ರೀಲ್‌ ಪತ್ನಿ ಎದುರು ರಿಯಲ್‌ ಪತ್ನಿ ಜೊತೆ ಶ್ರೀರಸ್ತು ಶುಭಮಸ್ತು ಮಾಧವ್‌ ಸಕತ್‌ ಸ್ಟೆಪ್‌

By Suchethana D  |  First Published Nov 24, 2024, 3:44 PM IST

ಶ್ರೀರಸ್ತು ಶುಭಮಸ್ತು ಮಾಧವ್‌ ಅರ್ಥಾತ್‌ ಅಜಿತ್‌ ಹಂದೆ, ರಿಯಲ್‌ ಪತ್ನಿ ಸಿಂಧು ಜೊತೆ ವೇದಿಕೆ ಮೇಲೆ ಸ್ಟೆಪ್‌ ಹಾಕಿದ್ದಾರೆ. ವಿಡಿಯೋ ವೈರಲ್‌ ಆಗಿದೆ.
 


ಗರ್ವ, ಬಿದಿಗೆ ಚಂದ್ರಮ, ಮುಕ್ತ, ಹಿಂದಿಯ 'ಚೋಟಿಮಾ' ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿರುವ ನಟ ಅಜಿತ್‌ ಹಂದೆಯವರು. ಬಹುಶಃ ಅಜಿತ್‌ ಹಂದೆ ಎಂದರೆ ಕೆಲವರಿಗೆ ತಿಳಿಯದೇ ಇರಬಹುದು. ಆದರೆ ಶ್ರೀರಸ್ತು ಶುಭಮಸ್ತು ಮಾಧವ್‌ ಎಂದ ತಕ್ಷಣ ಸೀರಿಯಲ್ ವೀಕ್ಷಕರ ಕಣ್ಣುಗಳು ಅರಳುವುದು ಸಹಜ. ಮೊದಲ ಪತ್ನಿಯನ್ನು ಕಳೆದುಕೊಂಡು ನಡು ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಿ, ಬೆಳೆದು ನಿಂತಿರುವ ಮಕ್ಕಳ ವಿರುದ್ಧ ಕಟ್ಟಿಕೊಂಡು, ಈಗ ಎಲ್ಲರ ಪ್ರೀತಿಯನ್ನೂ ಗಳಿಸಿರುವ ಪಾತ್ರ ಇದು. ಅಷ್ಟೇ ಅಲ್ಲದೇ, ಸೀರಿಯಲ್‌ನಲ್ಲಿ ಮೊಮ್ಮಗು ನೋಡುವ ಕಾಲದಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು ಸೀರಿಯಲ್‌ ವೀಕ್ಷಕರಿಂದ ಅಸಮಾಧಾನಕ್ಕೂ ಗುರಿಯಾದ ಪಾತ್ರವೇ ಮಾಧವ್‌.

ಸೀರಿಯಲ್‌ ಏನೇ ಇರಲಿ. ರಿಯಲ್‌ ಲೈಫ್‌ಗೆ ಬರುವುದಾದರೆ ಅಜಿತ್‌ ಹಂದೆಯವರ ನಟನೆಗೆ ಅವರೇ ಸರಿಸಾಟಿ. ಕಣ್ಣಿನಲ್ಲಿಯೇ ಮಾತನಾಡುವ ವ್ಯಕ್ತಿತ್ವ ಅವರದ್ದು. ನಟನೆಗೆ ಬಂದರೆ ಎಂಥ ರೋಲ್‌ ಕೊಟ್ಟರೂ ಸೈ ಎನ್ನುವುದು ಇದಾಗಲೇ ಸಾಬೀತಾಗಿದೆ. ರಿಯಲ್ ಲೈಫ್‌ನಲ್ಲಿ ಆರು ವರ್ಷದ ಮಗ ಇದ್ದರೆ, ಸೀರಿಯಲ್‌ನಲ್ಲಿ ಮೊಮ್ಮಕ್ಕಳನ್ನು ನೋಡುವ ಕ್ಯಾರೆಕ್ಟರ್‍‌. ಅದರೆ ಪಾತ್ರ ಏನೇ ಇದ್ದರೂ ಅದಕ್ಕೆ ಜೀವ ತುಂಬುತ್ತಾರೆ ಅಜಿತ್‌ ಹಂದೆ. ಜೀ ಕನ್ನಡದ ಮನರಂಜನೆಯ ವೇದಿಕೆಯ ಮೇಲೆ ಅವರು ಈಗ ರಿಯಲ್‌ ಲೈಫ್‌ ಪತ್ನಿ ಹಾಗೂ ಪುಟಾಣಿ ಮಗನ ಜೊತೆ ಸ್ಟೆಪ್‌ ಹಾಕಿದ್ದಾರೆ. ಸೀರಿಯಲ್‌ನಲ್ಲಿ ತುಳಸಿ ಅರ್ಥಾತ್‌  ಸುಧಾರಾಣಿ ಅವರು ಮಾಧವ್‌ ಪತ್ನಿಯಾದರೆ, ರಿಯಲ್‌ ಲೈಫ್‌ನಲ್ಲಿ ಅಜಿತ್‌ ಹಂದೆಯವರ ಪತ್ನಿ ಹೆಸರು ಸಿಂಧು, ಮಗನ ಹೆಸರು ಅಥರ್ವ. 

