ಸಹಾಯಕ್ಕೆ ಫೋನ್ ಮಾಡಿದ ತಾಂಡವ್‌: ನೀನ್‌ ಕ್ಷಮಿಸಿದ್ರೆ ನಾವ್‌ ನಿನ್ನ ಬಿಡಲ್ಲ- ಭಾಗ್ಯಳಿಗೆ ನೆಟ್ಟಿಗರ ಬೆದರಿಕೆ!

By Suchethana D  |  First Published Nov 24, 2024, 12:38 PM IST

ತೊಂದರೆಯಲ್ಲಿ ಸಿಲುಕಿರುವ ತಾಂಡವ್‌, ಸಹಾಯಕ್ಕಾಗಿ ಭಾಗ್ಯಳಿಗೆ ಕರೆ ಮಾಡಿದ್ದಾನೆ. ಭಾಗ್ಯ ಗಂಡನನ್ನು ಕ್ಷಮಿಸ್ತಾಳಾ? ನೆಟ್ಟಿಗರು ಹೇಳ್ತಿರೋದೇನು?
 


ಗರ್ಲ್​ಫ್ರೆಂಡ್​ ಶ್ರೇಷ್ಠಾ ಜೊತೆ ರೆಸಾರ್ಟ್​ನಲ್ಲಿ ಎಂಜಾಯ್​ ಮಾಡ್ತಿದ್ದಾ  ತಾಂಡವ್‌ಗೆ ಭಾರಿ ಆಘಾತವಾಗಿದೆ​. ಅಷ್ಟಕ್ಕೂ ಇಲ್ಲಿಗೆ ಹೋಗಲು ಅವರಿಗೆ ಟಿಕೆಟ್​ ಸಿಕ್ಕಿದ್ದು ಭಾಗ್ಯಳಿಂದ. ತನ್ನ ಸಂಬಳದಲ್ಲಿ ಭಾಗ್ಯ ಮನೆಗೆ ಹೊಸ ಫ್ರಿಜ್​ ತಂದಿದ್ದಳು. ಆ ಫ್ರಿಜ್​ ಖರೀದಿ ಸಂದರ್ಭದಲ್ಲಿ ಇಟ್ಟ ಲಾಟರಿ ಭಾಗ್ಯಳಿಗೇ ಹೊಡೆದಿದೆ. ದಂಪತಿ ಪ್ರವಾಸಕ್ಕೆ ಹೋಗುವ ಒಂದು ಟಿಕೆಟ್​ ಅವಳಿಗೆ ಸಿಕ್ಕಿತ್ತು. ಮನೆಯವರೆಲ್ಲರೂ ಸೇರಿ ಭಾಗ್ಯ ಮತ್ತು ತಾಂಡವ್​ನನ್ನು ಪ್ರಯಾಣಕ್ಕೆ ಕಳುಹಿಸುವ ಯೋಚನೆಯಲ್ಲಿ ಇದ್ದರು. ತಾಂಡವ್​ನ ಬುದ್ಧಿ ಗೊತ್ತಿದ್ದರೂ ತಾಂಡವ್​, ಭಾಗ್ಯಳನ್ನು ಒಪ್ಪಿಕೊಳ್ತಾನೆ ಎನ್ನುವ ಹುಚ್ಚು ಕಲ್ಪನೆ ಕುಸುಮಳದ್ದು. ಇದೇ ಕಾರಣಕ್ಕೆ ಇಬ್ಬರೂ ಟ್ರಿಪ್​ಗೆ ಹೋಗುವಂತೆ ಹೇಳಿದ್ದಳು. ಆ ಟಿಕೆಟ್​ ಪಡೆದುಕೊಂಡಿರೋ ತಾಂಡವ್​, ಭಾಗ್ಯಳ ಜೊತೆ ಹೋಗಲು ಸುತರಾಂ ಒಪ್ಪಲಿಲ್ಲ. ಅವಳನ್ನು ಮನಸೋ ಇಚ್ಛೆ ಮಾಮೂಲಿನಂತೆ ಬೈದು, ಈ ಟಿಕೆಟ್​ ಅನ್ನು ಬೇರೆ ಯಾರಿಗಾದ್ರೂ ಕೊಡುವಂತೆ ಹೇಳುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದ. 

