ಸೀರಿಯಲ್‌ ಸೆಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ವಿಡಿಯೋ ವೈರಲ್‌

Published : Nov 30, 2024, 04:47 PM IST
ಸೀರಿಯಲ್‌ ಸೆಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ವಿಡಿಯೋ ವೈರಲ್‌

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸೆಟ್‌ನಲ್ಲಿ ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ಇದರ ವಿಡಿಯೋ ವೈರಲ್‌ ಆಗಿದೆ.   

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸದ್ಯ ಹೊಸ ಸ್ನೇಹಾಳ ಎಂಟ್ರಿಯಾಗಿದ್ದು, ಕಂಠಿ ಮತ್ತು ಈಕೆ ಯಾವಾಗ ಒಂದಾಗ್ತಾರೆ ಎಂದು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಈ ಸ್ನೇಹಾಳನ್ನು ಕಂಡರೆ ಕಂಠಿ ಕೊತ ಕೊತ ಕುದಿಯುತ್ತಿದ್ದಾನೆ. ತನ್ನ ತಾಯಿ ಬಂಗಾರಮ್ಮನ ಸಾಯಿಸಲು ಹೋದ ಹಾಗೂ ಪತ್ನಿ ಸ್ನೇಹಾಳನ್ನು ಸಾವಿಗೆ ಕಾರಣರಾಗಿರುವ ಸಿಂಗಾರಮ್ಮ ಮತ್ತು ಆತನ ಮಗನನ್ನು ಮುಗಿಸಿಬಿಡಲು ಹೋಗುವಾಗ ಹೊಸ ಸ್ನೇಹಾ ತಡೆದಿದ್ದಾಳೆ. ಇದಾಗಲೇ ಕೆಲವರಿಗೆ ಚೂರಿ ಇರಿತ ಮಾಡಿದ್ದ ಕಂಠಿ. ಪೊಲೀಸರು ಬಂದಾಗ ಸ್ನೇಹಾ, ತನ್ನ ಕೈಗೆ ಚೂರಿಯನ್ನು ತೆಗೆದುಕೊಂಡು ತಾನೇ ಅಪರಾಧ ಮಾಡಿದಂತೆ ಬಿಂಬಿಸಿದ್ದಾಳೆ. ಸದ್ಯ ಸ್ನೇಹಾ ಜೈಲುಪಾಲಾಗಿದ್ದಾಳೆ. ಇದರಿಂದ ಕಂಠಿ ಅವಳ ಮೇಲೆ ಪ್ರೀತಿ ತೋರ್‍ತಾನಾ ಕಾದು ನೋಡಬೇಕಿದೆ.

ಇದು ಕಂಠಿ ಮತ್ತು ಸ್ನೇಹಾ ಕಥೆಯಾದರೆ, ಅತ್ತ ಪುಟ್ಟಕ್ಕನ ಕಿರಿಯ ಮಗಳು ಸುಮಾಳ ಲವ್‌ ಸ್ಟೋರಿಯೂ ಸದ್ದಿಲ್ಲದೇ ನಡೆಯುತ್ತಿದೆ. ಇನ್ನು ಸುಮಾ ಮತ್ತು ಹೊಸ ಸ್ನೇಹಾ ಶೂಟಿಂಗ್‌ ಸೆಟ್‌ನಲ್ಲಿ ಹೇಗಿರ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ ಇದ್ದೇ ಇರುತ್ತದೆ. ಗಜೇಂದ್ರ ಮರಸಾನಿಗೆ ಅವರು ಈ ವಿಡಿಯೋ ಅನ್ನು ಯೂಟ್ಯೂಬ್‌ನಲ್ಲಿ ಶೇರ್‍‌ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾ ಮತ್ತು ಹೊಸ ಸ್ನೇಹಾ ಅವರನ್ನು ನೋಡಬಹುದು. ಇಬ್ಬರೂ ಹೇಗೆ ತಮಾಷೆ ಮಾಡುತ್ತಾರೆ ಎನ್ನುವುದನ್ನೂ ನೋಡಬಹುದಾಗಿದೆ. ಇನ್ನು,  ಸುಮಾ ಪಾತ್ರಧಾರಿಯ ರಿಯಲ್‌ ಹೆಸರು ಶಿಲ್ಪಾ ಸವಸೆರೆ ಹಾಗೂ ಹೊಸ ಸ್ನೇಹಾ ಪಾತ್ರಧಾರಿಯ ಹೆಸರು ಅಪೂರ್ವ ನಾಗರಾಜ್‌. 

