ಅಂದು ಕಾರಿನಲ್ಲಿ ಅವರ ಜೊತೆಗೇ ಇದ್ದ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರುಂಧತಿ ನಾಗ್ ಅವರು 'ರಂಗಶಂಕರ' ಕೆಲಸಗಳಲ್ಲಿ..
ದಿವಂಗತ ನಟ ಶಂಕರ್ ನಾಗ್ (Shankar Nag) ಅವರಿಗೆ ಒಬ್ಬರು ಮಗಳಿರುವುದು ಬಹುತೇಕರಿಗೆ ಗೊತ್ತಿದೆ. ಶಂಕರ್ ನಾಗ್ ಹಾಗೂ ಅರುಂಧತಿ ನಾಗ್ (Arundhati Nag) ಅವರ ಹೆಸರು ಕಾವ್ಯಾ ನಾಗ್. ಕ್ಯಾಮೆರಾ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳದ ಇವರು ಈಗ ಬಿಸಿನೆಸ್ ವುಮೆನ್ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಹೌದು, ಕಾವ್ಯಾ ನಾಗ್ (Kavya Nag) ಅವರು ಚಿತ್ರರಂಗದಿಂದ ದೂರವಿದ್ದಾರೆ. ಅಪ್ಪ-ಅಮ್ಮನಂತೆ ನಟನೆ-ನಿರ್ದೇಶನ ಅಂತ ಚಿತ್ರರಂಗದಲ್ಲೇ ತೊಡಗಿಸಿಕೊಳ್ಳದೇ ತಾವು ವ್ಯಾಪಾರರಂಗದಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಇವರು ಕೋಕೋನೆಸ್ (Coconess) ಹೆಸರಿನ ಕಂಪೆನಿ ತೆರೆದಿದ್ದಾರೆ. ಕೆಮಿಕಲ್ ಮುಕ್ತ ಸೋಪ್ ಹಾಗೂ ಆಯಿಲ್ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೋಕೋನೆಸ್ ತೆಂಗಿನ ಹಾಲು ಉತ್ಪಾದನಾ ಘಟಕದಿಂದ ನ್ಯಾಚುರಲ್ ಸೋಪ್ ಹಾಗೂ ಆಯಿಲ್ ತಯಾರಿಸುವ ಇವರು ತಾವಾಯ್ತು ತಮ್ಮ ವ್ಯಾಪಾರ ಆಯ್ತು ಎಂಬಂತೆ ಇದ್ದಾರೆ. ನಟ ಶಂಕರ್ ನಾಗ ಮಗಳು ಎನ್ನುವ ಯಾವ ಅಹಂ ಇಲ್ಲದೇ ಎಲ್ಲರೊಂದಿಗೆ ಬೆರೆತು ವ್ಯವಹರಿಸುತ್ತಾರೆ ಕಾವ್ಯಾ ನಾಗ್.
ಕ್ಯಾನ್ಸರ್ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!
ಕನ್ನಡದ ಶ್ರೇಷ್ಠ ನಟ-ನಿರ್ದೇಶಕ ಶಂಕರ್ ನಾಗ್ ಅವರು 1954ರ ನವೆಂಬರ್ 9ರಂದು (9 November 1954) ಹೊನ್ನಾವರದಲ್ಲಿ (Honnavar) ಜನಿಸಿದ್ದಾರೆ. 1990ರ ಸೆಪ್ಟೆಂಬರ್ 30ರಂದು (30 September 1990) ನಿಧನರಾಗಿರುವ ನಟ ಶಂಕರ್ ನಾಗ್ ಅವರಿಗೆ ಅಗ ಕೇವಲ 35ರ ವಯಸ್ಸು. ಅಷ್ಟರಲ್ಲಾಗಲೇ ಬರೋಬ್ಬರಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಶಂಕರ್ ನಾಗ್. ಜೊತೆಗೆ, ಹಲವು ಚಿತ್ರಗಳ ನಿರ್ದೇಶನವನ್ನೂ ಮಾಡಿದ್ದರು. ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ನಿರ್ದೇಶನ ಮಾಡಿ ಸ್ಟಾರ್ ನಿರ್ದೇಶಕ ಕೂಡ ಎನಿಸಿದ್ದರು.
ದಾವಣೆಗೆರೆ ಸಿಟಿಗೆ ಕೆಲವೇ ಕೀಲೋ ಮೀಟರ್ ದೂರದ ಆನಗೋಡು (Anagodu) ಬಳಿ ಕಾರು-ಲಾರಿ ದುರಂತದಲ್ಲಿ ನಟ ಶಂಕರ್ ನಾಗ್ ಅವರು ದುರ್ಮರಣ ಹೊಂದಿದ್ದಾರೆ. ಅಂದು ಕಾರಿನಲ್ಲಿ ಅವರ ಜೊತೆಗೇ ಇದ್ದ ಶಂಕರ್ ನಾಗ್ ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರುಂಧತಿ ನಾಗ್ ಅವರು 'ರಂಗಶಂಕರ' ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಕಾವ್ಯಾ ವ್ಯಾಪಾರ ಮಾಡುತ್ತಿದ್ದಾರೆ.
ಡಾಲಿಗೆ ಬಿಗ್ ಬಾಸ್‌ನಲ್ಲಿ ಸಿಕ್ಕ ಸಂಭಾವನೆ ನೋಡಿ ಶಾಕ್ ಗ್ಯಾರಂಟಿ; ಹಾರ್ಟ್ ಗಟ್ಟಿಯಾಗಿ ಹಿಡ್ಕೊಳಿ!
ಒಟ್ಟಿನಲ್ಲಿ, ತಂದೆಗೆ ತಕ್ಕ ಮಗಳು ಎನ್ನುವಂತಿರುವ ಕಾವ್ಯಾ ನಾಗ್ ಎಲೆಮರೆಯ ಕಾಯಿ ಎನ್ನಬಹುದು. ಕೆಮಿಕಲ್ ಮುಕ್ತ ಸೋಪ್ ತಯಾರಿಸುವ ಆದರ್ಶದ ಜೊತೆಜೊತೆಗೇ ತಮ್ಮ ಜೀವನ ನಿರ್ವಹಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಶುದ್ಧ ತೆಂಗಿನಹಾಲು ಹಾಗೂ ಅದರದೇ ಸೋಪ್ ತಯಾರಿಸಿ, ಸಾರ್ವಜನಿಕರ ಆರೋಗ್ಯ ರಕ್ಷಣೆಯ ಜೊತೆಗೆ ಸಮಾಜಕ್ಕೆ ತಮ್ಮದೇ ಅದ ರೀತಿಯಲ್ಲಿ ಒಳ್ಳೆಯ ಸಂದೇಶ ಕೂಡ ಕೊಡುತ್ತಿದ್ದಾರೆ.