Latest Videos

undefined

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

ಇನ್ನು ಪತ್ನಿ ಸಿಂಧು ಅವರ ಬಗ್ಗೆ ಹೇಳುವುದಾದರೆ, ಇವರು ಗಾಯಕಿ ಹಾಗೂ ಅದ್ಭುತ ಚಿತ್ರ ಕಲಾವಿದೆ ಕೂಡ ಹೌದು. ಪೇಂಟರ್‍‌, ವಾಟರ್‍‌ ಕಲರ್‍‌ ಆರ್ಟಿಸ್ಟ್‌. ಇವರ ಸೋಷಿಯಲ್ ಮೀಡಿಯಾ ಪೇಜ್ ಗೆ ಭೇಟಿ ನೀಡಿದ್ರೆ ಇವರ ಅದ್ಭುತ ಕಲಾಕೃತಿಗಳನ್ನು ಕಾಣಬಹುದು. ಇವರು ಗಾಯಕಿ ಕೂಡ. ಇನ್ನು ಅಜಿತ್‌ ಹಂದೆಯವರ ಬಗ್ಗೆ ಹೇಳುವುದಾರೆ, ಬಾಲ್ಯದಿಂದಲೇ ನಾಟಕಗಳಲ್ಲಿ ನಟಿಸುವ ಆಸೆಯನ್ನು ಹೊಂದಿದ್ದ ಅಜಿತ್, ನಂತರ ಸೀರಿಯಲ್ ಗಳಲ್ಲಿ ನಟಿಸೋಕೆ ಆರಂಭಿಸಿದರು, ಎರಡು, ಮೂರು ಸೀರಿಯಲ್ ಬಳಿಕ ನಟನೆಯಿಂದಲೇ ದೂರ ಇದ್ದ ಅಜಿತ್, ಬಳಿಕ ನ್ಯೂಯಾರ್ಕ್ ಗೆ ತೆರಳಿದರು. ನ್ಯೂರ್ಯಾಕ್‌ ಫಿಲಂ ಸಿಟಿಯಲ್ಲಿ (Newyork film city) ಸಿನಿಮಾ ಮೇಕಿಂಗ್ ತರಬೇತಿ ಪಡೆದುಕೊಂಡು ಭಾರತಕ್ಕೆ ಬಂದು ತಮ್ಮ ಸ್ವಂತ ನಿರ್ಮಾಣದಲ್ಲಿ ಫಿಲಂ ಸಂಸ್ಥೆ ಆರಂಭಿಸಿದ್ದಾರೆ. ತಮ್ಮ ಸಿನಿಮಾ ಸಂಸ್ಥೆಯಲ್ಲಿ ಅನೇಕ ಜಾಹೀರಾತು ಮತ್ತು ಡಾಕ್ಯುಮೆಂಟರಿ ನಿರ್ಮಾಣ ಮಾಡಿದ್ದಾರೆ.   ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ಸಾಕಷ್ಟು ಕಿರುಚಿತ್ರ, ಸಾಕ್ಷ್ಯಚಿತ್ರ, ಮ್ಯೂಸಿಕ್‌ ವಿಡಿಯೋಗಳನ್ನೂ ಮಾಡಿದ್ದಾರೆ.  

ಕಿರುತೆರೆಯಲ್ಲಿ ಮಾತ್ರವಲ್ಲ, ಹಿರಿತೆರೆಯಲ್ಲೂ ಸಹ  ಕೆಲವೊಂದು ಸಿನಿಮಾಗಳಲ್ಲಿ ಅಜಿತ್ ಹಂದೆ ನಟಿಸಿದ್ದಾರೆ. ಕನ್ನಡದ ಐದು ಒಂದ್ಲಾ ಐದು, ಮಿನುಗು, ಚಂಬಲ್ ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಸದ್ಯ  'ಶ್ರೀರಸ್ತು ಶುಭಮಸ್ತು' ವಿನ ಮಾಧವ್ ಸರ್ ಆಗಿ ಮಿಂಚುತ್ತಿದ್ದಾರೆ.  ಇದಾಗಲೇ ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಇವರಿಗೆ ಇದೆ.  'ಅವಲಕ್ಕಿ ಪವಲಕ್ಕಿ' ಎಂಬ ಧಾರಾವಾಹಿಯನ್ನು ಕೂಡ ನಿರ್ದೇಶಿಸಿದ್ದಾರೆ. '5 ಒಂದ್ಲ ಐದು' ಮತ್ತು 'ಮಿನುಗು', 'ಚಂಬಲ್‌' ಎಂಬ ಕನ್ನಡ ಸಿನಿಮಾಗಳ ಜತೆ 'ಏಕ್‌ ಅಲಗ್‌ ಮೌಸಮ್‌' ಎಂಬ ಹಿಂದಿ ಸಿನಿಮಾದಲ್ಲಿ ನಂದಿತಾ ದಾಸ್‌ ಅವರೊಂದಿಗೆ ಅಭಿನಯಿಸಿದ್ದಾರೆ.  ಶ್ರೀರಸ್ತು ಶುಭಮಸ್ತುವಿನಲ್ಲಿ ವಯಸ್ಸಿಗೂ ಮೀರಿದ ಪಾತ್ರದ ಬಗ್ಗೆಯೂ ಹೇಳಿರುವ ಅವರು, ನನಗೆ ಬಹುಬೇಗ ಕೂದಲು ಬೆಳ್ಳಗಾದವು, ಅದಕ್ಕಾಗಿ ವಯಸ್ಸಾದ ಹಾಗೆ ಕಾಣಿಸ್ತಿದ್ದೇನೆ, ಕೂದಲಿಗೆ ಕಪ್ಪು ಹಚ್ಚುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ. 

ಎಂಟು ವರ್ಷ ಕಿರಿಯ ಹಿಂದೂ ಯುವಕನ ಮದ್ವೆಯಾದ ನಟಿ ಕಿಶ್ವೆರ್‍‌: ಹೇಗಿದೆ ಲೈಫ್‌? ಅವರ ಬಾಯಲ್ಲೇ ಕೇಳಿ...

click me!