ಅಪ್ಪನ ಪ್ರೀತಿ ಅಪಾರ, ಮಗನಿಗೆ ಐಫೋನ್ 16 ಗಿಫ್ಟ್ ನೀಡಿದ ಸ್ಕ್ರ್ಯಾಪ್ ಮಾರಾಟಗಾರ.!

By Roopa HegdeFirst Published Sep 30, 2024, 11:01 AM IST
Highlights

ಅಪ್ಪನ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಮಗನ ಯಶಸ್ಸಿನಲ್ಲಿ ತಂದೆ ತನ್ನ ಖುಷಿ ಕಾಣ್ತಾನೆ. ಅದಕ್ಕೆ ಈ ವಿಡಿಯೋ ಉತ್ತಮ ನಿದರ್ಶನ. ಮಗನ ಪರೀಕ್ಷೆ ಫಲಿತಾಂಶ ಬರ್ತಿದ್ದಂತೆ ಅಪ್ಪ ಐಫೋನ್ ಉಡುಗೊರೆಯಾಗಿ ನೀಡಿದ್ದಾನೆ.
 

ಮಕ್ಕಳ (children) ಉತ್ತಮ ಭವಿಷ್ಯ (future)  ಕ್ಕಾಗಿ ಪಾಲಕರು ಏನು ಮಾಡಲೂ ಸಿದ್ಧವಿರ್ತಾರೆ. ಹಗಲು – ರಾತ್ರಿ ಎನ್ನದೆ ದುಡಿದು ಮಕ್ಕಳ ಶಿಕ್ಷಣ (children) ಹಾಗೂ ಅವರ ಅಗತ್ಯಗಳನ್ನು ಪೂರೈಸಲು ಪಾಲಕರು ಮುಂದಾಗ್ತಾರೆ. ತಮ್ಮ ಇಷ್ಟಗಳನ್ನು ಬಚ್ಚಿಟ್ಟು, ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡಿಸ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ರೆ ಟ್ರಿಪ್, ಸೈಕಲ್, ವಾಚ್ ಹೀಗೆ ತಮ್ಮ ಆರ್ಥಿಕ ಸ್ಥಿತಿ ಮತ್ತು ಆಸಕ್ತಿಗೆ ತಕ್ಕಂತೆ ಮಕ್ಕಳಿಗೆ ಆಫರ್ ನೀಡುವ ಪಾಲಕರ ಸಂಖ್ಯೆ ಹೆಚ್ಚಿದೆ. ಸೋಶಿಯಲ್ ಮೀಡಿಯಾ (Social media) ದಲ್ಲಿ ಈಗ ಅಪ್ಪನ ವಿಡಿಯೋ ಒಂದು ವೈರಲ್ ಆಗಿದೆ. ಮಗನಿಗೆ ಐಫೋನ್ 16 ಕೊಡಿಸಿರುವ ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲ. ದೊಡ್ಡ ಬ್ಯುಸಿನೆಸ್ ಮಾಡ್ತಿಲ್ಲ. ಸ್ಕ್ರ್ಯಾಪ್ ಕೆಲಸ ಮಾಡ್ತಿರುವ ಈ ತಂದೆ, ಮಗನಿಗಾಗಿ ತನ್ನೆಲ್ಲ ದುಡಿಮೆ ಹಣವನ್ನು ಮೀಸಲಿಟ್ಟಂತಿದೆ.

Ghar Ke Kales ಹೆಸರಿನ ಎಕ್ಸ್ ಖಾತೆಯಲ್ಲಿ ಈ ತಂದೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅವರು ಏನ್ ಮಾತನಾಡ್ತಿದ್ದಾರೆ ಎಂಬುದು ಸ್ಪಷ್ಟವಾಗ್ತಿಲ್ಲವಾದ್ರೂ, ಮಗನ ಯಶಸ್ಸಿಗೆ ತಂದೆ ಮುಖದಲ್ಲಿ ನಗು ಮೂಡಿರೋದನ್ನು ನೀವು ಕಾಣ್ಬಹುದು. ಬೋರ್ಡ್ ಪರೀಕ್ಷೆಯಲ್ಲಿ ಮಗ ಉತ್ತಮ ಅಂಕಗಳಿಸಿದ್ದಾನೆ. ಇದ್ರಿಂದ ಖುಷಿಯಾಗಿರುವ ತಂದೆ, ಮಗನಿಗೆ ಐಫೋನ್ 16 ಕೊಡಿಸಿದ್ದಾರೆ. ಅದ್ರ ಬೆಲೆ 1.80 ಲಕ್ಷ ರೂಪಾಯಿ. ಇನ್ನು ತಮಗಾಗಿ ಅವರು 85 ಸಾವಿರದ ಐಫೋನ್ ಖರೀದಿ ಮಾಡಿದ್ದಾರೆ. ವಿಡಿಯೋದಲ್ಲಿ ತಮ್ಮ ಕೈನಲ್ಲಿರುವ ಐಫೋನನ್ನು ಖುಷಿಯಿಂದ ತೋರಿಸ್ತಿರೋದನ್ನು ನೀವು ನೋಡ್ಬಹುದು. ತಂದೆಯ ಬೆಲೆಯಿಲ್ಲದ ಉಡುಗೊರೆ, ಸ್ಕ್ರ್ಯಾಪ್ ಡೀಲರ್, ಮಗನ ಬೋರ್ಡ್ ಫಲಿತಾಂಶ (Board Result ) ದಿಂದ ಖುಷಿಯಾಗಿ 1.80 ಲಕ್ಷ ಮೌಲ್ಯದ ಐಫೋನ್‌ ಉಡುಗೊರೆಯಾಗಿ ನೀಡಿದ್ದಾರೆಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. 

