Bigg Boss ಮನೆಯಲ್ಲಿ ಮಾಣಿಕ್ಯ ನಟಿ ಕಿರಣ್‌ ರಾಥೋಡ್‌: ಇಲ್ಲಿವೆ ವಿಡಿಯೋ ಕಾಲಿಂಗ್‌ ಫೋಟೋಗಳು

First Published Sep 4, 2023, 1:50 PM IST

ಕನ್ನಡದ ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಕ್ರಿಯರಾಗಿದ್ದಾರೆ. ಈಗ ಕಿರಣ್‌ ರಾಥೋಡ್‌ ತೆಲುಗು ಬಿಗ್‌ಬಾಸ್‌ ಸೀಸನ್‌-7 ರಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳ ಸಂಖ್ಯೆಯೂ ಹೆಚ್ಚಾಗಿದ್ದಾರೆ.
 

ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾದಲ್ಲಿ ನಟಿಸಿರುವ ಕಿರಣ್‌ ರಾಥೋಡ್‌ ಅವರು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್​ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದು, ಈಗ ಬಿಗ್‌ಬಾಸ್‌ ಸ್ಪರ್ಧೆ ಮೂಲಕ ಜನರ ಮುಂದೆ ಬರಲಿದ್ದಾರೆ.
 

42 ವರ್ಷದ ಕಿರಣ್​, ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಕಿರಣ್​, ಸಿನಿಮಾದಿಂದ ದೂರವಾಗಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ, ಅವಕಾಶಗಳನ್ನು ನೀಡಿದರೆ ಮತ್ತೆ ಸಿನಿಮಾಗಳಲ್ಲಿ ನಟಿಸುವುದಾಗಿಯೂ ತಿಳಿಸಿದ್ದಾರೆ.

Latest Videos


ಕಿರಣ್ ರಾಥೋಡ್ ಅವರ ಚಿತ್ರಗಳಲ್ಲಿ ನುವ್ವು ಲೇಕ ನೀನು ಲೇನು, ಜೆಮಿನಿ, ಶ್ರೀರಾಮ್, ಭಾಗ್ಯಲಕ್ಷ್ಮಿ ಬಂಪರ್ ಡ್ರಾ ಮತ್ತು ಕೆವ್ವು ಕೇಕ ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 42 ವರ್ಷದ ನಟಿ ತನ್ನ ಹಾಟ್ ಮತ್ತು ಸಿಜ್ಲಿಂಗ್ ಇನ್‌ಸ್ಟಾಗ್ರಾಮ್ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಅವಕಾಶ ಸಿಗದ ವೇಳೆ ವಿಡಿಯೋ ಕಾಲ್‌ ಮಾಡಲಿಕ್ಕೆ ಪ್ರತ್ಯೇಕ ಆಪ್‌ ರಚಿಸಿ, ವಿಡಿಯೋ ಕಾಲಿಂಗ್‌ಗೆ ಹಣ ಪಡೆಯುತ್ತಿದ್ದ ನಟಿ ಕಿರಣ್‌ ರಾಥೋಡ್‌ ಈಗ ಬಿಗ್‌ ಮನೆಗೆ ಹೋಗಿದ್ದಾರೆ. ಆದರೆ, ಈಗ ನಾವು ಯಾರಿಗೆ ಕರೆ ಮಾಡಬೇಕು ಎಂದು ನೆಟ್ಟಿಗರು ಕೇಳಿದ್ದಾರೆ.

ತೆಲುಗು ಮಾ ಸ್ಟಾರ್ ಚಾನೆಲ್‌ನಲ್ಲಿ ಪ್ರಸಾರವಾಗುವ  ಬಿಗ್‌ಬಾಸ್‌ ರಿಯಾಲಿಟಿ ಶೋ ಅನ್ನು ಅಕ್ಕಿನೇನಿ ನಾಗಾರ್ಜುನ ಅವರು ಹೋಸ್ಟ್ ಮಾಡುತ್ತಿದ್ದಾರೆ. "ಬಿಗ್ ಬಾಸ್ ತೆಲುಗು 7" ರ ಈ ಸೀಸನ್ ಹಿಂದಿನ ಸೀಸನ್‌ಗಳಿಗಿಂತ ವಿಭಿನ್ನ ಮತ್ತು ಹೆಚ್ಚು ಮಸಾಲೆಯುಕ್ತವಾಗಿರುತ್ತದೆ.

ದೇಶದ ಚಿತ್ರರಂಗದಲ್ಲಿ ನಟಿ ಶಕೀಲಾ ಬಗ್ಗೆ ಯಾವುದೇ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ವಯಸ್ಕ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗಿದ್ದ ಶಕೀಲಾ ಹಾಗೂ ಕಿರಣ್‌ ರಾಥೋಡ್‌ ಇಬ್ಬರೂ ಒಂದೇ ಸೀಸನ್‌ನಲ್ಲಿ ಬಿಗ್‌ಬಾಸ್‌ ಮನೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ನೋಡುಗರಿಗೆ ಮಾತ್ರ ಭರಪೂರ ಮನರಂಜನೆ ಸಿಗುವುದಲ್ಲಿ ಮಿಸ್ಸೇ ಇಲ್ಲ ಎಂದಿನಿಸುತ್ತದೆ. 
 

ಕಿರಣ್‌ ರಾಥೋಡ್‌ ಸಿನಿಮಾಗಳು ಕೈಯಲ್ಲಿ ಇಲ್ಲದಿದ್ದರೂ ಪ್ರತ್ಯೇಕ ವಿಡಿಯೋ ಕಾಲಿಂಗ್‌ ಅಪ್ಲಿಕೇಶನ್‌ ಮೂಲಕ ಹಣವನ್ನೂ ಮಾಡಿದ್ದಾರೆ. ಜೊತೆಗೆ, ತಾವು ಹೋದಲ್ಲೆಲ್ಲಾ ಹಾಟ್‌ ಫೋಟೋ ತೆಗೆಸಿ ಸಾಮಾಜಿಕ ಜಾಲತಾಣದಲ್ಲೊಇ ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 3ರಿಂದ ಆರಂಭವಾಗಿರುವ ಬಿಗ್ ಬಾಸ್ ತೆಲುಗು ಸೀಸನ್‌ 7 ರಿಯಾಲಿಟಿ ಶೋ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಗೆ ಬರಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕಿರಣ್‌ ರಾಥೋಡ್‌, ಮಾದಕ ನಟಿ ಶಕೀಲಾ ಸೇರಿದಂತೆ ಹಲವರು ಸ್ಪರ್ಧಿಗಳಾಗಿದ್ದಾರೆ.

click me!