ಖತ್ರೋಂ ಕೆ ಕಿಲಾಡಿಯ ವಿನ್ನರ್ ಆದ ಕರಣ್‌ವೀರ್; ಇದು ಎಂಟೆದೆ ಗುಂಡಿಗೆ ಇರೋರು ಭಾಗಿಯಾಗೋ ರಿಯಾಲಿಟಿ ಶೋ

By Mahmad Rafik  |  First Published Sep 30, 2024, 10:39 AM IST

'ಖತ್ರೋಂ ಕೆ ಖಿಲಾಡಿ 14' ರೋಮಾಂಚಕ ಫಿನಾಲೆಯಲ್ಲಿ ಕರಣ್ ವೀರ್ ಮೆಹ್ರಾ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕೃಷ್ಣಾ ಶ್ರಾಫ್ ಮತ್ತು ಕಾಶ್ಮೀರ ಮಹಾಜನ್‌ರನ್ನು ಹಿಂದಿಕ್ಕಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.


ಮುಂಬೈ: ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಸ್ಟಂಟ್ ಶೋ 'ಖತ್ರೋಂ ಕೆ ಕಿಲಾಡಿ 14' (Khatron Ke Khiladi 14) ರ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಿತು. ಫೈನಲ್‌ನಲ್ಲಿ ಕಾಶ್ಮೀರ ಮಹಾಜನ್, ಕೃಷ್ಣಾ ಶ್ರಾಫ್ ಮತ್ತು ಕರಣ್ ವೀರ್ ಮೆಹ್ರಾ ನಡುವೆ ಭರ್ಜರಿ ಪೈಪೋಟಿ ಕಂಡುಬಂತು. ಮೊದಲಿಗೆ ಕಾಶ್ಮೀರ್ ಮೂರನೇ ಸ್ಥಾನ ಪಡೆದರು. ನಂತರ ಕೃಷ್ಣಾ ಮತ್ತು ಕರಣ್ ನಡುವೆ ಫೈನಲ್ ನಡೆಯಿತು. ಕರಣ್ ಕೊನೆಯ ಸುತ್ತಿನಲ್ಲಿ ಕೃಷ್ಣಾ ಅವರನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದರು. 'ಖತ್ರೋಂ ಕೆ ಕಿಲಾಡಿ 14'ರ ಫಿನಾಲೆಯಲ್ಲಿ ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಪ್ರಮೋಷನ್‌ಗಾಗಿ ಖತ್ರೋಂ ಕೆ ಖಿಲಾಡಿ 14 ಫೈನಲ್ ಶೋಗೆ ಆಗಮಿಸಿದ್ದರು.

'ಖತ್ರೋಂ ಕೆ ಕಿಲಾಡಿ 14'ರ ವಿಜೇತರಾದ ಕರಣ್ ವೀರ್ ಮೆಹ್ರಾ ಅವರಿಗೆ ವಿನ್ನಿಂಗ್ ಟ್ರೋಫಿಯೊಂದಿಗೆ 20 ಲಕ್ಷ ರೂಪಾಯಿ ಬಹುಮಾನ ಮತ್ತು  ಐಷಾರಾಮಿ ಕಾರನ್ನು ನೀಡಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಕರಣ್ ವೀರ್ ಮೆಹ್ರಾಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಜುಲೈ 27 ರಂದು ಕಲರ್ಸ್ ವಾಹಿನಿಯಲ್ಲಿ ಖತ್ರೋಂ ಕೆ ಕಿಲಾಡಿ ಸೀಸನ್ 14 ಆರಂಭವಾಗಿತ್ತು. ಈ ಬಾರಿ ಆಸಿಂ ರಿಯಾಜ್, ಶಿಲ್ಪಾ ಶಿಂಧೆ, ನಿಯತಿ ಫಟಾನಿ, ಕಾಶ್ಮೀರ ಮಹಾಜನ್, ಕರಣ್ ವೀರ್ ಮೆಹ್ರಾ, ಕೃಷ್ಣಾ ಶ್ರಾಫ್, ಶಾಲೀನ್ ಭಾನೋಟ್, ಅಭಿಷೇಕ್ ಕುಮಾರ್, ಆಶೀಶ್ ಮೆಹ್ರೋತ್ರಾ, ನಿಮ್ರಿತ್ ಕೌರ್ ಆಹ್ಲುವಾಲಿಯಾ, ಅದಿತಿ ಶರ್ಮಾ ಮತ್ತು ಸುಮೋನಾ ಚಕ್ರವರ್ತಿ ಭಾಗವಹಿಸಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ ರೋಹಿತ್ ಶೆಟ್ಟಿ ಅವರೇ ಶೋನ ನಿರೂಪಕರಾಗಿದ್ದರು.

