ನಮ್ಮಿಬ್ಬರ ನಡುವೆ ಲವ್ ಆಗಿಲ್ಲ, ಕಂಕಣ ಭಾಗ್ಯ ಬರಲು ಸಾಧ್ಯವೇ ಇಲ್ಲ: ಧರ್ಮ ಕೀರ್ತಿರಾಜ್ ಸ್ಪಷ್ಟನೆ

By Vaishnavi Chandrashekar  |  First Published Nov 30, 2024, 4:47 PM IST

ಧರ್ಮ ಮತ್ತು ಅನುಷಾ ಮತ್ತೆ ಪ್ರೀತಿಸುತ್ತಿದ್ದಾರೆ..ಬಿಗ್ ಬಾಸ್‌ ಮನೆಯಿಂದ ಒಂದಾಗಿದ್ದಾರೆ ಅನ್ನೋ ಗಾಸಿಪ್‌ಗೆ ಸ್ವತಃ ಧರ್ಮ ಬ್ರೇಕ್ ಹಾಕಿದ್ದಾರೆ.
 


ಬಿಗ್ ಬಾಸ್ ಸೀಸನ್ 11ರಲ್ಲಿ ನಟ ಧರ್ಮ ಕೀರ್ತಿರಾಜ್‌ ಮತ್ತು ನಟಿ ಅನುಷಾ ರೈ ಸ್ಪರ್ಧಿಸಿದ್ದರು. 50 ದಿನಗಳನ್ನು ಪೂರೈಸುವ ಮುನ್ನವೇ ಅನುಷಾ ಹೊರ ಬಂದರು, 50 ದಿನಗಳನ್ನು ಪೂರೈಸಿ ಧರ್ಮ ಕೀರ್ತಿರಾಜ್‌ ಎಲಿಮಿನೇಟ್ ಆದರು. ಈ ಜೋಡಿಗಳ ನಡುವೆ ಪ್ರೀತಿ ಇದೆ ಎಂದು ಸಣ್ಣ ಚರ್ಚೆಯಲ್ಲಿ ಆಗಿದ್ದ ಗುಟ್ಟನ್ನು ಗೋಲ್ಡ್‌ ಸುರೇಶ್ ಮತ್ತು ಐಶ್ವರ್ಯ ರಿವೀಲ್ ಮಾಡುತ್ತಾರೆ. ನಿಜಕ್ಕೂ ಪ್ರೀತಿ ಇತ್ತಾ? ಧರ್ಮ ಮತ್ತು ಅನುಷಾ ಮದುವೆ ಮುರಿದು ಬಿದ್ದಿತ್ತಾ ಎಂದು ಧರ್ಮ ಸ್ಪಷ್ಟನೆ ನೀಡಿದ್ದಾರೆ.

'ಅನುಷಾ ಮತ್ತು ನನ್ನ ನಡುವೆ ಲವ್ ಅಂತ ಏನೂ ಇರಲಿಲ್ಲ ಅಲ್ಲಿ ಗೋಲ್ಡ್ ಸುರೇಶ್‌ ಅವರಿಂದ ಸ್ವಲ್ಪ ಕನ್ಫ್ಯೂಶನ್ ಆಗಿದೆ. ಮಾತುಕತೆಯಲ್ಲಿ ಅನುಷಾ ಹೇಳಿದ ರೀತಿನೇ ಬೇರೆ ಇತ್ತು ಆದರೆ ಗೋಲ್ಡ್‌ ಸುರೇಶ್ ಅದನ್ನು ಮತ್ತೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡರು. ಲವ್ ಅಂತ ಏನೂ ಇರಲಿಲ್ಲ ಆದರೆ ನಮ್ಮಿಬ್ಬರ ನಡುವೆ ಒಳ್ಳೆ ಫ್ರೆಂಡ್‌ಶಿಪ್‌ ಇತ್ತು..ಸಿನಿಮಾ ಶೂಟಿಂಗ್‌ ಸಮಯದಲ್ಲಿ ನಮ್ಮಿಬ್ಬರ ನಡುವೆ ಏನೋ ಮಿಸ್‌ ಅಂಡರ್‌ಸ್ಟಾಂಡಿಂಗ್ ಆಗಿತ್ತು ಅದಾದ ಮೇಲೆ ಕೋವಿಡ್‌ ಬಂದಿತ್ತು, ಆ ಸಮದಯಲ್ಲಿ ಯಾರನ್ನೂ ಭೇಟಿ ಮಾಡಲಿಲ್ಲ ಅದಾದ ಮೇಲೆ ಮತ್ತೆ ಎಲೆಕ್ಟ್ರಾನಿಕ್‌ ಸಿಟಿ ಕಡೆ ಮನೆ ಶಿಫ್ಟ್‌ ಮಾಡಿದೆ ಹಾಗಾಗಿ ಮತ್ತಷ್ಟು ಗ್ಯಾಪ್ ಕ್ರಿಯೇಟ್ ಆಗಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಧರ್ಮ ಮಾತನಾಡಿದ್ದಾರೆ.

