ಕಿರುತೆರೆ ನಟಿ ಅಶ್ವಿನಿ ಅವರು ಮದುವೆಯಾಗಿರುವ ವಿಷಯ ತಿಳಿಸಿ ಸರ್‍ಪ್ರೈಸ್ ನೀಡಿರೋ ಬೆನ್ನಲ್ಲೇ ಈಗ ಕಾಶ್ಮೀರಲ್ಲಿ ಜಾಲಿಮೂಡ್‌ನಲ್ಲಿರೋ ವಿಡಿಯೋ ಶೇರ್ ಮಾಡಿದ್ದಾರೆ.
ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡು, ಬಳಿಕ ಬಣ್ಣದ ಲೋಕದಿಂದ ದೂರವೇ ಸರಿದಿದ್ದ ನಟಿ ಅಶ್ವಿನಿ ನಿನ್ನೆಯಷ್ಟೇ ಮದುವೆಯಾದ ವಿಷಯವನ್ನು ತಿಳಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅದೂ ಮದುವೆಯಾಗಿ ವರ್ಷದ ಬಳಿಕ ಈ ವಿಷಯವನ್ನು ತಿಳಿಸಿದ್ದು ಎಲ್ಲರನ್ನೂ ಬೆರಗುಗೊಳಿಸಿದೆ. ಸೀರಿಯಲ್‌ನಿಂದ ದೂರವಾದ ಬಳಿಕ, ಯೂಟ್ಯೂಬ್ ಚಾನೆಲ್ ತೆರೆದು ಅಲ್ಲಿ ಸಾಕಷ್ಟು ವಿಷಯಗಳನ್ನು ನಟಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಮೂಲಕ ಹಾಡುಗಳು, ಅಡುಗೆ, ಮನೆಯ ಬಗ್ಗೆ, ಪ್ರವಾಸ... ಹೀಗೆ ಏನಾದರೊಂದು ಮಾಹಿತಿಯನ್ನು ಅವರು ಯೂಟ್ಯೂಬ್ ಮೂಲಕ ನೀಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ, ಮದುವೆ, ಗಂಡನ ಬಗ್ಗೆ ವರ್ಷದಿಂದ ಏನೂ ಹೇಳಿರಲಿಲ್ಲ. ನಿನ್ನೆಯಷ್ಟೇ ಈ ವಿಷಯವನ್ನು ತಿಳಿಸಿದ್ದ ನಟಿ, ತಮ್ಮ ವೈಯಕ್ತಿಕ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳೋದು ಇಷ್ಟವಿರಲಿಲ್ಲ ಎಂದಿದ್ದಾರೆ. ಹಾಗಾಗಿಯೇ ಮದುವೆ ವಿಚಾರ ಮುಚ್ಚಿಟ್ಟಿದ್ದರು ಎನ್ನುವುದನ್ನು ತಿಳಿಸಿದ್ದಾರೆ.
ಇದೀಗ ತಮ್ಮ ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವದ (wedding anniversary)ಸಂದರ್ಭದಲ್ಲಿ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಈಗ ಮತ್ತೊಂದು ವಿಡಿಯೋ ಶೇರ್ ಮಾಡಿರುವ ನಟಿ, ಕಾಶ್ಮೀರದಲ್ಲಿ ಪತಿಯ ಜೊತೆ ರೊಮಾನ್ಸ್ ಮಾಡುತ್ತಿರುವುದನ್ನು ತೋರಿಸಿದ್ದಾರೆ. ಮದುವೆಯ ನಂತರ ಹನಿಮೂನ್‌ಗೆ ಹೋಗಿದ್ದಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದರಲ್ಲಿ ನಟಿ, ರೋಜಾ ಸಿನಿಮಾದ ಯೇ ಹಸಿ ವಾದಿಯಾ... ಯೆ ಖುಲಾ ಆಸಮಾನ್... ಹಾಡಿನ ಹಿನ್ನೆಲೆಯಲ್ಲಿ ಪತಿಯ ಜೊತೆ ಇರುವುದನ್ನು, ಅಲ್ಲಿ ಎಂಜಾಯ್ ಮಾಡುವುದನ್ನು ತೋರಿಸಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ದಂಪತಿಗೆ ಅಭಿಮಾನಿಗಳು ಮನತುಂಬಿ ಹಾರೈಸುತ್ತಿದ್ದಾರೆ.
ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್ ಗುರೂಜಿ ಶಾಕಿಂಗ್ ರಹಸ್ಯ!
