Mothers Day: ಅಮ್ಮಂದಿರ ಬಾಯಲ್ಲಿ ಬರೋ ಈ ಡೈಲಾಗ್ಸ್‌ ಸಿನಿಮಾದಲ್ಲೂ ಟ್ರೆಂಡ್‌

By Suvarna NewsFirst Published May 4, 2024, 7:05 PM IST
Highlights

ಅಮ್ಮಂದಿರ ದಿನ ಹತ್ತಿರ ಬರ್ತಿದೆ. ಮೇ.12 ರಂದು ಅಮ್ಮಂದಿರ ದಿನವನ್ನು ಆಚರಿಸಲಾಗ್ತಿದೆ. ತಾಯಂದಿರ ಕೆಲ ಡೈಲಾಗ್ಸ್‌ ಭಾರತದಲ್ಲಿ ಪ್ರಸಿದ್ಧಿಯಾಗಿದೆ. ಮಕ್ಕಳನ್ನು ಬೆಳೆಸುವ ಸಮಯದಲ್ಲಿ ತಾಯಂದಿರು ಹೇಳುವ ಮಾತುಗಳು ಸಿನಿಮಾದಲ್ಲೂ ಫೇಮಸ್.‌ 
 

ತಾಯಿ ಎಂಬ ಈ ಒಂದು ಪದದಲ್ಲಿ ಇಡೀ ವಿಶ್ವವೇ ಅಡಕವಾಗಿದೆ. ದೇವರ ನಂತರ ಯಾರಿಗಾದರೂ ಈ ಸ್ಥಾನಮಾನ ಸಿಕ್ಕಿದ್ದರೆ ಅದು ಅಮ್ಮನಿಗೆ ಮಾತ್ರ. ಅವಳ ಮಡಿಲಲ್ಲಿ ಪ್ರೀತಿಯ ಸಾಗರ ತುಂಬಿದೆ. ನೀವು ಕೋಟ್ಯಾಂತರ ರೂಪಾಯಿ ಹಣ ನೀಡಿದ್ರೂ ನಿಮಗೆ ತಾಯಿ ಸಿಗಲು ಸಾಧ್ಯವಿಲ್ಲ. ಅಮ್ಮ ಸದಾ ನಮ್ಮನ್ನು ಪೋಷಿಸುವ ದೇವತೆ. ಅಮ್ಮನ ಬೈಗುಳ, ಪ್ರೀತಿಯ ಹೊಡೆತವಿಲ್ಲದೆ ಬೆಳೆಯದ ಮಕ್ಕಳಿಲ್ಲ. ಅಮ್ಮ ಎಷ್ಟೇ ಬೈದರೂ ಮಕ್ಕಳು ಅದನ್ನು ಗಂಭೀರವಾಗಿ ಸ್ವೀಕರಿಸೋದಿಲ್ಲ. ಭಾರತೀಯ ಅಮ್ಮಂದಿರ ಬೈಗುಳದಲ್ಲಿ ಕೆಲ ಡೈಲಾಗ್‌ ಸೇರಿದೆ. ಪ್ರತಿಯೊಬ್ಬ ಅಮ್ಮ ಒಂದಲ್ಲ ಒಂದು ಸಂದರ್ಭದಲ್ಲಿ ಆ ಡೈಲಾಗ್‌ ಹೇಳ್ತಾಳೆ. 

