ಮಹಿಳೆಯರೇ..ಈ ಲಕ್ಷಣಗಳು ಕಾಣಿಸಿಕೊಳ್ತಿದ್ರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ..!

By Vinutha Perla  |  First Published May 5, 2024, 9:02 AM IST

ಆರೋಗ್ಯ ಸಮಸ್ಯೆಗಳು ಯಾವಾಗ ಮತ್ತು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ನಾವು ಆರೋಗ್ಯವಾಗಿದ್ದೇವೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತೇವೆ ಎಂಬ ಭ್ರಮೆಯಲ್ಲಿ ಅನೇಕ ಜನರು ಇರುತ್ತಾರೆ. ಆದರೆ ಮಹಿಳೆಯರೇ, ಈ ಲಕ್ಷಣಗಳು ಕಾಣಿಸಿಕೊಳ್ತಿದ್ರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಆರೋಗ್ಯ ಸಮಸ್ಯೆಗಳು ಯಾವಾಗ ಮತ್ತು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ನಾವು ಆರೋಗ್ಯವಾಗಿದ್ದೇವೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತೇವೆ ಎಂಬ ಭ್ರಮೆಯಲ್ಲಿ ಅನೇಕ ಜನರು ಇರುತ್ತಾರೆ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಿದ್ದರೆ ನಮಗೆ ಮೊದಲೇ ಗೊತ್ತಾಗುವುದಿಲ್ಲ. ಆದರೆ, ಕೆಲವು ಲಕ್ಷಣಗಳ ಮೂಲಕ ದೋಷವನ್ನು ಅಥವಾ ಆರೋಗ್ಯ ಸಮಸ್ಯೆಯನ್ನು ಮೊದಲೇ ಪತ್ತೆ ಹಚ್ಚಬಹುದು. 

ಇತ್ತೀಚೆಗೆ ಅನೇಕ ಮಹಿಳೆಯರು ವಿಟಮಿನ್ ಬಿ12 ಕೊರತೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ವಿಟಮಿನ್ ಬಿ 12 ಇದ್ದರೆ, ನಮಗೆ ಉತ್ತಮ ಶಕ್ತಿ ಇರುತ್ತದೆ. ನರವೈಜ್ಞಾನಿಕ ಕಾರ್ಯವು ಸಾಮಾನ್ಯವಾಗಿರುತ್ತದೆ. ಇಲ್ಲದಿದ್ದರೆ ವಿಪರೀತ ಸುಸ್ತು, ಆಯಾಸ, ತಲೆಸುತ್ತುವಿಕೆ ಮೊದಲಾದ ಸಮಸ್ಯೆಗಳು ಕಾಡುತ್ತವೆ. ಹಾಗಿದ್ರೆ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿದ್ದರೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ತಿಳಿಯೋಣ.

Latest Videos

ಥೈರಾಯ್ಡ್‌ ಮಟ್ಟ ದೇಹದಲ್ಲಿ ಸಾಕಷ್ಟಿಲ್ಲವಾದರೆ ಬೆಳಗ್ಗೆ ಎದ್ದಾಕ್ಷಣ ಹೀಗೆಲ್ಲ ಆಗುತ್ತೆ, ಗಮನಿಸಿ

ಆಲಸ್ಯ ಹೆಚ್ಚು
ವಿಟಮಿನ್ ಬಿ 12 ಕೊರತೆಯಿರುವ ಜನರು ಆಲಸ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ರೆಸ್ಟ್ ತೆಗೆದುಕೊಂಡರೂ ಆ ಸೋಮಾರಿತನ ಹೋಗುವುದಿಲ್ಲ. ಏಕೆಂದರೆ ನಮ್ಮಲ್ಲಿ ವಿಟಮಿನ್ ಬಿ12 ಇದ್ದರೆ, ನಮಗೆ ಆಲಸ್ಯ ಅನಿಸುವುದಿಲ್ಲ. ತುಂಬಾ ಎನರ್ಜಿಟಿಕ್ ಆಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ತೀರಾ ಆಲಸ್ಯ ಕಾಡುತ್ತಿದ್ದರೆ, ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ರಕ್ತಹೀನತೆ
ವಿಟಮಿನ್ ಬಿ 12 ಕೊರತೆಯು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆಗೆ ಕಾರಣವಾಗುತ್ತದೆ. ಇದರಿಂದಾಗಿ ಇದರ ದೋಷವು ಚರ್ಮದ ಮೇಲೆ ಗೋಚರಿಸುತ್ತದೆ. ಅವು ತಿಳಿ ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.ಅಂದರೆ ಕೆಂಪು ರಕ್ತ ಕಣಗಳ ಉತ್ಪಾದನೆಯು ಕಡಿಮೆಯಾಗಿದೆ ಎಂದರ್ಥ. ಅಂದರೆ ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಇದು ಚರ್ಮದ ಮೇಲೆ ಗೋಚರಿಸುತ್ತದೆ.