ಇತ್ತ ಹೋಟೆಲ್​ನಲ್ಲಿ, ಓನರ್​ ಬಂದು ಭಾಗ್ಯಳ ಬಳಿ,  ನಮಗೆ ಒಂದು ಒಳ್ಳೆಯ ಆಫರ್​ ಬಂದಿದೆ. ಟೂರ್​ ಪ್ಯಾಕೇಜ್​ನವರಿಗೆ ನಮ್ಮದೇ ಹೋಟೆಲ್​ ಅಡುಗೆ, ನೀವೇ ಹೋಗಬೇಕು ಎಂದಿದ್ದರು. ಆಗ ಮಾತುಮಾತಿನಲ್ಲಿ ಭಾಗ್ಯಳಿಗೆ ಇದು ತನಗೆ ಸಿಕ್ಕಿರುವ ಲಾಟರಿ ಟಿಕೆಟ್​ ಟೂರ್​ ಪ್ಯಾಕೇಜ್​ ಎನ್ನುವುದು ತಿಳಿದಿತ್ತು. ಆ ಅದೃಷ್ಟ ತನಗಂತೂ ಸಿಕ್ಕಿಲ್ಲ.  ಆದರೆ ತನಗೆ ಸಿಕ್ಕಿರುವ ಲಾಟರಿಯಲ್ಲಿ ಬೇರೆ ಯಾರೋ ದಂಪತಿ ಹೋಗುತ್ತಿದ್ದಾರಲ್ಲ, ಅವರನ್ನು ನೋಡುವ ಭಾಗ್ಯ ಆದರೂ ತನಗೆ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿ ತಾನೇ ಹೋಗುವುದಾಗಿ ಹೇಳಿದ್ದಳು. ಆದರೆ ತನಗೆ  ಸಿಕ್ಕಿರುವ ಟಿಕೆಟ್​ ಪಡೆದು ಲವರ್​ ಜೊತೆ ಹನಿಮೂನ್​ ಪ್ಲ್ಯಾನ್​ ಮಾಡಿದ್ದ ಎನ್ನುವುದು ಗೊತ್ತೇ ಇರಲಿಲ್ಲ.  ಆ ಟಿಕೆಟ್​ ಅನ್ನು ಬೇರೆ ಯಾರಿಗೂ ಕೊಡದೇ ಶ್ರೇಷ್ಠಾಳ ಜೊತೆ ತಾನೇ ಗಂಡ-ಹೆಂಡತಿ ರೂಪದಲ್ಲಿ ಪ್ರವಾಸಕ್ಕೆ ಹೋಗಿದ್ದ ತಾಂಡವ್‌. 

Tap to resize

Latest Videos

ಸಿಹಿ ಸ್ಕೂಲ್‌ಗೆ ಎಷ್ಟು ದಿನ ಹೋಗ್ತಾಳೆ? ರಜೆ ಇದ್ದಾಗ ಹೋಗೋದೆಲ್ಲಿ? ಅವಳದ್ದೇ ಕ್ಯೂಟ್‌ ಮಾತಲ್ಲಿ ಕೇಳಿ

ಇಬ್ಬರೂ  ಫುಟ್‌ ಟೈಟ್‌ ಆಗಿದ್ದರು. ಮದ್ಯದ ಅಮಲಿನದ್ದ ತಾಂಡವ್‌ ತನಗೆ ಬೇರೆ ಮದುವೆಯಾಗಿದ್ದು, ಅವಳು ಸರಿಯಿಲ್ಲ, ಇವಳನ್ನು ಇಲ್ಲೇ ಮದುವೆಯಾಗುತ್ತೇನೆ ಎಂದುಬಿಟ್ಟ. ಅಲ್ಲಿಗೆ ಸ್ಟಾರ್‍‌ ಹೋಟೆಲ್‌ ಮಾಲೀಕರಿಗೆ ಈ ವಿಷಯ ತಿಳಿದು ಸ್ಥಳಕ್ಕೆ ಬಂದು ತಾಂಡವ್‌ನ ವಿರುದ್ಧ ಮಾತಾಡಿದರು. ಕೊತ ಕೊತ ಕುದ್ದ ಶ್ರೇಷ್ಠಾ ಬಾಯಿಗೆ ಬಂದಂತೆ ಮಾಲೀಕರನ್ನು ಬೈದಳು. ಅದರಿಂದ ಸಿಟ್ಟಿಗೆದ್ದ ಮಾಲೀಕರು ಪೊಲೀಸರಿಗೆ ಕರೆಯುವುದಾಗಿ ಹೇಳಿಫೋನ್ ರಿಸೀವ್‌ ಮಾಡುತ್ತಿದ್ದಂತೆಯೇ ತಾಂಡವ್‌ ಕಾಲಿಗೆ ಬೀಳೋದೊಂದೇ ಬಾಕಿ. ಆಗ ಮಾಲೀಕ, ಅಲ್ಲಿ ಪತ್ನಿ ಇದ್ದರೂ ಅವಳಿಗೆ ಮೋಸ ಮಾಡಿರುವ ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದಾಗ ತಾಂಡವ್‌ ಮತ್ತು ಶ್ರೇಷ್ಠಾ ಪೆಚ್ಚಾಗಿ ಹೋದರು.

