
ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಒಂಥರಾ ಮೋಟಿವೇಶನ್ ಸ್ಪೀಕರ್ ಕೂಡ ಹೌದು. ಇದ್ದಿದ್ದನ್ನು ಇದ್ದ ಹಾಗೆ ಅವರಾಡುವ ಮಾತುಗಳು ಅದೆಷ್ಟೋ ಜನರ ಪಾಲಿಗೆ ನಿಜವಾಗಿಯೂ ಮೋಟಿವೇಶನಲ್ ಸ್ಪೀಚ್ ಎಂದು ಹೇಳುವುದಲ್ಲಿ ತಪ್ಪಿಲ್ಲ. ನಟ ಸುದೀಪ್ ಯಾವುದೋ ಸಂದರ್ಶನದಲ್ಲಿ ಆಡಿದ ಮಾತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ. ಅಲ್ಲಿ ಬಂದ ಕಾಮೆಂಟ್ ನೋಡಿದರೇ, ಅವರ ಮಾತುಗಳಿಗೂ ಅಭಿಮಾನಿಗಳು ಇದ್ದಾರೆ ಎಂಬ ಸಂಗತಿ ಅರ್ಥವಾಗುತ್ತದೆ!.
ಹಾಗಿದ್ದರೆ ನಟ ಸುದೀಪ್ ಏನು ಹೇಳಿದ್ರು? ಆ ವೈರಲ್ ಆಗುತ್ತಿರೋ ವಿಡಿಯೋದಲ್ಲಿ ಅದೇನಿದೆ ನೋಡಿ.. 'ಹತ್ತು ಜನರ ಮೇಲೆ ಅಧಿಕಾರ ಚಲಾಯಿಸೋದು ದೊಡ್ಡತನ ಅಲ್ಲ ಸರ್ ನನ್ ಪ್ರಕಾರ. ಆ ಹತ್ತು ಜನರ ಆತಿಥ್ಯವನ್ನು ಸ್ವೀಕರಿಸೋದ್ರಲ್ಲಿ ಇರೋದು ದೊಡ್ಡತನ. ನಮ್ಗೆ ಜೀವ ಕೊಡೋರೂ ಇರ್ತಾರೆ. ಆದ್ರೆ ಅದೇ ನಮ್ಮ ದೊಡ್ಡಸ್ತಿಕೆ ಆಗಲ್ಲ ಸರ್.. ಆ ಜೀವ ಕೊಡೋರನ್ನು ಉಳಿಸಿಕೊಳ್ಳೋದ್ರಲ್ಲಾಗ್ಲೀ ಅಥವಾ ಅವ್ರನ್ನ ಬದುಕಿಸಿಕೊಳ್ಳೋದ್ರಲ್ಲಿ ಇರೋದು ನಮ್ ದೊಡ್ಡತನ.
ವಿಷ್ಣುವರ್ಧನ್-ಮಾಲಾಶ್ರೀ ಜೋಡಿ ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿತ್ತು; ಆದ್ರೆ ಆಗಿದ್ದೇ ಬೇರೆ!
ನಾನು ಚಿಕ್ಕವ್ನು, ಆದ್ರೂ ಹೇಳ್ಬೇಕು ಅಂತ ಅನ್ನಿಸ್ತು ಸರ್, ಹೇಳಿದೆ..' ಅನ್ನೋ ಸುದೀಪ್ ಡೈಲಾಗ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದು ಯಾವುದೋ ಸಿನಿಮಾದಲ್ಲಿ ಹೇಳಿರೋ ಡೈಲಾಗ್ ರೀತಿಯೇ ಕೇಳಿಸುತ್ತದೆ. ಆದರೆ, ಸುದೀಪ್ ಅವರು ಸಂದರ್ಶನಗಳಲ್ಲಿ ಕೂಡ ಅದೇ ರೀತಿ ಮಾತನಾಡುತ್ತಾರೆ. ಹೀಗಾಗಿ ಅದು ಯಾವುದೇ ಆದರೂ ಹೇಳಿರುವ ಮಾತುಗಳು ತುಂಬಾ ಮೌಲ್ಯಯುತವಾಗಿವೆ. ನಟ ಸುದೀಪ್ ಅವರು ಸ್ನೇಹ-ಸಂಬಂಧಗಳಿಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಜೊತೆಗೆ, ಅವರ ಪೋಷಕರಿಗೆ ಗೌರವ ಕೊಡುತ್ತಾರೆ.
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಈ ವರ್ಷ, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಮ್ಯಾಕ್ಸ್ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕಿ.
ಡಾ ರಾಜ್ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.