ತುಂತುರು ಅಲ್ಲಿ ನೀರ ಹಾಡು... ಎಂದ ಅಮೃತಧಾರೆ ಮಲ್ಲಿ ಕಂಠಕ್ಕೆ ಫ್ಯಾನ್ಸ್‌ ಫಿದಾ! ವಿಡಿಯೋ ವೈರಲ್‌

ಶಿಲ್ಪಾ ಸವಸೆರೆ ಕುರಿತು ಹೇಳುವುದಾದರೆ, ಇವರು ಮಾಡೆಲ್​ ಹಾಗೂ ಫ್ಯಾಷನ್​ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇನ್ನು ಶಿಲ್ಪ ಬಣ್ಣದ ಲೋಕದಲ್ಲಿ ಕಾಲಿಡಲು ಆಕೆಗೆ ತನ್ನ ಮನೆಯಲ್ಲಿ ಬಹಳ ಪ್ರೋತ್ಸಾಹ ಕೂಡ ಸಿಕ್ಕಿದೆ.  ಮೊದಲು ಇವರು ಗೀತಾ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಈ ಧಾರಾವಾಹಿಯಲ್ಲಿ ವಿಜಯ್ ತಂಗಿ ಶ್ರುತಿ ಪಾತ್ರದಲ್ಲಿ ಮಿಂಚಿದ್ದರು. ಆ ಬಳಿಕ ಇವರಿಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಾನ್ಸ್ ಸಿಕ್ಕಿದ್ದು, ಇಲ್ಲಿ ಸುಮಾ ಆಗಿ ನಟಿಸುತ್ತಿದ್ದಾರೆ.   ಹೈಸ್ಕೂಲ್ ಬಳಿಕ  ಡಿಪ್ಲೋಮೋ ಇನ್ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡಿದ್ದಾರೆ ಶಿಲ್ಪಾ. 

ಇನ್ನು ಅಪೂರ್ವ ನಾಗರಾಜ್ ಕುರಿತು ಹೇಳುವುದಾದರೆ,  ಅಪೂರ್ವ ನಾಗರಾಜ್ ಅವರು ಭರತನಾಟ್ಯ ಕಲಾವಿದೆ. ರಂಗಭೂಮಿ ಕಲಾವಿದೆಯಾಗಿಯೂ ಆರು ವರ್ಷಗಳಿಂದ  ತೊಡಗಿಸಿಕೊಂಡಿದ್ದಾರೆ.  ಸಾಕಷ್ಟು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.  ಕ್ಲೌನ್ಸ್ ರೆವರಿ ಎಂಬ ತಮ್ಮದೇ ಸ್ವಂತ ಥಿಯೇಟರ್ ಕಂಪೆನಿಯನ್ನೂ  ಹೊಂದಿದ್ದಾರೆ. ಆದರೆ ಇಂಥ ಸೀರಿಯಲ್‌ನಲ್ಲಿ ನಟನೆ ಮಾಡುತ್ತಿರುವುದು ಇದೇ ಮೊದಲು, ಕ್ಯಾಮೆರಾ ಫೇಸ್‌ ಮಾಡಿರುವುದು ಇದೇ ಮೊದಲು ಎಂದು ನಟಿ ಈಗ ಹೇಳಿದ್ದಾರೆ. ಅದರಲ್ಲಿಯೂ ಉಮಾಶ್ರೀ ಅವರಂಥ ನಟಿಯ ಎದುರು ಪಾತ್ರ ಮಾಡುವುದು ಎಂದರೆ ಸುಲಭದ ಮಾತಲ್ಲ. ಈ ಪಾತ್ರಕ್ಕೆ ಆಡಿಷನ್‌ ಬಂದಾಗ ತುಂಬಾ ಜನ ಬಂದಿದ್ರು. ನನಗೆ ಈ ಪಾತ್ರ ಸಿಗುತ್ತದೆ ಎಂಬ ವಿಶ್ವಾಸವೂ ಇರಲಿಲ್ಲ. ಸೆಲೆಕ್ಟ್‌ ಆದ ಮೇಲೆ ತುಂಬಾ ಹಿಂಜರಿಕೆನೇ ಇತ್ತು ಎಂದು ನಟಿ ಹೇಳಿದ್ದಾರೆ. ಈ ಸೀರಿಯಲ್‌ ಟಾಪ್‌ ಒನ್‌ನಲ್ಲಿ ಇರುವ ಕಾರಣ, ನನ್ನ ಎಂಟ್ರಿ ಆದ ಮೇಲೂ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದಿದ್ದಾರೆ ಸ್ನೇಹಾ ಅರ್ಥಾತ್‌ ಅಪೂರ್ವ ನಾಗರಾಜ್.
 

ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್‌ ಗುರೂಜಿ ಶಾಕಿಂಗ್‌ ರಹಸ್ಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!