ಈ ಡಾಲಿ ಎಂದರೆ ಯಾರು ಅಂತ ಕೆಲವರಿಗೆ ಗೊತ್ತು. ಡಾಲಿ ಚಾಯ್‌ವಾಲಾ ಎಂದೇ ಪ್ರಸಿದ್ಧರಾಗಿರುವ ಸುನೀಲ್ ಪಟೇಲ್ ಮೂಲತಃ ನಾಗ್ಪುರದವರು. ಮುಂಬೈನಲ್ಲಿ ಟೀ ವೆಂಡರ್ ಆಗಿರುವ ಡಾಲಿ, ಟೀ ಮಾಡುವ ಬೇರೆಲ್ಲರಂತೆ ಅಲ್ಲ, ಅಸಾಮಾನ್ಯ ರೀತಿಯಲ್ಲಿ ಆಡುತ್ತ ಜನಮನ ಗೆದ್ದಿದ್ದಾರೆ. ಅವರು ಟೀ ಪಾತ್ರೆಗೆ..
ಹಿಂದಿ ಬಾಗ್ ಬಾಸ್ ಸೀಸನ್ 18 (Hindi Bigg Boss 18) ನಡೆಯುತ್ತಿದ್ದು, ನಟ ಸಲ್ಮಾನ್ ಖಾನ್ (Salman Khan) ಈ ಶೋವನ್ನು ಹೋಸ್ಟ್ ಆಗಿ ನಡೆಸಿಕೊಡುತ್ತಿದ್ದಾರೆ ಎಂಬುದು ಅನೇಕರಿಗೆ ಗೊತ್ತು. ಹಿಂದಿ ಬಿಗ್ ಬಾಸ್ ಶೋನಲ್ಲಿ ಈ ಮೊದಲು ಸನ್ನಿ ಲಿಯೋನ್, ರಾಕಿ ಸಾವಂತ್ ಸೇರಿದಂತೆ ಹಲವರು ಖ್ಯಾತನಾಮರು ಭಾಗಿಯಾಗಿದ್ದರು. ಅನೇಕ ಮಾಡಲ್‌ಗಳು, ವಿಶೇಷ ಹಾಗೂ ವಿಭಿನ್ನ ವ್ಯಕ್ತಿತ್ವದವರು ಅಲ್ಲಿ ಅನೇಕರು ಭಾಗವಹಿಸಿ ಬಿಗ್ ಬಾಸ್ ಶೋ ಜನಪ್ರಿಯತೆ ಹೆಚ್ಚಿಸಿರುವುದು ಗೊತ್ತೇ ಇದೆ. ಇದೀಗ ಅಲ್ಲಿಗೆ ಡಾಲಿ ಕೂಡ ಹೋಗಿದ್ದಾರೆ.
ಈ ಡಾಲಿ (Dolly) ಎಂದರೆ ಯಾರು ಅಂತ ಕೆಲವರಿಗೆ ಗೊತ್ತು. ಡಾಲಿ ಚಾಯ್‌ವಾಲಾ (Dolly Chaiwala) ಎಂದೇ ಪ್ರಸಿದ್ಧರಾಗಿರುವ ಸುನೀಲ್ ಪಟೇಲ್ ಅವರು ಮೂಲತಃ ನಾಗ್ಪುರದವರು. ಮುಂಬೈನಲ್ಲಿ ಟೀ ವೆಂಡರ್ ಆಗಿರುವ ಅವರು ಟೀ ಮಾಡುವ ಬೇರೆಲ್ಲ ಸಾಮಾನ್ಯರಂತೆ ಅಲ್ಲ, ಅಸಾಮಾನ್ಯ ರೀತಿಯಲ್ಲಿ ಆಡುತ್ತ ಜನಮನ ಗೆದ್ದಿದ್ದಾರೆ. ಅವರು ಟೀ ಪಾತ್ರೆಗೆ ಹಾಲು ಹಾಕುವ ರೀತಿ, ಅವರು ಟೀ ಸೋಸುವ ರೀತಿ ಎಲ್ಲವೂ ವಿಭಿನ್ನವಾಗಿದ್ದು, ಅದರಿಂದಲೇ ಇವತ್ತು ಸೋಷಿಯಲ್ ಮೀಡಿಯಾ ಮೂಲಕ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಅವರು ಫೇಮಸ್ ಆಗಿದ್ದಾರೆ.
ಕ್ಯಾನ್ಸರ್ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!