ಕೊನೆಗೆ ಓನರ್‍‌ ಒಂದು ಚಾನ್ಸ್‌ ಕೊಡ್ತೇನೆ. ಪೊಲೀಸರಿಂದ ತಪ್ಪಿಸಿಕೊಳ್ಳಬೇಕು ಎಂದರೆ, ನೀನು ಪತ್ನಿಯನ್ನು ಇಲ್ಲಿಗೆ ಕರೆಸು ಎಂದರು. ತಾಂಡವ್‌ ಮತ್ತು ಶ್ರೇಷ್ಠಾಳಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ. ಆದರೆ ಅರೆಸ್ಟ್‌ ಆಗುವ ಬದಲು ಪತ್ನಿಯ ಸಹಾಯ ಕೇಳುವುದೇ ಬೆಸ್ಟ್‌ ಎಂದುಕೊಂಡು ಆಕೆಗೆ ಕಾಲ್‌ ಮಾಡಿದ್ದಾನೆ. ಇತ್ತ ಭೂಮಿಯೇ ಕುಸಿದ ಅನುಭವ ಭಾಗ್ಯಳಿಗೆ. ಕುಟುಂಬ, ಗಂಡ ಮಕ್ಕಳು ಎಂದು ತನ್ನ ಜೀವನ ಸವೆಸಿ, ಗಂಡನೇ ಸರ್ವಸ್ವ ಎಂದುಕೊಂಡ ತನ್ನ ಬಾಳು ಹೀಗಾಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅತ್ತೆ ಮತ್ತು ತಂಗಿ ಪೂಜಾ ವಿಷಯ ಮುಚ್ಚಿಟ್ಟಿರುವುದು ತಿಳಿದು ನೊಂದುಕೊಂಡಿದ್ದಾಳೆ. ಅದೇ ನೋವಿನಿಂದ ಮನೆಗೆ ಬಂದಿದ್ದಾಳೆ. ಆಗ ತಾಂಡವ್‌ ಕರೆ ಮಾಡಿದ್ದಾನೆ. 

ಗಂಡನ ಕರೆ ಸ್ವೀಕರಿಸಿದ್ದಾಳೆ ಭಾಗ್ಯ. ಆಗ ಅವನು ನನಗೆ ಒಂದು ಹೆಲ್ಪ್‌ ಬೇಕು, ಕೂಡಲೇ ಬಾ ಎಂದಿದ್ದಾನೆ. ಇದನ್ನು ಕೇಳಿ ಭಾಗ್ಯ ಏನು ಮಾಡ್ತಾಳೆ? ಏನು ಮಾಡಿದರೂ ಗಂಡನೇ ದೇವರು ಎನ್ನುವ ಮಾತಿನಂತೆ ಅಕ್ರಮ ಸಂಬಂಧ ಹೊಂದಿರುವವನ ಪರ ನಿಲ್ತಾಳಾ ಅಥವಾ ಇಂಥ ಗಂಡನನ್ನು ಧಿಕ್ಕರಿಸಿ ಮುಂದಿನ ಹೆಜ್ಜೆ ಇಡ್ತಾಳಾ ಎನ್ನುವುದು ಈಗಿರುವ ಪ್ರಶ್ನೆ. ಇದರ ಪ್ರೊಮೋ ರಿಲೀಸ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಭಾಗ್ಯಳಿಗೆ ಕಿವಿಮಾತು ಹೇಳುತ್ತಿದ್ದಾರೆ. ಇಂಥವನು ಜೈಲಿನಲ್ಲೇ ಇರಲು ಲಾಯಕ್ಕು. ಯಾವುದೇ ಕಾರಣಕ್ಕೂ ಅವನ ಪರ ನಿಲ್ಲಬೇಡ ಎನ್ನುತ್ತಿದ್ದಾರೆ. ಒಂದು ವೇಳೆ ನೀನು ಅವನನ್ನು ಕ್ಷಮಿಸಿದ್ರೆ, ನಾವು ನಿನ್ನನ್ನು ಬಿಡಲ್ಲ ಎಂದೂ ಬೆದರಿಕೆ ಹಾಕುತ್ತಿದ್ದಾರೆ. ಸೀರಿಯಲ್‌ ನೋಡೋದನ್ನೇ ಬಿಡ್ತೀವಿ ಎಂದೂ ಹೇಳ್ತಿದ್ದಾರೆ. ಅಷ್ಟಕ್ಕೂ ಮುಂದಿನ ಎಪಿಸೋಡ್‌ಗಳ ಶೂಟಿಂಗ್‌ ಇದಾಗಲೇ ಮುಗಿದಿರುತ್ತೆ ಅಲ್ವಾ? ಏನಾಗುತ್ತೋ ಕಾದು ನೋಡಬೇಕಿದೆ. 

ಸುಧಾರಾಣಿಯ ಕ್ರಷ್‌ ಯಾರು? ಇಷ್ಟದ ಹಾಡು, ಸಿನಿಮಾ ಯಾವುದು? 90 ಸೆಕೆಂಡ್‌ನಲ್ಲಿ ಸಿಕ್ಕಿತು ಉತ್ತರ!

 

click me!