ಗೀತಾ ಸೀರಿಯಲ್ (Geetha Serial) ನೋಡಿದೋರು ಭಾನುಮತಿಯನ್ನು ಮರೆಯೋದಕ್ಕೆ ಹೇಗೆ ಸಾಧ್ಯ ಅಲ್ವಾ? ಮಗನೆದುರು ಒಳ್ಳೆಯವಳಾಗಿ ಇದ್ದುಕೊಂಡು ಕುತಂತ್ರವನ್ನೆ ಮಾಡ್ತಾ, ವೀಕ್ಷಕರಿಗೆ ಕೊಲ್ಲುವಷ್ಟು ಕೋಪ ಬರುವಂತೆ ಮಾಡಿದ್ದ ಭಾನುಮತಿ, ಇದೀಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೂ ಕಾವೇರಿಗೆ ಸಹಾಯ ಮಾಡೋಕೆ ಬಂದಿದ್ದಾಳೆ.
ಸದ್ಯ ತೆಲುಗು ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಕನ್ನಡ ಕಿರುತೆರೆಯ ಭಾನುಮತಿ ಅಂತಾನೆ ಫೇಮಸ್ ಆಗಿರುವ ಶರ್ಮಿತಾ ಗೌಡ (Sharmitha Gowda), ಇದೀಗ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ಮಾಲ್ಡೀವ್ಸ್ ಕಡೆ ಪ್ರಯಾಣ ಮಾಡಿದ್ದಾರೆ. ಜೊತೆಗೆ ಅಲ್ಲಿಂದ ಒಂದಿಷ್ಟು ಫೋಟೊಗಳನ್ನು ಸಹ ಶೇರ್ ಮಾಡಿದ್ದಾರೆ.
ತೆಲುಗಿನ ಬ್ರಹ್ಮಮುಡಿ ಧಾರಾವಾಹಿಯಲ್ಲಿ(serial) ನಟಿಸುತ್ತಿರುವ ಶರ್ಮಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್,ಇವರು ತಮ್ಮ ಶೂಟಿಂಗ್ ಸೆಟ್ ನಲ್ಲಿ ಸಹ ಕಲಾವಿದರೊಂದಿಗೆ ವಿಡೀಯೋ, ರೀಲ್ಸ್ ಮಾಡುತ್ತಾ, ಯಾವಾಗ್ಲೂ ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸೀರಿಯಲ್ ಗಳಲ್ಲಿ ಸದಾ ಸೀರೆಯುಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಶರ್ಮಿತಾ ಗೌಡ, ರಿಯಲ್ ಲೈಫಲ್ಲಿ ಮತ್ತಷ್ಟು ಹಾಟ್, ಇದೀಗ ಮಾಲ್ಡೀವ್ಸ್ (Maldieves) ಫೋಟೊಗಳನ್ನು ಹಂಚಿಕೊಂಡಿದ್ದು, ಬಮ್ ಶಾರ್ಟ್, ಕ್ರಾಪ್ ಟಾಪ್ ಹಾಗೂ ಸ್ವಿಕಾಣಿಸಿಕೊಂಡಿದ್ದು, ಫ್ಯಾನ್ಸ್ ಸಖತ್ ಹಾಟ್ ಎಂದಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಶರ್ಮಿತಾ ನಿಯಾನ್ ಬಣ್ಣದ ಬಿಕಿನಿ ಧರಿಸಿ, ಬೀಚ್ ಮುಂದೆ ನಿಂತು ಬ್ಯಾಕ್ ಪೋಸ್ ನೀಡಿದ್ದಾರೆ. ಈ ಪೋಸ್ ನೋಡಿ, ಫ್ಯಾನ್ಸ್ ಫಿದಾ ಆಗಿದ್ದು, ಬೆಂಕಿ, ಹಾಟ್, ಸ್ಟನ್ನಿಂಗ್, ಸೆಕ್ಸಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮಾಲ್ಡೀವ್ಸ್ ಡೈರಿಯ ಮತ್ತೊಂದಿಷ್ಟು ಫೋಟೊಗಳನ್ನು ಶೇರ್ ಮಾಡಿರುವ ಶರ್ಮಿತಾ, ಡೆನಿಮ್ ಶಾರ್ಟ್ಸ್, ಕ್ರಾಪ್ ಟಾಪ್ ಜೊತೆಗೆ ಶ್ರಗ್ ಧರಿಸಿದ್ದಾರೆ. ಇದರ ಜೊತೆಗೆ ಗಾಗಲ್ಸ್, ಹ್ಯಾಟ್ ಹಾಕಿ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಬೋಟ್ ರೈಡ್ ಮಾಡುವ, ವಾಕಿಂಗ್ ಮಾಡುವ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Sharmitha gowda
ಈ ಎಲ್ಲಾ ಫೋಟೊ ನೋಡಿ, ಅಭಿಮಾನಿಯೊಬ್ಬ ಮೇಡಂ ನೀವ್ಯಾಕೆ ಇನ್ನೂ ಕಿರುತೆರೆಯಲ್ಲಿದ್ದೀರಿ? ನೀವು ಸಿನಿಮಾ ಹೀರೋಯಿನ್ ಥರ ಇದ್ದೀರಿ ಎಂದಿದ್ದಾರೆ. ಇನ್ನು ಕಿರುತೆರೆಯ ಖಡಕ್ ವಿಲನ್ ಆಗಿರುವ ಭಾನುಮತಿಯ ನಟನೆಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದು, ಮತ್ತೆ ಅವರನ್ನ ಕಿರುತೆರೆಯಲ್ಲಿ ನೋಡೋದಕ್ಕೆ ಕಾಯ್ತಿದ್ದಾರೆ.