ಇಂಥ ಡಾಲಿ ಬಿಗ್ ಬಾಸ್ ಹಿಂದಿ ಸೀಸನ್ 18 ಕ್ಕೆ ಆಯ್ಕೆಯಾಗುತ್ತಾರೆ ಎಂದೇ ಬಹಳಷ್ಟು ಜನರು ಭಾವಿಸಿದ್ದರು. ಆದರೆ, ಆ ಆಫರ್ ಬಂದಾಗ ಡಾಲಿ ಒಂದು ಕಾರಣ ಕೊಟ್ಟು ಅದನ್ನು ನಿರಾಕಸಿದ್ದರು. ಅದಕ್ಕೆ ಡಾಲಿ ಕೊಟ್ಟ ಕಾರಣವನ್ನು ಅನೇಕರು ಮೆಚ್ಚಿ ಅವರ ಅಮ್ಮನ ಮೇಲಿನ ಪ್ರೀತಿಗೆ ಸೆಲ್ಯೂಟ್ ಎಂದಿದ್ದರು. ಹಾಗಿದ್ದರೆ ಡಾಲಿ ಚಾಯ್‌ವಾಲ್ ಅಂದು ಅದೇನು ಹೇಳಿದ್ದರು ಗೊತ್ತಾ?
ಡಾಲಿ ಈ ಬಗ್ಗೆ 'ನನ್ನ ತಾಯಿಯನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ 100 ದಿನ ಇರೋಕೆ ನನಗಾಗಲ್ಲ.. ಈ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಿಲ್ಲ..' ಎಂದಿದ್ದರು. ಆದರೆ, ಅವರ ಈ ಮಾತಿನಿಂದ ಅವರ ಅಭಿಮಾನಿಗಳು ಇನ್ನೂ ಹೆಚ್ಚಾಗಿದ್ದಾರೆ ಎಂಬುದನ್ನು ಅರಿತಿದ್ದ ಹಿಂದಿ ಬಿಗ್ ಬಾಸ್ ವೇದಿಕೆ, ಅವರಿಗೆ ಒಂದು ದಿನ ಬಂದು ಹೋಈಗುವ ಅವಕಾಶ ನೀಡಿದೆ. ಅದರಂತೆ ಡಾಲಿ ಬಿಗ್ ಬಾಸ್ ಮನೆಗೆ ಬಂದು ಆ ಶೋ ಪ್ರಿಯರನ್ನು ರಂಜಿಸಿದ್ದಾರೆ, ಹಲವರ ಕನಸನ್ನು ನನಸು ಮಾಡಿದ್ದಾರೆ.
ಕಿರಿಯರ ಜೊತೆ ಕೆಲ್ಸ ಮಾಡೋಕೆ ನಿಮ್ಗೆ ಸಂಕೋಚ ಆಗೋದಿಲ್ವೇ ಅಂದಿದ್ದಕ್ಕೆ ಅಣ್ಣಾವ್ರು ಏನಂದಿದ್ರು?
ಅಷ್ಟೇ ಅಲ್ಲ, ಕೇವಲ ಒಂದು ದಿನಕ್ಕೋಸ್ಕರ ಬಿಗ್ ಬಾಸ್ ಮನೆಗೆ ಹೋಗಿದ್ದ ಡಾಲಿ ಅಲ್ಲಿ ಹೋಗಿ ಟೀ ಮಾಡಿ ಅಲ್ಲಿರುವ ಸ್ಪರ್ಧಿಗಳಿಗೆ ಕುಡಿಸಿದ್ದಾರೆ. ಅದರಿಂದ ಅವರಿಗೆ ಒಂದೇ ಒಂದು ದಿನಕ್ಕೆ ಭರ್ಜರಿ ಕಮಾಯಿ ಕೂಡ ಆಗಿದೆ. ಹಾಗಿದ್ದರೆ ಒಂದು ದಿನಕ್ಕೆ ಅವರಿಗೆ ಬಿಗ್ ಬಾಸ್ ಶೋ ಮನೆ ಕೊಟ್ಟ ಸಂಭಾವನೆ ಎಷ್ಟು ಗೊತ್ತೇ? ಬರೋಬ್ಬರಿ 5 ಲಕ್ಷ ರೂಪಾಯಿ! ಹೌದು, ಡಾಲಿ ಚಾಯ್‌ವಾಲಾಗೆ ಬಿಗ್ ಬಾಸ್ ಶೋದಲ್ಲಿ ಕೇವಲ ಒಂದು ದಿನಕ್ಕೆ ಅಷ್ಟೊಂದು ಸಂಭಾವನೆ ನೀಡಿದ್ದಾರಂತೆ!
ಬಿಗ್ ಬಾಸ್ ಶೋಗೆ ಹೋಗಿರುವ ಡಾಲಿ ಚಾಯ್‌ವಾಲಾ ಅವರು 'ನಾನು ನಟ ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿದ್ದಕ್ಕಾಗಿ ತುಂಬಾ ಖುಷಿಯಾಗಿದ್ದೇನೆ. ಅವರಿಂದಲೇ ನಾನು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದೇನೆ ಎಂಬುದನ್ನು ಅರಿತ ಮೇಲೆ ನನಗೆ ಅವರ ಮೇಲಿರುವ ಅಭಿಮಾನ ಇನ್ನೂ ಹೆಚ್ಚಾಗಿದೆ. ನನಗೆ ನಿಜವಾಗಿಯೂ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದು ಖುಷಿ ಕೊಟ್ಟಿದೆ' ಎಂದಿದ್ದಾರೆ ಸುನೀಲ್ ಪಟೇಲ್.
ಡಾ ರಾಜ್ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?