ಕಿರಿಯರ ಜೊತೆ ಕೆಲ್ಸ ಮಾಡೋಕೆ ನಿಮ್ಗೆ ಸಂಕೋಚ ಆಗೋದಿಲ್ವೇ ಅಂದಿದ್ದಕ್ಕೆ ಅಣ್ಣಾವ್ರು ಏನಂದಿದ್ರು?

By Shriram Bhat  |  First Published Nov 24, 2024, 1:49 PM IST

ಪ್ರಶ್ನೆ ಕೇಳುತ್ತಿದ್ದಂತೆ ಡಾ ರಾಜ್‌ಕುಮಾರ್ ಅವರು ಮುಜುಗರಕ್ಕೆ ಒಳಗಾಗುತ್ತಾರೆ ಎಂದೇ ಸಂದರ್ಶಕರು ಭಾವಿಸಿದ್ದರಂತೆ. ಆದರೆ ಡಾ ರಾಜ್‌ಕುಮಾರ್ ಅವರ ಮುಖದಲ್ಲಿ ಸಂಕೋಚದ ಬದಲು ಮಗುಳ್ನಗುವಷ್ಟೇ ಮೂಡಲು ಸಂದರ್ಶಕರಿಗೂ ಕುತೂಹಲ ಕೆರಳಿತು. ಅದಕ್ಕೆ ಅಣ್ಣಾವ್ರು.. 


ಅಣ್ಣಾವ್ರು ಅಂದ್ರೆ ಸುಮ್ನೆ ಅಲ್ಲ. ಅವ್ರಿಗೆ ಆ ಪಟ್ಟ ಪುಕ್ಕಟೆ ಸಿಕ್ಕಿದ್ದಲ್ಲ. ಅವರು (Dr Rajkumar) ಕಲಾರಾಧಕರು ಆಗಿದ್ದರು ನಿಜ, ಆದರೆ ಅವರು ಜೀವನವನ್ನು ನೋಡುವ ದೃಷ್ಟಿಕೋನವೇ ಬೇರೆ ಇತ್ತು. ಅವರು ಯಾವತ್ತೂ ಎನಗಿಂತ ಕಿರಿಯರಿಲ್ಲ ಎಂಬಂತೆ ಬದುಕಿದ್ದರು. ಮುಗ್ಧತೆ ಎಂದು ಕರೆಯಬಹುದಾದ ಮಾನವೀಯತೆ ಅವರಲ್ಲಿತ್ತು. ಹಲವರಿಗೆ ಅದು ನಾಟಕವಾ ಅಂತ ಮೊದಮೊದಲು ಅನ್ನಿಸುತ್ತಿತ್ತಂತೆ. ಆದರೆ, ಇಡೀ ಜೀವನ ನಾಟಕ ಆಡಿಕೊಂಡೇ ಇರುವುದು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ ಅದು ಅವರ ವಿಭಿನ್ನ ವ್ಯಕ್ತಿತ್ವ ಅಂತ ಅರ್ಥವಾಯಿತು. 

ನಿಮಗಿಂತ ಕಿರಿಯ ಕಲಾವಿದರಾದ ಶಂಕರ್‌ ನಾಗ್ (Shankar Nag), ನಾಗಾಭರಣ (Nagabharana) ಮೊದಲಾದವರ ಜೊತೆ ಕೆಲಸ ಮಾಡಲು ನಿಮಗೆ ಸಂಕೊಚ ಆಗೋದಿಲ್ವೆ? ಅವರೆಲ್ಲರೂ ವಯಸ್ಸಿನಲ್ಲಿ, ಅನುಭವದಲ್ಲಿ ನಿಮಗಿಂತ ಕಿರಿಯರು. ಅಂಥವರು ನಿಮ್ಮ ಚಿತ್ರಗಳನ್ನು ನಿರ್ದೇಶಿಸುವಾಗ ನಿಮಗೆ ಏನೂ ಅನ್ನಿಸಲಿಲ್ವೇ? ಎಂದು ಡಾ ರಾಜ್‌ಕುಮಾರ್ ಅವರಿಗೆ ಅಂದಿನ ಒಬ್ಬರು ಸಂದರ್ಶಕರು ಪ್ರಶ್ನೆ ಕೇಳಿದ್ದರು. ಅದಕ್ಕೆ ಡಾ ರಾಜ್‌ಕುಮಾರ್ ಅವರ ಉತ್ತರ ಏನಿತ್ತು ಗೊತ್ತಾ? ಖಂಡಿತ ಆ ಕುತೂಹಲ ನಿಮಗೆ ಇದ್ದೇ ಇರುತ್ತೆ.. ಅದಕ್ಕುತ್ತರ ಇಲ್ಲಿದೆ ನೋಡಿ..

Tap to resize

Latest Videos

undefined

ಕ್ಯಾನ್ಸರ್‌ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು! 

