ಐಪಿಎಲ್‌ 2025: ಆರ್‌ಟಿಎಂ ಕಾರ್ಡ್‌ ಬಳಕೆ ನಿಯಮ ಬದಲು; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

By Kannadaprabha News  |  First Published Sep 30, 2024, 10:48 AM IST

ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್ ಬಳಕೆ ಕುರಿತಂತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ


ನವದೆಹಲಿ: 2025ರ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರೈಟ್‌ ಟು ಮ್ಯಾಚ್‌ (ಆರ್‌ಟಿಎಂ) ಕಾರ್ಡ್‌ ಬಳಕೆ ಮಾಡಲು ಅವಕಾಶ ಕಲ್ಪಿಸಿರುವ ಬಿಸಿಸಿಐ, ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಿದೆ. ಅದರ ವಿವರ ಇಲ್ಲಿದೆ.

ಉದಾಹರಣೆಗೆ ಹರಾಜಿನಲ್ಲಿ ಆರ್‌.ಅಶ್ವಿನ್‌ರನ್ನು ಆರ್‌ಸಿಬಿ ₹6 ಕೋಟಿಗೆ ಬಿಡ್‌ ಮಾಡಿದರೆ, ಆಗ ರಾಜಸ್ಥಾನ ರಾಯಲ್ಸ್‌ 2024ರಲ್ಲಿ ಅಶ್ವಿನ್‌ ನಮ್ಮ ತಂಡದಲ್ಲಿದ್ದರು. ಹೀಗಾಗಿ ಆರ್‌ಟಿಎಂ ಕಾರ್ಡ್‌ ಬಳಸಿ ತಾನೇ ಅಶ್ವಿನ್‌ಗೆ ₹6 ಕೋಟಿ ನೀಡಿ ಉಳಿಸಿಕೊಳ್ಳಬಹುದು. ಒಂದು ವೇಳೆ ಅಶ್ವಿನ್‌ಗೆ ಹೆಚ್ಚುವರಿ ಮೊತ್ತ ನೀಡುವುದಾಗಿ ಆರ್‌ಸಿಬಿ ಹೇಳಿದರೆ, ಆಗ ಆರ್‌ಟಿಎಂ ಕಾರ್ಡ್‌ ಬಳಕೆ ಆಗುವುದಿಲ್ಲ. ಅಶ್ವಿನ್‌ ಆರ್‌ಸಿಬಿ ಪಾಲಾಗಲಿದ್ದು, ಬೇರೆ ಆಟಗಾರನನ್ನು ಉಳಿಸಿಕೊಳ್ಳಲು ರಾಜಸ್ಥಾನ ತಂಡ ಆರ್‌ಟಿಎಂ ಕಾರ್ಡ್‌ ಬಳಸಬಹುದು.

Tap to resize

Latest Videos

undefined

ಐಪಿಎಲ್‌ 2025: ವಿದೇಶಿಗರಿಗೆ ಬಿಸಿಸಿಐ ಮೂಗುದಾರ, ಹರಾಜಾಗಿ ಟೂರ್ನಿಗೆ ಬರದಿದ್ರೆ 2 ವರ್ಷ ಬ್ಯಾನ್‌!

ಐಪಿಎಲ್‌: ರೀಟೈನ್‌ ಆದ ಆಟಗಾರರ ಪಟ್ಟಿ ಪ್ರಕಟಕ್ಕೆ ಅ.31ರ ವರೆಗೂ ಸಮಯ

ನವದೆಹಲಿ: 2025ರ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್‌ ಕೊನೆ ವಾರದಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ತಂಡಗಳು ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರತಿ ತಂಡವು ತಾನು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲು ಬಿಸಿಸಿಐ ಅ.31ರ ವರೆಗೂ ಕಾಲಾವಕಾಶ ನೀಡಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಯಾವುದಾದರೂ ತಂಡ 6 ಆಟಗಾರರನ್ನು ಉಳಿಸಿಕೊಂಡರೆ, ಆ ತಂಡ ಕೇವಲ 41 ಕೋಟಿ ರು. ಉಳಿಸಿಕೊಂಡು ಹರಾಜಿಗೆ ಕಾಲಿಡಬೇಕಾಗುತ್ತದೆ.

ನಿಮ್ಮ ಉತ್ತರಾಧಿಕಾರಿಯನ್ನು ಬೇಗ ಆಯ್ಕೆ ಮಾಡಿ: ಬಿಸಿಸಿಐ ಸಭೆಯಲ್ಲಿ ಜಯ್‌ ಶಾಗೆ ಮನವಿ!

ಬೆಂಗಳೂರು: ಇಲ್ಲಿ ಭಾನುವಾರ ನಡೆದ 93ನೇ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ನೂತನ ಕಾರ್ಯದರ್ಶಿಯನ್ನು ಆದಷ್ಟು ಬೇಗ ಆಯ್ಕೆ ಮಾಡುವಂತೆ ಹಾಲಿ ಕಾರ್ಯದರ್ಶಿ ಜಯ್‌ ಶಾಗೆ ಸದಸ್ಯರು ಮನವಿ ಸಲ್ಲಿಸಿದರು ಎಂದು ತಿಳಿದುಬಂದಿದೆ.

ನವೆಂಬರ್‌ ಕೊನೆ ವಾರದಲ್ಲಿ ಶಾ, ಬಿಸಿಸಿಐ ಕಾರ್ಯದರ್ಶಿ ಹುದ್ದೆ ತೊರೆಯಲಿದ್ದು, ಡಿ.1ರಂದು ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲಿದ್ದಾರೆ. ನವೆಂಬರ್‌ನಲ್ಲಿ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆ ಸಹ ಇರುವ ಕಾರಣ, ಅದಕ್ಕೂ ಮೊದಲೇ ನೂತನ ಕಾರ್ಯದರ್ಶಿಯ ಘೋಷಣೆಯಾದರೆ ಉತ್ತಮ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಶಾಗೆ ಮನವಿ ಮಾಡಿದರು ಎಂದು ಗೊತ್ತಾಗಿದೆ.

ಕುತೂಹಲಕ್ಕೆ ತೆರೆ ಎಳೆದ ಬಿಸಿಸಿಐ: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಅವಕಾಶ!

ಸದ್ಯಕ್ಕೆ ಡೆಲ್ಲಿ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ರೋಹನ್‌ ಜೇಟ್ಲಿ, ಬಿಸಿಸಿಐನ ಖಜಾಂಚಿ ಆಶಿಶ್‌ ಶೆಲಾರ್‌, ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್‌ ಸಾಯ್ಕಿಯಾ ಹಾಗೂ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಅನಿಲ್‌ ಪಟೇಲ್‌ ಬಿಸಿಸಿಐ ನೂತನ ಕಾರ್ಯದರ್ಶಿ ರೇಸ್‌ನಲ್ಲಿದ್ದಾರೆ.

click me!