ಅಮೃತವರ್ಷಿಣಿ (Amrutha Varshini) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಜಿನಿ, ಆ ಧಾರಾವಾಹಿ ಮೂಲಕ ಕರ್ಣಾಟಕದ ಮನೆ ಮಾತಾದರು. ಇಂದಿಗೂ ಕೂಡ ಜನ ರಜಿನಿಯನ್ನು ಗುರುತಿಸೋದೆ ಅವರ ಅಮೃತ ಪಾತ್ರದಿಂದ. ಹೆಚ್ಚಾಗಿ ಇವರನ್ನು ಅಮೃತ ಅಂತಾನೆ ಕರೀತಾರೆ ಜನ.
ಅಮೃತವರ್ಷಿಣಿ ಸೀರಿಯಲ್ ಬಳಿಕ ನಟನೆಯಿಂದ ದೂರವೇ ಉಳಿದಿದ್ದ ರಜಿನಿ (Rajini), ಆಗೊಮ್ಮೆ ಈಗೊಮ್ಮೆ ತೆರೆ ಮೇಲೆ ಕಂಡದ್ದು ಬಿಟ್ಟರೆ, ಯಾವುದೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿಯೇ ಇರಲಿಲ್ಲ. ಹಲವು ವರ್ಷಗಳ ನಂತ್ರ ಅಂಬುಜಾ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಎಂಟ್ರಿ ಕೊಟ್ಟಿದ್ದರು ಇವರು.
ಅಂಬುಜಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಒಳ್ಳೆಯ ಸಂದೇಶ ಕೊಡುವ ಸಿನಿಮಾದಲ್ಲಿ ರಜಿನಿ ನಾಯಕಿ ಅಂಬುಜಾ ಆಗಿ ನಟಿಸಿದ್ದರು. ಅಮೃತವರ್ಷಿಣಿ ಸೀರಿಯಲ್ ಮಾಡುತ್ತಿದ್ದಾಗಲೇ ಹೆಚ್ಚು ಸಿನಿಮಾ ಆಫರ್ ಬರುತ್ತಿದ್ದರೂ, ನಟಿ, ಸೀರಿಯಲ್ ನಲ್ಲಿ ಹೆಚ್ಚು ಬ್ಯುಸಿ ಇದ್ದ ಕಾರಣ ಸಿನಿಮಾ ಒಪ್ಪಿಕೊಂಡಿರಿರಲಿಲ್ವಂತೆ.
ಇದಾದ ನಂತರ ರಜಿನಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler Kalyana) ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿ ಅಂತರಾ ಎಂಬ ನೆಗೆಟೀವ್ ಕ್ಯಾರೆಕ್ಟರ್ನಲ್ಲಿ ಇವರು ಮಿಂಚಿದ್ದರು, ಬಳಿಕ ರೇಣುಕಾ ಎಲ್ಲಮ್ಮ ಸೀರಿಯಲ್ ನಲ್ಲೂ ಮಿಂಚಿದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ನಟಿ.
ಹೌದು ರಜಿನಿ ಸೋಶಿಯಲ್ ಮೀಡಿಯಾದಲ್ಲೀ ಆಕ್ಟೀವ್ ಆಗಿರುವ ನಟಿ. ಇವರು ಹೆಚ್ಚಾಗಿ ಡ್ಯಾನ್ಸ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ರೀಲ್ಸ್ ಮಾಡುತ್ತಿರುತ್ತಾರೆ,, ಅಷ್ಟೇ ಅಲ್ಲ ತಮ್ಮ ವರ್ಕ್ ಔಟ್ (workout)ರುಟೀನ್ ಗಳ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನೂ ಕೂಡ ಕೊಡ್ತಿರ್ತಾರೆ. ಜೊತೆಗೆ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿಕೊಂಡು ಫೋಟೋ ಹಂಚಿಕೊಳ್ಳುವ ರಜಿನಿ, ಮಾರ್ಡನ್, ಟ್ರೆಡಿಶನಲ್ ವೇರ್ ಧರಿಸಿ, ಫೋಟೋ ತೆಗೆಯುವುದರ ಜೊತೆಗೆ ಅದಕ್ಕೊಂದು ಇಂಟ್ರೆಸ್ಟಿಂಗ್ ಕ್ಯಾಪ್ಶನ್ ಕೂಡ ಕೊಡುತ್ತಾರೆ. ಈ ಬಾರಿ ನಟಿ ಸಖತ್ ಮಾಡರ್ನ್ ಡ್ರೆಸಲ್ಲಿ ಮಿಂಚಿದ್ದಾರೆ.
ಬಿಳಿ ಬಣ್ಣದ ಚಿಕನ್ ಕಾರಿ ಶಾರ್ಟ್ ಡ್ರೆಸಲ್ಲಿ ಮಿಂಚುತ್ತಿರುವ ರಜಿನಿ ಅದಿಕ್ಕೆ ಬಂದರಿನಲ್ಲಿ ನಿಲ್ಲಿಸಿದ ಹಡಗು ಸುರಕ್ಷಿತ ನಿಜ. ಆದರೆ, ಅದರ ಉದ್ದೇಶ ಅದಲ್ಲವಲ್ಲ. ಬದುಕೂ ಹಾಗೆಯೇ, ಕಟ್ಟಿ ಹಾಕಿಕೊಂಡರೆ ವೇಸ್ಟ್..ಶುಭ ದಿನ ಎಂದು ಒಂದೊಳ್ಳೆ ಸಂದೇಶ ಕೊಡುವ ಅಡಿಬರಹ (caption) ಹಾಕಿಕೊಂಡಿದ್ದಾರೆ. ಒಬ್ಬರು ಕಾಮೆಂಟ್ ಮಾಡಿ ಬಿಳಿ ಡ್ರೆಸಲ್ಲಿ ನೀವು ಸುಂದರವಾದ ಬಿಳಿ ನವಿಲಿನಂತೆ ಕಾಣಿಸ್ತಿದ್ದೀರಿ. ಗಾರ್ಜಿಯಸ್ ಆಗಿ ಕಾಣಿಸ್ತಿದ್ದೀರಾ, ಏಂಜಲ್, ಸೌಂದರ್ಯ ರಾಶಿಗೆ ಮತ್ತೊಂದು ಮೆರಗು ನಮ್ಮ ರಜಿನಿ ಎಂದಿದ್ದಾರೆ.
ರಜಿನಿ ಈ ಫೋಟೋಗಳಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನು ಹೊಗಳುತ್ತಿದ್ದಾರೆ. ನಿಮ್ಮ ಸೆಕ್ಸಿ ಫಿಗರ್, ಆ ಆಕರ್ಷಕ ಕಣ್ಣುಗಳು ನಿಮ್ಮ ನಗು, ವಾವ್ ಎಲ್ಲವೂ ಅದ್ಭುತವಾಗಿದೆ. ಈ ಡ್ರೆಸಲ್ಲಿ ತುಂಬಾನೇ ಚೆನ್ನಾಗಿ ಕಾಣಿಸುತ್ತೀರಿ ಎಂದು ಹೊಗಳಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವಂತೆ ಸಲಹೆ ಕೂಡ ಕೊಟ್ಟಿದ್ದಾರೆ ನಟಿ.