Tap to resize

Latest Videos

ಅದ್ಧೂರಿಯಾಗಿ ನಡೆಯಿತು ಚಂದನಾ- ಪ್ರತ್ಯಕ್ಷ್ ರಿಸೆಪ್ಶನ್ 

ಅನುಷಾ ಅವರನ್ನು ನಾನು ಮತ್ತೆ ಭೇಟಿ ಮಾಡಿದ್ದು ಸಿನಿಮಾ ಶೂಟಿಂಗ್ ಸಮಯದಲ್ಲಿ ಅಲ್ಲಿ ಮತ್ತೆ ಫ್ರೆಂಡ್‌ಶಿಪ್ ಬೆಳೆಯಿತ್ತು ಆಮೇಲೆ ಡಬ್ಬಿಂಗ್ ಸಮಯದಲ್ಲಿ ಭೇಟಿ ಮಾಡಿದ್ದು. ಆಕೆಯ ಬರ್ತಡೇಯಲ್ಲಿ ಲಾಸ್ಟ್‌ ಭೇಟಿ ಮಾಡಿದ್ದು ಅದಾದ ಮೇಲೆ ಭೇಟಿ ಮಾಡಲಿಲ್ಲ. ಇಮ್ಮಿಬ್ಬರ ನಡುವೆ ಲವ್ ಆಯ್ತು ಬ್ರೇಕಪ್ ಆಯ್ತು ಅನ್ನೋದು ಏನೂ ಇರಲಿಲ್ಲ. ಫ್ರೆಂಡ್ಶಿಪ್‌ನಲ್ಲೂ ಒಂದು ಗಲಾಟೆ ಆಗುತ್ತೆ ಅದರಿಂದ ಡಿವೈಡ್ ಆಗ್ತೀವಿ. ಬಿಗ್ ಬಾಸ್ ಮನೆಯಿಂದ ನಾವು ಮತ್ತೆ ಭೇಟಿ ಆದ್ವಿ...ಮೊದಲೇ ಪರಿಚಯ ಇದ್ದ ಕಾರಣ ನಮ್ಮಿಬ್ಬರ ನಡುವೆ ಮತ್ತೆ ಒಳ್ಳೆಯ ಫ್ರೆಂಡ್ಶಿಪ್ ಕನೆಕ್ಷನ್ ಬೆಳೆಯುತ್ತದೆ.  ಇಬ್ಬರ ಹೆಸರನ್ನು ಪದೇ ಪದೇ ಹೆಸರು ಎಳೆಯುತ್ತಿದ್ದ ಕಾರಣ ವೀಕೆಂಡ್ ಎಪಿಸೋಡ್‌ನಲ್ಲಿ ಅನುಷಾ ಸ್ಪಷ್ಟನೆ ನೀಡಿದ್ದಾರೆ' ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಕೂತು ಕೆಲಸ ಮಾಡ್ತಿದ್ರೆ ಹೊಟ್ಟೆ ಬರ್ತಿದ್ಯಾ? ಈ ಐಟಂ ತಿಂದು ಟೆನ್ಶನ್ ಕಮ್ಮಿ ಮಾಡ್ಕೊಳ್ಳಿ

ನಮ್ಮಿಬ್ಬರ ನಡುವೆ ಕಂಕಣ ಭಾಗ್ಯ ಬರಲು ಸಾಧ್ಯವೇ ಇಲ್ಲ ಏಕೆಂದರೆ ನಾವು ಸ್ನೇಹಿತರಾಗಿದ್ದೀವಿ ಸ್ನೇಹಿತರಾಗಿರಲು ಇಷ್ಟ ಪಡುತ್ತೀವಿ. ಅನುಷಾ ಅವರ ಪ್ಲ್ಯಾನ್ ಮತ್ತು ಲೈಫ್‌ಸ್ಟೈಲ್ ಬೇರೆ ಇದೆ ನನ್ನನ್ನು ಕನಸು ಮತ್ತು ಕೆಲಸಗಳು ಬೇರೆ ಇದೆ ಆದರೆ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೂ ನಾವು ನಟಿಸುತ್ತೀವಿ ಏಕೆಂದರೆ ಕೆಲಸ ಬೇರೆ ಮತ್ತು ವೈಯಕ್ತಿಕ ಜೀವನ ಬೇರೆ ಎಂದಿದ್ದಾರೆ ಧರ್ಮ.

click me!