ಶಾಸಕರಿಗೂ ಎರಡು ತಿಂಗಳಿಗೊಮ್ಮೆ ಸಂಬಳ, ಈ ಸರಕಾರದಲ್ಲಿ ನಾವೂ ಸಂತ್ರಸ್ತರೆ: ಮಾಜಿ ಸಚಿವ ಸಿಸಿ ಪಾಟೀಲ

By Ravi Janekal  |  First Published May 5, 2024, 8:02 PM IST

ಗ್ಯಾರಂಟಿ ಯೋಜನೆ ಜಾರಿ ಮಾಡಿ ಖಜಾನೆ ಖಾಲಿಯಾಗಿದೆ. ಇದ್ರಿಂದಾಗಿ ಶಾಸಕರ ಸಂಬಳವನ್ನೂ ಕೋಡೋದಕ್ಕೆ ಆಗ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ, ನರಗುಂದ ಶಾಸಕ ಸಿಸಿ ಪಾಟೀಲ ಕಿಡಿಕಾರಿದರು.


ಗದಗ (ಮೇ.5): ಗ್ಯಾರಂಟಿ ಯೋಜನೆ ಜಾರಿ ಮಾಡಿ ಖಜಾನೆ ಖಾಲಿಯಾಗಿದೆ. ಇದ್ರಿಂದಾಗಿ ಶಾಸಕರ ಸಂಬಳವನ್ನೂ ಕೋಡೋದಕ್ಕೆ ಆಗ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ, ನರಗುಂದ ಶಾಸಕ ಸಿಸಿ ಪಾಟೀಲ ಕಿಡಿಕಾರಿದರು.

ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವ್ರು, ಸರ್ಕಾರದ ಖಜಾನೆ ಖಾಲಿಯಾಗಿದೆ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ ಅಂತಾ ಸವಾಲು ಹಾಕಿದ್ರು. ಸಿದ್ದರಾಮಯ್ಯ(Siddaramaiah) ಒಬ್ಬ ಆರ್ಥಿಕ ತಜ್ಞ, ಅವ್ರು ಯಾಕೆ ಗ್ಯಾರಂಟಿ(Guarantee scheme) ಘೋಷಣೆಯಾಗುವಾಗ ಆರ್ಥಿಕತೆ ವಿಷಯವಾಗಿ ಕಾಂಪ್ರಮೈಸ್ ಮಾಡಿಕೊಂಡರು ಗೊತ್ತಿಲ್ಲ. ಬಡವರಿಗೆ ಭಾಗ್ಯಗಳನ್ನ ಕೊಡುವುದಕ್ಕೆ ವಿರೋಧವಿಲ್ಲ. ಆದರೆ ಇದಕ್ಕೆ ತಗಲುವ ವೆಚ್ಚ ಎಷ್ಟು ಅಂತಾ ಸಿದ್ದರಾಮಯ್ಯ ನೋಡಬೇಕಿತ್ತು. ಬೊಮ್ಮಾಯಿ ಅಧಿಕಾರದಿಂದ ಕೆಳಗಿಳಿಯುವಾಗ 25 ಸಾವಿರ ಕೋಟಿ ರೂಪಾಯಿ ಅನುದಾನ ಖಜಾನೆಯಲ್ಲಿತ್ತು. ಅದು ಖಾಲಿಯಾಗಿ 1 ಲಕ್ಷ 85 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬಸ್ ಫ್ರೀ ಅಂದ್ರು 10 ಬಸ್ ಓಡುವಲ್ಲಿ ನಾಲ್ಕು ಬಸ್ ಓಡುತ್ತಿವೆ. ಕೆಟ್ಟ ಬಸ್ ರಿಪೇರಿ ಮಾಡಲು ಹಣ ಇಲ್ಲ, ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ‌ ಎಂದು ಶಕ್ತಿ ಯೋಜನೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ರು. 

Tap to resize

Latest Videos

undefined

ಮೋದಿಯವರ ಮನ್ ಕೀ ಬಾತ್ ಕೇಳಿ ಕಿವೀಲಿ ರಕ್ತ ಬಂದಿದೆ: ಬಿಜೆಪಿ ವಿರುದ್ಧ ಲಾಡ್ ವಾಗ್ದಾಳಿ

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ.. 

ಪ್ರಜ್ವಲ್ ಪೆನ್ ಡ್ರೈವ್ ಕೇಸ್ (Prajwal Revanna sex scandal case) ಗೆ ಸಂಬಂಧಿಸಿದಂತೆ  ಕಾನೂನು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದೆ. ಪ್ರಜ್ವಲ್ ರೇವಣ್ಣ ಬರುತ್ತಾರೆ ಅನ್ನೊ ಮಾಹಿತಿ ಇದೆ. ಅವರನ್ನೂ ವಶಕ್ಕೆ ಪಡೆದು ಎಸ್ ಐಟಿ(SIT) ವಿಚಾರಣೆ ನಡೆಸುತ್ತೆ. ತನಿಖೆ ಪೂರ್ಣವಾಗ್ಲಿ ಸತ್ಯ ಹೊರಬರಲಿ. ತಪ್ಪಾಗಿದ್ರೆ ಶಿಕ್ಷೆಯಾಗಲಿ ಎಂದರು.

