ಅತಿಹೆಚ್ಚು ವೋಟ್ ಮಾಡಿ ಚೈತ್ರಾ ಕುಂದಾಪುರಳನ್ನು ಬಿಗ್‌ ಬಾಸ್‌ ಮನೆ ನರಕಕ್ಕೆ ಕಳಿಸಿದ ಜನ

Published : Sep 29, 2024, 10:52 PM IST
ಅತಿಹೆಚ್ಚು ವೋಟ್ ಮಾಡಿ ಚೈತ್ರಾ ಕುಂದಾಪುರಳನ್ನು ಬಿಗ್‌ ಬಾಸ್‌ ಮನೆ ನರಕಕ್ಕೆ ಕಳಿಸಿದ ಜನ

ಸಾರಾಂಶ

ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಅತಿಹೆಚ್ಚು ಮತಗಳನ್ನು ಹಾಕುವ ಮೂಲಕ ಚೈತ್ರಾ ಕುಂದಾಪುರ ಅವರನ್ನು ಜನರೇ ನರಕಕ್ಕೆ ಕಳಿಸಿದ್ದಾರೆ. ಆದರೆ, ಕಾಂಟ್ರವರ್ಸಿ ಕ್ವೀನ್ ಚೈತ್ರಾ ಕಿಚ್ಚನ ಮುಂದೆ ಕಣ್ಣೀರಿಟ್ಟಿದ್ದಾಳೆ.

ಬೆಂಗಳೂರು (ಸೆ.29): ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಗೆ ಸ್ಪರ್ಧಿಯಾಗಿ ಹೋಗುವ ಮುನ್ನವೇ ಅತಿಹೆಚ್ಚು ಮತಗಳನ್ನು ಹಾಕುವ ಮೂಲಕ ಚೈತ್ರಾ ಕುಂದಾಪುರ ಅವರನ್ನು ಜನರೇ ನರಕಕ್ಕೆ ಕಳಿಸಿದ್ದಾರೆ. ಆದರೆ, ಕಾಂಟ್ರವರ್ಸಿ ಕ್ವೀನ್ ಚೈತ್ರಾ ಕಿಚ್ಚನ ಮುಂದೆ ಕಣ್ಣೀರಿಟ್ಟಿದ್ದಾಳೆ.

ಚೈತ್ರಾ ಕುಂದಾಪುರ ಅವರಿಗೆ ಮತವನ್ನು ಹಾಕಲು ವೀಕ್ಷಕರಿಗೆ ಅವಕಾಶ ನೀಡಲಾಗಿತ್ತು. ಆಗ ವೀಕ್ಷಕರು ಕೇವಲ 15 ನಿಮಿಷಗಳಲ್ಲಿ 2,85,000 ಮತಗಳು ಸಿಕ್ಕಿವೆ. ನಾಲ್ಕು ಕಂಟೆಸ್ಟೆಂಟ್‌ಗಳಲ್ಲಿ ಅತಿಹೆಚ್ಚು ಮತಗಳನ್ನು ಪಡೆದವರು ಚೈತ್ರಾ ಕುಂದಾಪುರ ಆಗಿದ್ದಾರೆ. ಆದ್ದರಿಂದ ಅದರಲ್ಲಿ ಎಷ್ಟು ಮತಗಳು ಸ್ವರ್ಗ ಹಾಗೂ ನರಕಕ್ಕೆ ಸಿಕ್ಕಿವೆ ಎಂಬುದು ಗೊತ್ತಿಲ್ಲ ಎಂದು ಕಿಚ್ಚ ಸುದೀಪ ಹೇಳಿದರು. ಇದಾದ ನಂತರ ಬಿಗ್ ಬಾಸ್ ಮನೆಯೊಳಗೆ ಹೋದ ಚೈತ್ರಾ ಕುಂದಾಪುರ ಸೀದಾ ನರಕಕ್ಕೆ ಹೋಗಿದ್ದಾರೆ. 

ನನ್ನ ಸೌಂಡ್ ಜಾಸ್ತಿ ಆಗಿದೆ ಎನ್ನುವ ಕಾರಣಕ್ಕೆ ಜನರು ಕೂಡ ಕಾಂಟ್ರವರ್ಸಿ ಎಂಬ ಪದವನ್ನು ನನ್ನೊಂದಿಗೆ ಸೇರಿಸಿರಬಹುದು. ಅರ್ಧ ಗಂಟೆ ಒಂದು ಗಂಟೆ ಭಾಷಣ ಮಾಡುವ ಚೈತ್ರ ಮಾತ್ರ ನಾನಲ್ಲ, ಅದನ್ನು ಬಿಟ್ಟು ಇನ್ನೊಬ್ಬ ಚೈತ್ರ ಏನಿದ್ದಾಳೆ ಎಂಬುದನ್ನು ತೋರಿಸುವುದು ಈ ಬಿಗ್ ಬಾಸ್ ವೇದಿಕೆ ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದನ್ನು ನಂಬಿದ್ದೇನೆ. ಇದೇ ವೇಳೆ ತಮ್ಮ ಮೇಲೆ ಬಂದ ಆರೋಪ ಹಾಗೂ ಜೈಲು ಶಿಕ್ಷೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

ಇದನ್ನೂ ಓದಿ: ನವಗ್ರಹದ ಕ್ಯಾಡ್ಬರಿ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ; ನಮ್ ಸಪೋರ್ಟ್ ನಿಮ್ಗೆ ಎಂದ ದರ್ಶನ್ ಫ್ಯಾನ್ಸ್!