ಪ್ರಶ್ನೆ ಕೇಳುತ್ತಿದ್ದಂತೆ ಡಾ ರಾಜ್‌ಕುಮಾರ್ ಅವರು ಮುಜುಗರಕ್ಕೆ ಒಳಗಾಗುತ್ತಾರೆ ಎಂದೇ ಸಂದರ್ಶಕರು ಭಾವಿಸಿದ್ದರಂತೆ. ಆದರೆ ಡಾ ರಾಜ್‌ಕುಮಾರ್ ಅವರ ಮುಖದಲ್ಲಿ ಸಂಕೋಚದ ಬದಲು ಮಗುಳ್ನಗುವಷ್ಟೇ ಮೂಡಲು ಸಂದರ್ಶಕರಿಗೂ ಕುತೂಹಲ ಕೆರಳಿತು. ಅದಕ್ಕೆ ಅಣ್ಣಾವ್ರು 'ಅವರು ಕಿರಿಯರು ಹೇಗಾಗ್ತಾರೆ? ಅವರೆಲ್ಲರೂ ಹಿರಿಯರು ಆಗಿದ್ದರಿಂದಲೇ ಆ ಸ್ಥಾನಕ್ಕೆ ಹೋಗಿದ್ದಾರೆ, ಅಲ್ಲಿ ನಿಂತಿದ್ದಾರೆ. 

ಸಿನಿಮಾಗೆ ನಿರ್ದೇಶಕರೇ ಸೂತ್ರಧಾರರು. ಸಿನಿಮಾದ ಸಂಪೂರ್ಣ ಸೂತ್ರ ಅವರ ಕೈನಲ್ಲಿದೆ. ಹಾಗೆಯೇ ನಿರ್ಮಾಪಕರು ಕೂಡ ಯಜಮಾನರು ಎಂಬುದನ್ನು ಮನಸ್ಸಿನೊಳಗಿಂದ ನನಗೆ ಅಳಿಸಲಾಗುತ್ತಿಲ್ಲ. ಎಷ್ಟೋ ಜನರು ಕಷ್ಟದಿಂದ ಬಂದು ನಿರ್ಮಾಪಕ ಸ್ಥಾನಕ್ಕೆ ಏರಿದ್ದಾರೆ. ಅವರೆಲ್ಲರೂ ನನಗೆ ಅನ್ನ ಕೊಟ್ಟಿದ್ದಾರೆ. ನನಗೆ ಅನ್ನ ಕೊಟ್ಟ ಯಾವುದೇ ನಿರ್ಮಾಪಕ ನನಗೆ ಧಣಿ ಅಂತಲೇ ಕಾಣೋದು. ಇದು ನನಗೆ ಚಿಕ್ಕಂದಿನಿಂದಲೂ ಬಂದ ಅಭ್ಯಾಸ. 

ಡಾ ರಾಜ್‌ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?

ಇದನ್ನೆಲ್ಲ ಹೇಳಿ ನಾನೇನೂ ಉತ್ತಮ ಅಭ್ಯಾಸ ಬೆಳೆಸಿಕೊಂಡಿದ್ದೇನೆ ಅಂತ ಹೇಳುತ್ತಿಲ್ಲ. ಇದು ಒಳ್ಳೆಯದೋ ಕೆಟ್ಟದ್ದೋ ಎಂಬ ಪ್ರಶ್ನೆಯೇ ನನ್ನಲ್ಲಿಲ್ಲ. ಇದೆಲ್ಲ ನನಗೆ ಅಭ್ಯಾಸ ಅಷ್ಟೇ. ಇನ್ನು ಸಾಧನೆ ಅನ್ನೋದನ್ನು ಪ್ರತಿಯೊಬ್ಬರೂ ಸಾಯುವವರೆಗೂ ಮಾಡಲೇಬೇಕು. ನಾವೆಷ್ಟು ದೂರ ಹೋದ್ರೂ ಯಾವುದೋ ಒಂದು ಶಕ್ತಿ ನಮ್ಮನ್ನು ಕರೆದುಕೊಂಡು ಹೋಗಿರುತ್ತೆ.. ಇದಿಷ್ಟೇ ಜೀವನ ಅಲ್ಲಯ್ಯ ಮಂಕೇ, ಇಷ್ಟಕ್ಕೇ ಭಾರೀ ಅಂತ ಅಂದ್ಕೋಬೇಡ, ಇನ್ನೂ ಇದೆ ಬಾ ಬಾ ಅಂತ ಕೈ ಹಿಡಿದು ಆ ಶಕ್ತಿ ಕರ್ಕೊಂಡು ಹೋಗ್ತಾನೆ ಇರುತ್ತೆ..' ಅಂದಿದ್ದಾರೆ ಡಾ ರಾಜ್‌ಕುಮಾರ್. 

click me!