ್ವೆ ಹೇಗೆ ನಡೆಯುತ್ತೆ ಎಂದು ನಾನೂ ನೋಡ್ತೀನಿ ಎಂದಾಗ ಧನ್ಯಶ್ರೀ, ವೇಟ್​ ಆ್ಯಂಡ್​ ವಾಚ್​ ಎನ್ನುತ್ತಾ ಹೋಗುತ್ತಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಇದನ್ನು ನೋಡಿ ವೀಕ್ಷಕರು ಇಬ್ಬರ ಅಭಿನಯವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ವಿನಯಾ ಅವರಂತೂ ಹಿರಿಯ ನಟಿ. ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ ಬಿಡಿ. ಅವರಿಗೆ ಸರಿಸಾಟಿಯಾಗಿ ನಿಂತು ಈಗ ತಾನೇ ಎಂಟ್ರಿ ಕೊಟ್ಟಿರೋ ಧನ್ಯಶ್ರೀ ಅವರ ಅಭಿನಯಕ್ಕೂ ಜನರು ಭೇಷ್​ ಎಂದಿದ್ದಾರೆ. ಇದೇ ವೇಳೆ ಇದೇನೋ ರಿಯಾಲಿಟಿ ಷೋ. ಅದರೆ ಈಗಿನ ಹೆಣ್ಣುಮಕ್ಕಳು ಬಹುತೇಕ ಮಂದಿ ಹೀಗೇ ಇರೋದು ಬಿಡಿ. ನಮಗೂ ಇಂಥ ಸೊಸೆ ಸಿಕ್ರೆ ಏನಪ್ಪಾ ಮಾಡೋದು ಎಂದು ಹಲವರು ತಮಾಷೆಯ ಕಮೆಂಟ್​ ಹಾಕುತ್ತಿದ್ದಾರೆ. 

ಎದೆ ಮೇಲಿಂದ ಜಾರಿ ಬೀಳ್ತಿರೋ ಶೆರ್ಲಿನ್​ ಬಟ್ಟೆ: ವಿಡಿಯೋ ನೋಡಿ ಬಂದು ಸರಿ ಮಾಡ್ಲಾ ಕೇಳ್ತಿದ್ದಾರೆ ಫ್ಯಾನ್ಸ್​!

click me!