ನಾನು ಕಾಂಟ್ರವರ್ಸಿ ಎನ್ನುವುದಕ್ಕಿಂತ ನಾನು ಕಲಿಯುತ್ತಾ ಹೋಗುತ್ತಿದ್ದೇನೆ. ನಾನು ನಂಬಿದ್ದ ಸತ್ಯವನ್ನು ಇನ್ನಷ್ಟು ಗಟ್ಟಿಯಾಗಿ ಹೇಳುತ್ತೇನೆ. ಬೆಂಗಳೂರು ನೋಡದ ನಮ್ಮಮ್ಮ. ಇದೇ ಮೊದಲ ಬಾರಿಗೆ ಬೆಂಗಳೂರನ್ನು ನೋಡಿದ್ದಾರೆ. ನನ್ನಮ್ಮ ಬಿಗ್ ಬಾಸ್ ಪ್ರತಿ ಸೀಸನ್‌ನ ಫೈನಲ್ ಅನ್ನು 12 ಗಂಟೆವರೆಗೆ ಎಚ್ಚರವಾಗಿದ್ದು ನೋಡಿದ್ದಾರೆ. ನನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ಯಾರು ಏನೇ ಮಾತನಾಡಿದ್ದರೂ ನನ್ನ ಮನೆಯವರು ನಂಬಿದ್ದಾರೆ. ಅಷ್ಟೇ ನನಗೆ ಧೈರ್ಯ. ನನ್ನ ಮೇಲೆ ಏನೇ ಆರೋಪ ಬಂದರೂ ನಾನು ಕುವೆಂಪು ಅವರ ಮಾತನ್ನು ನಂಬಿ ಮುಂದೆ ಹೋಗುತ್ತೇನೆ. ಕುವೆಂಪು ಅವರ ಮಾತಿನಂತೆ ಟೀಕೆಗಳು ಸಾಯುತ್ತವೆ, ಕೆಲಸಗಳು ಎಂದಿಗೂ ಮುಂದುವರೆಯುತ್ತವೆ ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.

ಸೀಸನ್ 10 ಅನ್ನು ಜೈಲಿನಲ್ಲಿ ನೋಡಿದ್ದೇನೆ. ಸೀಸನ್ 10ಕ್ಕೂ ಹಾಗೂ ಚೈತ್ರ ಅವರಿಗೂ ಏನು ಸಂಬಂಧ ಎಂದು ಕೇಳಿದರು. ನಾನು ಮೊದಲು ಬಿಗ್ ಬಾಸ್ ಸ್ಕ್ರಿಪ್ಟೆಡ್ ಎಂದು ಹೇಳುತ್ತಾರೆ. ಆದರೆ, ಬಿಗ್ ಬಾಸ್ ಕಂಟಿನಿಯಸ್ ಸೀಸನ್ ನೋಡಿದಾಗ ಅದು ಸ್ಕ್ರಿಪ್ಟೆಡ್ ಅಲ್ಲವೆಂದು ತಿಳಿಯುತ್ತದೆ. ಪ್ರತಿಯೊಂದು ಘಟನೆಗಳು ಕೂಡ ಒಂದಕ್ಕೊಂದು ಸಂಬಂಧ ಇದ್ದಾಗ ಮಾತ್ರ ಅಂತಹ ಮಾತುಗಳು, ದೃಶ್ಯಾವಳಿಗಳು ನಡೆಯಲು ಸಾಧ್ಯ ಎಂದು ಚೈತ್ರಾ ಕುಂದಾಪುರ ಹೇಳುತ್ತಾಳೆ.  ನಾನು ಜೈಲಲ್ಲಿ ಇದ್ದಾಗಲೇ ವರ್ತೂರು ಸಂತೋಷ್ ಅವರು ಕೂಡ ಜೈಲಿಗೆ ಬಂದು ಹೋಗಿದ್ದರು. ಅಂದಿನಿಂದ ಬಿಗ್ ಬಾಸ್ ಸೀಸನ್ ಅನ್ನು ನಾನು ನೋಡಿದ್ದೇನೆ. ಎಲ್ಲ ವಯೋಮಾನದವರೂ ಸೇರಿಕೊಂಡು ರಿಮೋಟ್ ಕಿತ್ತಾಡಿಕೊಂಡು ಬಿಗ್ ಬಾಸ್ ಸೀಸನ್ ನೋಡುತ್ತಾರೆ. ಇದನ್ನು ನೋಡಿ ನಾನು ಕೂಡ ಬಿಗ್ ಬಾಸ್ ನೋಡಿದ್ದೇನೆ ಎಂದರು.

ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಗೀತಾ ನಟಿ ಭವ್ಯಾ ಗೌಡ; ಮೊದಲು ಕಾಲಿಟ್ಟಿದ್ದೇ ನರಕಕ್ಕೆ!

ನಾನು ಕೂಡ 2012ರಲ್ಲಿ ಬೆಂಗಳೂರಿನ ಜೈಲಿನಲ್ಲಿ ಇದ್ದುಕೊಂಡು ಬಿಗ್ ಬಾಸ್ ನೋಡಿದ್ದೇನೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ಇನ್ನು ಸೀಸನ್ 10 ಅನ್ನು ಜೈಲಿನಲ್ಲಿ ನೋಡಿದ ಚೈತ್ರಾ ಕುಂದಾಪುರ ಅವರು ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರಿಗೆ ನಮ್ಮ ಸಹಭಾಗಿತ್ವ ಇದೆ. ಜೈಲಿನಲ್ಲಿ ನಾನು ಸೀನಿಯರ್, ಚೈತ್ರಾ ಜೂನಿಯರ್ ಎಂದು ಹೇಳದರು. ಜೊತೆಗೆ, ಚೈತ್ರಾ ಅವರನ್ನು ಸ್ವರ್ಗಕ್ಕೆ ಕಳಿಸಿ ಎಂದು ಲಾಯರ್ ಜಗದೀಶ್ ಹಾಗೂ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಹೇಳುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?