ಪೆನ್ ಡ್ರೈವ್ ಕೇಸ್(Hassan mp Prajwal pendrive case) ನಿಂದ ಬಿಜೆಪಿಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಸಿಪಿ, ಪ್ರಜ್ವಲ್ ಕೇಸ್ ಬಿಜೆಪಿಗೆ ಪರಿಣಾಮ ಬೀರಲ್ಲ. ಆದ್ರೆ ಘಟನೆಯಾಗಬಾರದಿತ್ತು ಅನ್ನೋ ನೋವಿದೆ.. ದೇಶದ ಮಾಜಿ ಪ್ರಧಾನಿ ಈ ವಯಸ್ಸಿನಲ್ಲಿ ಯಾತನೆ ಅನುಭವಿಸುವಂತಾಯಿತು. ಆದ್ರೆ, ಅದಕ್ಕೂ ಬಿಜೆಪಿಗೆ ಸಂಬಂಧ ಇಲ್ಲ ಅಂತಾ ಸ್ಪಷ್ಟಪಡಿಸಿದ್ರು. ಪೆನ್ ಡ್ರೈವ್ ಪ್ರಕರಣ ಕಾಂಗ್ರೆಸ್ ಸಪೋರ್ಟ್ ಮಾಡಿ ಗೆಲ್ಲಿಸಿದಾಗ ಆಗಿದ್ದು. ಹೀಗಾಗಿ ಕಾಂಗ್ರೆಸ್  ಇದಕ್ಕೆ ಉತ್ತರ ಕೊಡಬೇಕಾಗಿದೆ ಎಂದರು. ಈ ಪ್ರಕರಣದ ಬಗ್ಗೆ ಗೊತ್ತಿಲ್ಲ. ಗೊತ್ತಿದ್ದರೆ ಮೈತ್ರಿಯ ಅವಶ್ಯಕತೆ ಇರುತ್ತಿರಲಿಲ್ಲ ಅಂತಾನೂ ಹೇಳಿದ್ರು. ಪ್ರಜ್ವಲ್ ರೇವಣ್ಣ ವಿಷಯ ಬಹಳ ಎಳೆಯುವುದು ಬೇಡ.. ಕುಮಾರಸ್ವಾಮಿ ಅವರೇ ಹೇಳಿದ್ದಾರೆ.. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದರು.

ಕೊವಿಡ್ ಲಸಿಕೆಯ ಸೈಡ್ ಎಫೆಕ್ಟ್ ನಿಂದ ಸಾವು ಎಂಬ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಸಿ ಪಾಟೀಲ, ಅಸಹಾಯಕನ ಕೊನೆ ಅಸ್ತ್ರ ಅಪಪ್ರಚಾರ.. ನಾನು ಕೊವಿಶೀಲ್ಡ್ ಮೂರು ಡೋಸ್ ತೆಗೆದುಕೊಂಡಿದ್ದೇನೆ.. ಗೋವಿಂದ ಕಾರಜೋಳ ಕೈಹಿಡಿದು ಕರೆದುಕೊಂಡು ಹೋಗಿ ಲಸಿಕೆ ಪಡೆದ್ವಿ.. ಪ್ರಿಯಾಂಕಾ ಗಾಂಧಿನೂ ತೆಗೆದುಕೊಂಡಿರಬಹುದು ಆದ್ರೀಗ ಕೊವಿಡ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ.. ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಾಗಿದೆ ಎಂದ್ರು.. ಲಸಿಕೆ ಪಡೆದು ಸತ್ತ ಒಂದಾದ್ರೂ ಉದಾಹರಣೆ ಬೇಕಲ್ಲ.. ಲಸಿಕೆಯಿಂದ ಸಾವಾಗಿದ್ರೆ ಮಾಧ್ಯಮದವರು ಸುಮ್ಮನೆ ಬಿಡ್ತಿದ್ರಾ ಎಂದು ಪ್ರಶ್ನೆ ಮಾಡಿದ್ರು..

'ಶಾಸಕ ಆಗೋಕೆ ನನ್ನ ಬಳಿ ದುಡ್ಡು ತಗೊಂಡು ಬಂದವನು, ನನಗೆ ಅವನೊಬ್ಬ ಆಫ್ಟ್ರಾಲ್' ಸಚಿವ ತಂಗಡಗಿ ವಿರುದ್ಧ ರೆಡ್ಡಿ ವಾಗ್ದಾಳಿ

ಯಾವುದೇ ಸಮಯದಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಡಿವೈಡ್ ಆಗುತ್ತೆ ಅಂತಾ ಭವಿಷ್ಯ ನುಡಿದ ಮಾಜಿ ಸಚಿವ ಸಿಸಿ ಪಾಟೀಲ, ಕೆಲವೇ ದಿನದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ.. ಸೋಲಿನ ಹೊಣೆ ಹೊತ್ತು‌ ಸಿದ್ಧರಾಮಯ್ಯ ರಾಜೀನಾಮೆ ನೀಡುವ ಪ್ರಸಂಗ ಬರುತ್ತೆ ಎಂದ್ರು.. ಅಲ್ದೆ, ಯಾವುದೇ ಸಮಯದಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರಬಹುದು.. ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆ ಅಂತಾ ವಿಶ್ವಸ ವ್ಯಕ್ತ ಪಡಿಸಿದ್ರು.

click me!