Latest Videos

ಜಹೀರ್ ಇಕ್ಬಾಲ್ ಜೊತೆಗಿನ ರಹಸ್ಯ ಸಂಬಂಧದ ಕುರಿತು ಮೊದಲ ಬಾರಿಗೆ ನಟಿ ಸೋನಾಕ್ಷಿ ಸಿನ್ಹಾ ಓಪನ್​ ಮಾತು

ವಿಡಿಯೋ ನೋಡಿದ ಬಳಕೆದಾರರು ತಂದೆ ಪ್ರೀತಿಯನ್ನು ಮೆಚ್ಚಿದ್ದಾರೆ. ತಂದೆಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಒಬ್ಬರು ಬರೆದಿದ್ರೆ, ಇದನ್ನು ತಂದೆ ಮಾತ್ರ ಮಾಡಬಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದನ್ನು ನಂಬಲು ಸಾಧ್ಯವಾಗ್ತಿಲ್ಲ ಎಂದಿರುವ ನೆಟ್ಟಿಗರು, ಭಾರತದಲ್ಲಿ ಭಿಕ್ಷುಕರಿಲ್ಲ. ಭಾರತೀಯರು ಶ್ರೀಮಂತರಾಗ್ತಿದ್ದಾರೆ. ಎಲ್ಲರ ಕೈನಲ್ಲಿ ಐಫೋನ್ ಬರ್ತಿದೆ. ಖುಷಿಯಾಗಿರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

ಸ್ಕ್ರ್ಯಾಪ್ ಡೀಲರ್ ಆಗಿರಲಿ ಇಲ್ಲ ಬಂಗಾರದ ಅಂಗಡಿ ಮಾಲೀಕ, ಮಕ್ಕಳ ವಿಷ್ಯ ಬಂದಾಗ ಎಲ್ಲ ಪಾಲಕರು ಅಂಬಾನಿಯಾಗ್ತಾರೆಂದು  ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಇಷ್ಟೊಂದು ಹಣ ಎಲ್ಲಿಂದ ತಂದಿರಬಹುದು ಎಂಬ ಪ್ರಶ್ನೆ ಕೂಡ ನೆಟ್ಟಿಗರನ್ನು ಕಾಡ್ತಿದೆ. 

ಮತ್ತೆ ಕೆಲವರು ತಂದೆಯ ಖುಷಿ, ಪ್ರೀತಿ ಜೊತೆ ಮಗನ ಶ್ರಮವನ್ನು ಮೆಚ್ಚಿದ್ದರೂ, ಮಗನಿಗೆ ಇಷ್ಟು ಬೇಗ ಐಫೋನ್ ನೀಡ್ಬಾರದಿತ್ತು ಎಂಬ ಸಲಹೆಯನ್ನಿಟ್ಟಿದ್ದಾರೆ. ಫೋನ್ ಇಲ್ದೆ ಮಗ ಚೆನ್ನಾಗಿ ಓದುತ್ತಿದ್ದ. ಕೈಗೆ ಐಫೋನ್ ಬಂದ್ಮೇಲೆ ಹಾಳಾಗ್ತಾನೆ. ಆತ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ. ಇದೇ ಹಣದಲ್ಲಿ ಮಗನಿಗೆ ಬೇರೆ ವಸ್ತುವನ್ನು ನೀಡ್ಬಹುದಿತ್ತು, ಇಲ್ಲವೆ ಆತನ ಮುಂದಿನ ಶಿಕ್ಷಣಕ್ಕೆ ಈ ಹಣವನ್ನು ಬಳಸಬಹುದಿತ್ತು ಎನ್ನುತ್ತಿದ್ದಾರೆ ಬಳಕೆದಾರರು.

ಪತ್ನಿಯ ಸ್ನೇಹಿತೆಯೊಂದಿಗೆ ಏಕಾಂತದಲ್ಲಿರುವಾಗಲೇ ಸಿಕ್ಕಿಬಿದ್ದ ಗಂಡ!

ತಜ್ಞರ ಪ್ರಕಾರ, ಮಕ್ಕಳನ್ನು ಮೊಬೈಲ್ ನಿಂದ ದೂರ ಇಡುವಂತೆ  ಸಲಹೆ ನೀಡ್ತಿದ್ದಾರೆ. ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಒಳ್ಳೆಯ ಮಾರ್ಗವಾದ್ರೂ ಅವರಿಗೆ ಫೋನ್ ಆಮಿಷ ನೀಡಬೇಡಿ, ಮಕ್ಕಳ ಕೈಗೆ ಫೋನ್ ನೀಡಿ ಅವರ ಭವಿಷ್ಯ ಹಾಳು ಮಾಡಬೇಡಿ ಎಂದು ತಜ್ಞರು ಹೇಳ್ತಿದ್ದಾರೆ. 

Father's Priceless Gift: Junk Dealer Gifts Multiple Iphones Worth ₹ 1.80 Lacs to Son For Top Board Results pic.twitter.com/brrSI04qxf

— Ghar Ke Kalesh (@gharkekalesh)
click me!