ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ರಿಯಾಲಿಟಿ ಶೋನ ಮೆಗಾ ಆಡಿಷನ್ ಸ್ಪರ್ಧಿಗಳ ಆಯ್ಕೆ ನಿಮ್ಮ ಕೈಯಲ್ಲಿ!
ಜೀ ಕನ್ನಡ ಚಾನೆಲ್ನಲ್ಲಿ (Zee Kannad Channel) ವಾರಾಂತ್ಯದಲ್ಲಿ ನಡೆಸಿಕೊಡುವ ಸರಿಗಮಪ ಸಂಗೀತ ರಿಯಾಲಿಟಿ ಷೋ ಅಪಾರ ಪ್ರಮಾಣದಲ್ಲಿ ಜನ ಮೆಚ್ಚುಗೆ ಗಳಿಸಿದೆ. ರಾಜ್ಯಗಳ ವಿವಿಧ ಮೂಲೆಗಳ ಸಂಗೀತ ಪ್ರತಿಭೆಗಳ ದನಿಯನ್ನು ಆಲಿಸಲು ಜನರು ಕಾತರದಿಂದ ಈ ಷೋಗಾಗಿ ಕಾಯುತ್ತಿರುತ್ತಾರೆ. ಇದಾಗಲೇ 20 ಸರಣಿಗಳನ್ನು (season) ಪೂರೈಸಿದ್ದು, ಇದೀಗ 21ನೇ ಸೀಸನ್ ಶುರುವಾಗುವ ಹಂತದಲ್ಲಿದೆ. ಕಳೆದ ಬಾರಿ, ಹೊಸತನಕ್ಕೆ ಕೈಹಾಕಲಾಗಿತ್ತು. 20ನೇ ಸೀಸನ್ ಅನ್ನು ವಿಶೇಷವಾಗಿ ಹೊರತರಲು ನಿರ್ಧರಿಸಿದ್ದ ತಂಡ, ವಿದೇಶಗಳ ಪ್ರತಿಭೆಗಳನ್ನು ಗುರುತಿಸುವ ಸಾಹಸಕ್ಕೆ ಕೈಹಾಕಿತ್ತು. ಈ ಹಿಂದೆ ಕೇವಲ ಕರ್ನಾಟಕದಲ್ಲಿ ಆಡಿಷನ್ ನಡೆದಿತ್ತು. ಆದರೆ ಕಳೆದ ಬಾರಿ ಆಡಿಷನ್ ನಡೆದಿರುವ ಸಂದರ್ಭದಲ್ಲಿ ಕರ್ನಾಟಕದ ಹೊರ ರಾಜ್ಯಗಳ ಪ್ರತಿಭೆಗಳೂ ಪಾಲ್ಗೊಂಡಿದ್ದು, ಹಲವರಿಗೆ ಈ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕಳೆದ ವರ್ಷದ ಸೀಸನ್‌ನಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದ ತಂಡ, ಕನ್ನಡದ ಕಂಪನ್ನು ಹೊರ ದೇಶಗಳಿಗೂ ಬಿತ್ತರಿಸುವ ಪ್ರಯತ್ನಕ್ಕೆ ಮುಂದಾಗಿತ್ತು.
ಇದೀಗ ಮತ್ತೊಂದು ಸೀಸನ್ ಬರುತ್ತಿದೆ. ಅದರ ಪ್ರೊಮೋಗಳು ಸಾಕಷ್ಟು ಉತ್ಸಾಹ ಮೂಡಿಸಿದೆ. ಇದಾಗಲೇ ಕೆಲವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅವರ ಪೈಕಿ ಅಂತಿಮವಾಗಿ ಆಯ್ಕೆ ಆಗುವವರು ಯಾರುಎನ್ನುವುದನ್ನು ಆಯ್ಕೆ ಮಾಡುವ ಅಧಿಕಾರವನ್ನು ವೀಕ್ಷಕರಿಗೆ ಬಿಡಲಾಗಿದೆ. ನೀವಿಷ್ಟು ದಿನ ಕಾತರ, ಕುತೂಹಲದಿಂದ ಕಾಯ್ತಿದ್ದ ಸಂಗೀತ ಸಾಮ್ರಾಜ್ಯದ ವೈಭವ ಹೊಸ ಥ್ರಿಲ್‌ನೊಂದಿಗೆ ಮತ್ತೆ ಬರ್ತಿದೆ ನಿಮ್ಮ ಮುಂದೆ! ಎನ್ನುವ ಶೀರ್ಷಿಕೆ ಅಡಿ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಕುತೂಹಲದ ಸಂಗತಿ ಏನೆಂದರೆ, ವೀಕ್ಷಕರು ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕಿದೆ. ಇದರಲ್ಲಿ ಕೆಲವು ಸ್ಪರ್ಧಿಗಳು ಇದ್ದಾರೆ. ಅವರನ್ನು ಆಯ್ಕೆ ಮಾಡುವುದು ವೀಕ್ಷಕರಿಗೆ ಬಿಡಲಾಗಿದೆ.
ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್ ಗುರೂಜಿ ಶಾಕಿಂಗ್ ರಹಸ್ಯ!
ಈ ಬಾರಿ ತೀರ್ಪುಗಾರರಾಗಿ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಇದ್ದಾರೆ. ವೀಕ್ಷಕರೇ ಆಯ್ಕೆ ಮಾಡುವುದು ಹೇಗೆ ಎನ್ನುವುದನ್ನು ಕುತೂಹಲದ ಸ್ಟೈಲ್‌ನಲ್ಲಿ ವಿವರಿಸಿದ್ದಾರೆ ಅರ್ಜುನ್ ಜನ್ಯ. ಇದಕ್ಕಾಗಿ ವೀಕ್ಷಕರು zeekannadasaregamapa ಇನ್ಸ್ಟಾಗ್ರಾಮ್ ಖಾತೆಗೆ ಹೋಗಬೇಕು. ಅಲ್ಲಿ ಕೆಲವು ಸ್ಪರ್ಧಿಗಳು ಇದ್ದಾರೆ. ಮೆಗಾ ಆಡಿಷನ್ ಸ್ಪರ್ಧಿಗಳನ್ನು ಲೈಕ್ ಮಾಡುವ ಮೂಲಕ ಸೆಲೆಕ್ಟ್ ಮಾಡಬಹುದು. ಅದರಲ್ಲಿ ಯಾರ ಹಾಡು ಇಷ್ಟವೋ ಅವರ ಮೇಲೆ ಲೈಕ್ ಮಾಡಬೇಕು. ಹೆಚ್ಚು ಮತ ಗಳಿಸಿದವರು ಫೈನಲ್ ಆಗಿ ಕಾರ್ಯಕ್ರಮಕ್ಕೆ ಸೆಲೆಕ್ಟ್ ಆಗುತ್ತಾರೆ ಎಂದು ತಿಳಿಸಿದ್ದಾರೆ.
ಅದೇ ಇನ್ನೊಂದೆಡೆ, ಜನ ಸಾಮಾನ್ಯರು ನಮ್ಮದೇ ಕರ್ನಾಟಕದ ಹಳ್ಳಿ ಮೂಲೆಗಳಲ್ಲಿ ಯಾವುದೇ ಅವಕಾಶಗಳು ಸಿಗದೇ ವಂಚಿತರಾಗಿರುವ ಹಲವಾರು ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಬೇಕಿದೆ. ವಿದೇಶಿಗರಿಗೆ ಅವಕಾಶಗಳು ಹಲವಾರು ಇರುತ್ತವೆ. ಆದರೆ ನಮ್ಮ ನೆಲದ ಮಕ್ಕಳನ್ನು ಗುರುತಿಸಿ ಎಂದೂ ಹೇಳುತ್ತಿದ್ದಾರೆ. ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇನ್ನೂ ಹೆಚ್ಚಿನ ಕನ್ನಡಿಗರಿಗೆ ಈ ಅವಕಾಶ ಸಿಕ್ಕರೆ ಒಳ್ಳೆಯದು ಎನ್ನುವುದು ಅವರ ಅಭಿಲಾಷೆ. ಇನ್ನು ಕೆಲವರು, ಕನ್ನಡಿಗರ ಮನಗೆದ್ದ ಸಂಗೀತ ಕಾರ್ಯಕ್ರಮ (Music relality show) ಶೀಘ್ರದಲ್ಲೇ ವಿದೇಶಕ್ಕೆ ಹಾರಿ ಅಲ್ಲಿನ ಅದ್ಭುತ ಸಂಗೀತ ಪ್ರತಿಭೆಗಳನ್ನು ಆರಿಸಿ ಜಗತ್ತಿಗೆ ಪರಿಚಯಿಸಲಿ ಎಂದು ಹಾರೈಸುತ್ತಿದ್ದಾರೆ.
ಮದ್ವೆಯಾದ ವಿಷಯ ತಿಳಿಸಿ ಶಾಕ್ ನೀಡಿದ್ದ ನಟಿ ಅಶ್ವಿನಿ ಕಾಶ್ಮೀರದಲ್ಲಿ ಜಾಲಿ ಮೂಡ್: ವಿಡಿಯೋ ವೈರಲ್