ರಕ್ತ ಬಸಿದು ಪಕ್ಷ ಕಟ್ಟಿದ್ದರು ದಣಿವರಿಯದ ದೇವೇಗೌಡರು! ಅಜ್ಜ ಕಟ್ಟಿದ ಪಕ್ಷಕ್ಕೆ ಕಂಟಕ ತಂದಿಟ್ಟನಾ ಮೊಮ್ಮಗ..?

ರಕ್ತ ಬಸಿದು ಪಕ್ಷ ಕಟ್ಟಿದ್ದರು ದಣಿವರಿಯದ ದೇವೇಗೌಡರು! ಅಜ್ಜ ಕಟ್ಟಿದ ಪಕ್ಷಕ್ಕೆ ಕಂಟಕ ತಂದಿಟ್ಟನಾ ಮೊಮ್ಮಗ..?

Published : May 05, 2024, 04:52 PM IST

ಅಜ್ಜ ನೆಟ್ಟು ಬೆಳೆಸಿದ ಆಲದ ಮರಕ್ಕೆ ಮೊಮ್ಮಗನಿಂದಲೇ ಕೊಡಲಿ ಪೆಟ್ಟು..!
ಪ್ರಜ್ವಲ್ ಪ್ರಕರಣ ಜೆಡಿಎಸ್‌ಗೆ  ಕಳಂಕವೂ ಹೌದು, ಕಂಟಕವೂ ಹೌದು..!
ಪೆನ್‌ಡ್ರೈವ್ ಬಾಂಬ್ ಬೆಂಕಿ.. ಜೆಡಿಎಸ್ ಕೋಟೆಯಲ್ಲಿ ಜ್ವಾಲಾಮುಖಿ..!
ಜೆಡಿಎಸ್ ತೊರೆಯಲು ತೆರೆಮರೆಯಲ್ಲಿ ಸಿದ್ಧವಾಗ್ತಿದ್ಯಾ ಶಾಸಕರ ದಂಡು..?

ಆಡಿಸಿ ನೋಡು, ಬೀಳಿಸಿ ನೋಡು..ಇದು ದೇವೇಗೌಡರ(HD Devegowda) ರಾಜಕೀಯ ಚದುರಂಗದಾಟದ ಕಥೆ. ಆ ಚದುರಂಗದಲ್ಲಿ ಜೆಡಿಎಸ್(JDS) ಎದ್ದು-ಬಿದ್ದು ಪುಟಿದೆದ್ದು ನಿಂತ ರೋಚಕ ಕಥೆ. ಜೆಡಿಎಸ್ ಪಕ್ಷಕ್ಕಾಗಿ ದೇವೇಗೌಡರ ಹೋರಾಟ ಎಂಥದ್ದು ಅನ್ನೋದಕ್ಕೆ ಇದೊಂದು ಸಾಕ್ಷಿ ಸಾಕು. ಜೆಡಿಎಸ್.. ಅಂದ್ರೆ ಜಾತ್ಯಾತೀತ ಜನತಾದಳ ಹರದನಹಳ್ಳಿ ದೊಡ್ಡಗೌಡ ದೇವೇಗೌಡರ ಛಲದ ಪ್ರತೀಕ. ದೇವೇಗೌಡ್ರು ಅಂದ್ರೆ ಹೋರಾಟ, ಹೋರಾಟ ಅಂದ್ರೆ ದೇವೇಗೌಡ್ರು. ಹಾಸನ(Hassan) ಜಿಲ್ಲೆಯ ಹೊಳೆನರಸೀಪುರದ ಒಬ್ಬ ಸಾಮಾನ್ಯ ರೈತನ ಮಗ ದೇಶದ ಪ್ರಧಾನಿಯಾಗ್ತಾರೆ, ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅದು ದೇವೇಗೌಡರ ಶಕ್ತಿ ಮತ್ತು ತಾಕತ್ತು. ರಾಜಕೀಯದಲ್ಲಿ ಗೌಡ್ರನ್ನು ಭೀಷ್ಮಾಚಾರ್ಯ, ಚದುರಂಗದ ಚಾಣಕ್ಯ ಅಂತ ಕರೀತಾರೆ. ಛಲ ಅನ್ನೋ ಪದಕ್ಕೆ ಸಮಾನಾಂತರ ಅರ್ಥ ಅಂತ ಏನಾದ್ರೂ ಇದ್ರೆ ಅದು ಎಚ್.ಡಿ ದೇವೇಗೌಡ. ಇಂಥಾ ದೇವೇಗೌಡರು ಕಟ್ಟಿದ ಪಕ್ಷ ಜೆಡಿಎಸ್. ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣನದ್ದು(Prajwal Revanna) ಎನ್ನಲಾಗ್ತಿರೋ ಅಶ್ಲೀಲ ವೀಡಿಯೊ ಪ್ರಕರಣ ಪೆಟ್ಟು ಕೊಟ್ಟಿರೋದು ದೇವೇಗೌಡರ ಕುಟುಂಬಕ್ಕಷ್ಟೇ ಅಲ್ಲ, ಜೆಡಿಎಸ್ ಪಕ್ಷಕ್ಕೂ ದೊಡ್ಡ ಕಂಟಕ ಎದುರಾಗಿದೆ. ಈ ಪ್ರಕರಣ ಬೆಳಕಿಗೆ ಬರ್ತಾ ಇದ್ದಂತೆ, ವೀಡಿಯೊ ಬಾಂಬ್ ಸ್ಫೋಟಗೊಳ್ತಾ ಇದ್ದಂತೆ ಗೌಡರ ಮನೆಯಲ್ಲಿ ಬಿರುಗಾಳಿ ಎದ್ದಿದ್ರೆ, ಜೆಡಿಎಸ್ ಕೋಟೆಯೊಳಗೆ ಸುನಾಮಿಯೇ ಎದ್ದು ಬಿಟ್ಟಿದೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಗ್ಯಾರಂಟಿಯಿಂದ ಜೋಶಿ ಗೆಲುವು ಕಷ್ಟನಾ? ಮೋದಿ ಬೈತಾರೆ ಆದ್ರೂ ಬಂಡತನದಿಂದ ಬರ್ತೀವಿ!

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more