ನರವೈಜ್ಞಾನಿಕ ಸಮಸ್ಯೆ
ವಿಟಮಿನ್ ಬಿ 12 ಕೊರತೆಯು ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ನರಗಳ ದೌರ್ಬಲ್ಯವು ವಿಶೇಷವಾಗಿ ಕಾಲುಗಳು ಮತ್ತು ಪಾದಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಅಂತಹ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಪರೀಕ್ಷೆಗೆ ಒಳಗಾಗಬೇಕು ಮತ್ತು ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಸ್ವಲ್ಪವೂ ನಿರ್ಲಕ್ಷಿಸಬಾರದು.

ಯೋನಿಗೆ ಬಿಸಿ ನೀರು ಬಳಕೆ ಎಷ್ಟು ಸುರಕ್ಷಿತ, ಮಹಿಳೆಯರಿಗೊಂದಿಷ್ಟು ಕಿವಿ ಮಾತು!

ನಡೆಯಲು ಕಷ್ಟ
ವಿಟಮಿನ್ ಬಿ12 ಕೊರತೆಯಿಂದ ಜನರು ನಡೆಯಲು ತುಂಬಾ ಕಷ್ಟಪಡುತ್ತಾರೆ. ವಿಪರೀತ ಕಾಲು ನೋವಿನ ಸಮಸ್ಯೆಯಿಂದ ಹೆಚ್ಚು ನಡೆಯಲು ಸಾಧ್ಯವಾಗುವುದಿಲ್ಲ. ಇದು ಸ್ಪಷ್ಟವಾಗಿ ವಿಟಮಿನ್‌ ಬಿ12 ಕೊರತೆಯನ್ನು ಸೂಚಿಸುತ್ತದೆ.

ಮರೆವಿನ ಸಮಸ್ಯೆ
ವಿಟಮಿನ್ ಬಿ 12 ಕೊರತೆಯಿರುವ ಜನರು ಎಲ್ಲವನ್ನೂ ಮರೆತುಬಿಡುತ್ತಾರೆ. ಕೇವಲ ಸಣ್ಣ ವಿಷಯವಲ್ಲ, ದೊಡ್ಡ ವಿಷಯಗಳನ್ನು ಸಹ ಮರೆತುಬಿಡುತ್ತಾರೆ. ಯಾವುದೇ ವಿಷಯದಲ್ಲಿ ಏಕಾಗ್ರತೆ ಇರುವುದಿಲ್ಲ. ಮೆದುಳಿನ ಕಾರ್ಯವು ನಿಧಾನವಾಗಿ ಕ್ಷೀಣಿಸುತ್ತದೆ.

ಮೂಡ್‌ ಸ್ವಿಂಗ್ಸ್‌
ವಿಟಮಿನ್ ಬಿ 12 ಕೊರತೆಯಿರುವ ಜನರಲ್ಲಿ ಮೂಡ್ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಹೆಚ್ಚಾಗಿ ಬೇಗನೇ ಸಿಟ್ಟಾಗುತ್ತಾರೆ. ಯಾವುದೇ ವಿಷಯದ ಬಗ್ಗೆ ಆತಂಕ ಹೆಚ್ಚಿರುತ್ತದೆ. ಇದಲ್ಲದೆ ವಿಟಮಿನ್‌ ಬಿ12 ಕೊರತೆ ದೇಹದಲ್ಲಿ ಹೆಚ್ಚಿದ್ದಾಗ ಬಾಯಿ ಹುಣ್ಣಿನ ಸಮಸ್ಯೆ ಹೆಚ್ಚಾಗುತ್ತದೆ. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

click me!