ತಾಯಿ (Mother) ಯ ಪ್ರಾಮುಖ್ಯತೆ ನಮ್ಮ ಜೀವನದಲ್ಲಿ ಮಾತ್ರವಲ್ಲದೆ ಬಾಲಿವುಡ್ (Bollywood) ಚಿತ್ರಗಳಲ್ಲಿಯೂ ಇದೆ. ಅಮ್ಮಂದಿರ ಈ ಮಾತುಗಳೇ ಸಿನಿಮಾ (movie) ಡೈಲಾಗ್‌ ಆಗಿವೆ. ಈಗ ಅಮ್ಮಂದಿರು ಈ ಮಾತನ್ನಾಡಿದ್ರೆ ನಮಗೆ ಸಿನಿಮಾ ಡೈಲಾಗ್‌ ನೆನಪಾಗುತ್ತದೆ.  ಆ ಸಿನಿಮಾ ಡೈಲಾಗ್‌ ಹೇಳ್ತಿದ್ದೀಯಾ ಎಂದು ಮಕ್ಕಳು ತಾಯಿಯ ಕಾಲು ಎಳೆಯುವ ಪ್ರಯತ್ನ ಮಾಡ್ತಾರೆ. ವಾಸ್ತವವಾಗಿ ಅದು ಸಿನಿಮಾ ಡೈಲಾಗ್‌ ಅಲ್ಲ, ತಾಯಂದಿರ ಮಾತು.  ನಾವಿಂದು ಬಹುತೇಕ ಅಮ್ಮಂದಿರುವ ಒಂದಲ್ಲ ಒಂದು ಸಮಯದಲ್ಲಿ ಹೇಳುವ ಮಾತುಗಳನ್ನು ನಿಮ್ಮ ಮುಂದಿಡುತ್ತೇವೆ.

ದೀಪಿಕಾ ಗರ್ಭಧಾರಣೆಗೆ ತಲೆ ಕೆಡಿಸಿಕೊಳ್ತಿರೋ ಫ್ಯಾನ್ಸ್​! ಮಗು ಹೆರುವುದು ನಿಜನಾ, ಅಲ್ವಾ ಅನ್ನೋದೇ ಡೌಟು...

ಅಮ್ಮಂದಿರುವ ಹೇಳುವ ಸಾಮಾನ್ಯ ಡೈಲಾಗ್‌ :
ಇದನ್ನು ಕೇಳೋಕೆ ಅಥವಾ ನೋಡೋಕೆ ನಾನು ನಿನ್ನನ್ನು ಬೆಳೆಸಿದ್ದಾ? :
ಮಕ್ಕಳು ಅಮ್ಮನ ಮಾತಿಗೆ ತಿರುಗಿ ಹೇಳಿದಾಗ ಇಲ್ಲವೆ ಅಮ್ಮನ ಮಾತನ್ನು ನಿರಾಕರಿಸಿದಾಗ ತಾಯಿಯಾದವಳು ಹೇಳುವ ಸಾಮಾನ್ಯ ಮಾತುಗಳಲ್ಲಿ ಇದೂ ಒಂದು. ನಿನ್ನ ಬಾಯಿಂದ ಈ ಮಾತನ್ನು ಕೇಳೋಕೆ ಅಥವಾ ಈ ಘಟನೆಯನ್ನು ನೋಡೋಕಾ ನಾನು ನಿನ್ನನ್ನು ಬೆಳೆಸಿದ್ದು ಎಂದು ಅಮ್ಮಂದಿರು ಹೇಳ್ತಿರುತ್ತಾರೆ. ಸಿನಿಮಾದಲ್ಲೂ ಈ ಡೈಲಾಗ್‌ ಪ್ರಸಿದ್ಧಿಯಾಗಿದೆ.

ತರಕಾರಿ ಬೆಲೆ ಎಷ್ಟು ದುಬಾರಿ ಆಗಿದೆ ಅನ್ನೋದು ನಿನಗೆ ಗೊತ್ತಾ? : ಮನೆಯಲ್ಲಿ ಮಕ್ಕಳು ಸರಿಯಾಗಿ ಆಹಾರ ತಿನ್ನೋದಿಲ್ಲ, ಅಮ್ಮ ಮಾಡಿದ ಅಡುಗೆ ಅವರಿಗೆ ರುಚಿಸೋದೇ ಕಷ್ಟ. ಅಲ್ಪ ಸ್ವಲ್ಪ ತಿಂದು ಉಳಿದಿದ್ದನ್ನು ಬಿಡ್ತಾರೆ. ಇಲ್ಲವೇ ರುಚಿಯಾದ ಆಹಾರ ತಯಾರಿಸುವಂತೆ ಅಮ್ಮನನ್ನು ಪೀಡಿಸುತ್ತಿರುತ್ತಾರೆ. ಈ ಸಮಯದಲ್ಲಿ ಕೋಪ ಮಾಡಿಕೊಳ್ಳುವ ತಾಯಂದಿರು, ಮಕ್ಕಳು ಬುದ್ದಿ ಕಲಿಯಲಿ ಎನ್ನುವ ಕಾರಣಕ್ಕೆ ತರಕಾರಿ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಹೇಳುವ ಮೂಲಕ ಮಕ್ಕಳಿಗೆ ತಿಳುವಳಿಕೆ ನೀಡುವ ಪ್ರಯತ್ನ ನಡೆಸುತ್ತಾರೆ. 