ಇದೇ 27ರಂದು ನಟಿ ಮದುವೆಯಾಗಿ ಒಂದು ವರ್ಷ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಮಾಹಿತಿಯನ್ನು ನಿನ್ನೆಯಷ್ಟೆ ಶೇರ್ ಮಾಡಿಕೊಂಡಿದ್ದರು. ಫೋಟೋಗಳನ್ನು ಶೇರ್ ಮಾಡಿಕೊಂಡ ನಟಿ ಎಲ್ಲರಿಗೂ ನಮಸ್ಕಾರ. ನನ್ನ ಜೀವನದ ಬಹು ಮುಖ್ಯವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮತ್ತು ಅಜಯ್ ಅವರು ಪ್ರೀತಿಸಿ 15 ವರ್ಷಗಳಾಗಿವೆ. 27/11/2024 ಇಂದು ನಾವು ಮದುವೆಯಾದ ದಿನ ಅಂದರೆ ಮದುವೆಯ ವಾರ್ಷಿಕೋತ್ಸವ. ನಮ್ಮದು love come Arrange Marriage. ನಾನು ಮದುವೆಯಾಗಿರುವ ವಿಷಯ ನನ್ನ ಆತ್ಮೀಯರಿಗೆ ತಿಳಿದಿದೆ. ಆದರೆ ಈ ವಿಷಯವನ್ನು ನಾನು ಪಬ್ಲಿಕ್ ಮಾಡಿರಲಿಲ್ಲ ಅಷ್ಟೇ.ಇಂದು ಆ ಸಮಯ ಬಂದಿದೆ ಹಾಗಾಗಿ ತಿಳಿಸುತ್ತಿದ್ದೇನೆ. ಇಲ್ಲಿ ನಾನು ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ಸಂಪೂರ್ಣ ಮಾಹಿತಿ Nimma Ashwini YouTube channelನಲ್ಲಿ ಇದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುವ ಅಜಯ್ ಮತ್ತು ಅಶ್ವಿನಿ ಅಂತ ಬರೆದುಕೊಂಡಿದ್ದರು.
ಈ ವಿಷಯವನ್ನು ಗುಟ್ಟಾಗಿ ಇಟ್ಟಿರುವ ಬಗ್ಗೆಯೂ ತಿಳಿಸಿರುವ ನಟಿ, ನನಗೆ ನನ್ನ ಸೋಷಿಯಲ್ ಮೀಡಿಯಾದಲ್ಲಿ ಪರ್ಸನಲ್ ಮಾಹಿತಿ ಹಂಚಿಕೊಳ್ಳೋಕೆ ಇಷ್ಟ ಇರಲಿಲ್ಲ. ಹಾಗಾಗಿ ಹಂಚಿಕೊಂಡಿಲ್ಲ ಎಂದಿದ್ದಾರೆ. ಇನ್ನೂ ನಟಿ ಈ ವಿಚಾರವನ್ನು ಈಗ ಹೇಳಿಕೊಳ್ಳಲು ಒಂದು ಕಾರಣ ಕೂಡ ಇದೆ ಎಂದಿರುವ ನಟಿ, ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರಂತೆ, ನೀವು ಒಬ್ಬರೇ ಇರೋದಾ, ನಿಮಗೆ ಫ್ಯಾಮಿಲಿ ಇಲ್ವಾ? ನೀವು ಏಕೆ ಇನ್ನೂ ಮದುವೆ ಆಗಿಲ್ಲ ಎಂದು ಕೆಲವರು ಕೇಳಿದ್ರೆ, ಮದ್ವೆ ಬಗ್ಗೆ ಗೊತ್ತಿರೋರು, ಏನು ನೀವು ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡೋದಿಲ್ಲ, ನಿಮ್ಮ ಮತ್ತು ಗಂಡನ ನಡುವೆ ಎಲ್ಲಾ ಸರಿ ಇಲ್ವ ಅಂತಾನೂ ಕೇಳಿದ್ದಾರಂತೆ. ಹಾಗಾಗಿಯೇ ನಟಿ ಇದೀಗ ಮದುವೆಯಾಗಿ ವರ್ಷಗಳ ನಂತರ ನಟಿ ಅಶ್ವಿನಿ ಮದುವೆ ಬಗ್ಗೆ ರಿವೀಲ್ ಮಾಡಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಆಗಿದ್ದು, ನಟಿ ಕಳೆದ 15 ವರ್ಷಗಳಿಂದ ಅಜಯ್ ಅವರನ್ನು ಲವ್ ಮಾಡುತ್ತಿದ್ದರಂತೆ. ಕುಟುಂಬಸ್ಥರನ್ನು ಒಪ್ಪಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿರೋದಾಗಿ ತಿಳಿಸಿದ್ದಾರೆ. ತಮ್ಮ ಪತಿಯ ಬಗ್ಗೆ ಮಾತನಾಡಿರುವ ಅಶ್ವಿನಿ, ಅಜಯ್ ಅವರು ತುಂಬಾನೆ ಸಪೋರ್ಟಿವ್ ಆಗಿದ್ದಾರೆ. ವಿಡಿಯೋ, ಶೂಟಿಂಗ್ ಎಲ್ಲಾದಕ್ಕೂ ಇವರು ನೆರವು ನೀಡುತ್ತಾರೆ. ನಮ್ಮಿಬ್ಬರ ಮಧ್ಯೆ ಜಗಳ, ಕೋಪ ಎಲ್ಲಾ ನಡೆಯುತ್ತೆ, ಆದ್ರೆ ಪ್ರೀತಿ ಎಲ್ಲಾದಕ್ಕಿಂತ ಜಾಸ್ತಿ ಇದೆ ಎಂದಿದ್ದಾರೆ.
ಸೀರಿಯಲ್ ಸೆಟ್‌ನಲ್ಲಿ ಪುಟ್ಟಕ್ಕನ ಮಕ್ಕಳು ಸುಮಾ- ಹೊಸ ಸ್ನೇಹಾ ಹೇಗಿರ್ತಾರೆ? ವಿಡಿಯೋ ವೈರಲ್