ಗಾಯವಾದಾಗ ಮನುಷ್ಯನ ಬಾಯಿಂದ ಬರೋದು ಅಮ್ಮನ ಹೆಸರು ಮಾತ್ರ : ತಾಯಿ ಒಪ್ಪಿಗೆ ಇಲ್ಲದೆ ಯಾವುದಾದ್ರೂ ಕೆಲಸ ಮಾಡಲು ಮಕ್ಕಳು ಹೋದಾಗ ಮುಂದೆ ಅಮ್ಮ ಎನ್ನಬೇಡ, ನನಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವ ಅಮ್ಮ, ತೊಂದರೆ ಅನುಭವಿಸಿ ಮನೆಗೆ ಬಂದು ಅಮ್ಮ ಎನ್ನುವ ಮಕ್ಕಳಿಗೆ ಈ ಡೈಲಾಗ್‌ ಹೇಳ್ತಾಳೆ. ಬೇಡ ಎಂದ್ರೂ ತಪ್ಪು ಮಾಡಿ ಈಗ ಅಮ್ಮ ಅಮ್ಮ ಎನ್ನುತ್ತಿದ್ದೀಯಾ, ಗಾಯವಾದಾಗ್ಲೇ ನಿಮಗೆ ಅಮ್ಮನ ಬೆಲೆ ತಿಳಿಯೋದು ಎನ್ನುತ್ತಾಳೆ ತಾಯಿ.

ಹೆಂಗಸರು ಕಣ್ಣೀರು ಹಾಕಿದ ತಕ್ಷಣ ಕರಗಿಹೋಗ್ಬೇಡ್ರೋ... ಹೀಗೂ ಆಗತ್ತೆ ನೋಡಿ: ರಾಮ್ ​ಉದಾಹರಣೆ ಕೊಡ್ತಿದ್ದಾರೆ ಸೀರಿಯಲ್​ ಫ್ಯಾನ್ಸ್

ತಾಯಂದಿರ ದಿನ : ಮೇ. 12 ರಂದು ಪ್ರತಿ ವರ್ಷ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿಯೂ ತಾಯಂದಿರ ದಿನಕ್ಕೆ ವಿಶೇಷ ತಯಾರಿ ನಡೆಯುತ್ತಿದೆ. ಎಲ್ಲ ಮಕ್ಕಳು ತಮ್ಮ ತಾಯಿಗೆ ವಿಶ್‌ ಮಾಡೋದಲ್ಲದೆ ವಿಶೇಷ ಉಡುಗೊರೆ ನೀಡುವ ತಯಾರಿ ನಡೆಸಿದ್ದಾರೆ. ಮತ್ತೆ ಕೆಲವರು ತಾಯಿ ನೆನೆದು ಕಣ್ಣೀರು ಹಾಕ್ತಾರೆ. ನೀವೂ ಈ ವಿಶೇಷ ದಿನವನ್ನು ತಾಯಿಗೆ ಅರ್ಪಿಸಬೇಕು ಎಂದಿದ್ದಲ್ಲಿ ಅದಕ್ಕೆ ಈಗ್ಲೇ ಪ್ಲಾನ್‌ ಮಾಡಿ.  

click me!