Tap to resize

Latest Videos

undefined

ಟಾಪ್ 5 ಫೈನಲಿಸ್ಟ್‌ಗಳು
ಕರಣ್ ಮೆಹ್ರಾ, ಅಭಿಷೇಕ್ ಕುಮಾರ್, ಕಾಶ್ಮೀರ ಮಹಾಜನ್, ಶಾಲೀನ್ ಭಾನೋಟ್ ಮತ್ತು ಕೃಷ್ಣಾ ಶ್ರಾಫ್ ಈ ಬಾರಿಯ ಟಾಪ್ 5 ಫೈನಲಿಸ್ಟ್‌ಗಳಾಗಿದ್ದರು. ಸೀಸನ್ 14ರ ಟ್ರೋಫಿಗಾಗಿ ಈ ಐವರ ನಡುವೆ  ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಶನಿವಾರ ನಡೆದ ಫಿನಾಲೆ ಸಂಚಿಕೆಯಲ್ಲಿ ಟಾಪ್ 3 ಗಾಗಿ ಅಪಾಯಕಾರಿ ಸ್ಟಂಟ್‌ಗಳು ನಡೆದವು. ಅಭಿಷೇಕ್ ಕುಮಾರ್ ಮತ್ತು ಶಾಲೀನ್ ಭಾನೋಟ್ ಟಾಪ್ 3 ರೇಸ್‌ನಿಂದ ಹೊರಬಿದ್ದರು. ಭಾನುವಾರ ಕರಣ್, ಕಾಶ್ಮೀರ ಮತ್ತು ಕೃಷ್ಣಾ ನಡುವೆ ಫೈನಲ್ ಟ್ರೋಫಿಗಾಗಿ ಹಣಾಹಣಿ ನಡೆಯಿತು. ಅಂತಿಮವಾಗಿ ಕರಣ್ ಎಲ್ಲರನ್ನೂ ಸೋಲಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಬಿಗ್‌ಬಾಸ್ ಎಂಟ್ರಿ ಪ್ರೋಮೋದಲ್ಲಿಯೇ ಅಚ್ಚರಿ ವಿಷಯ ಹಂಚಿಕೊಂಡ ಚೈತ್ರಾ ಕುಂದಾಪುರ!

'ಖತ್ರೋಂ ಕೆ ಕಿಲಾಡಿ 14' ಗೆದ್ದ ನಂತರ ಕರಣ್ ವೀರ್ ಮೆಹ್ರಾ ಮಾಧ್ಯಮವೊಂದರ ಜೊತೆ ತಮ್ಮ ಗೆಲುವಿನ ಸಂತಸವನ್ನು ಹಂಚಿಕೊಂಡಿದ್ದಾರೆ. 'ನಾನು ಶೋ ಗೆಲ್ಲುತ್ತೇನೆ ಮತ್ತು ಸೀಸನ್ 14ರ ಟ್ರೋಫಿ ನನ್ನದಾಗುತ್ತೆ ಎಂದು ಭರವಸೆ ಇತ್ತು. ಕಾರ್ಯಕ್ರಮದ ವೀಕ್ಷಕರು ಸಹ ಇದೇ ರೀತಿ ಭಾವಿಸಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರು ಘೋಷಣೆ ಆಗುತ್ತಿದ್ದಂತೆ ಒಂದು ಕ್ಷಣ ಸುತ್ತಲೂ ಏನು ನಡೆಯುತ್ತಿದೆ ಅಂತ ಗೊತ್ತಾಗಲಿಲ್ಲ. ರೋಹಿತ್ ಶೆಟ್ಟಿ ಸರ್ ನನ್ನ ಹೆಸರು ಘೋಷಿಸಿದಾಗ ನಾನು ಬಹುತೇಕ ಪ್ರಜ್ಞಾಹೀನನಾಗುವ ಅನುಭವ ಉಂಟಾಯ್ತು ಎಂದು ಕರಣ್‌ವೀರ್ ಮೆಹ್ರಾ ಹೇಳಿಕೊಂಡಿದ್ದಾರೆ.

ರೋಹಿತ್ ಶೆಟ್ಟಿ ನಿರೂಪಣೆಯ ಖತ್ರೋಂ ಕೆ ಕಿಲಾಡಿ ರಿಯಾಲಿಟಿ ಶೋದಲ್ಲಿ ಅತ್ಯಂತ ಅಪಾಯಕಾರಿ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಗಗನಚುಂಬಿ ಕಟ್ಟಡದ ಮೇಲಿನಿಂದ ಟಾಸ್ಕ್ ಮಾಡಿಸಲಾಗುತ್ತದೆ. ಹುಲಿ, ಸಿಂಹ, ದೈತ್ಯ ಹಾವು, ಚೇಳುಗಳಂತ ಬಳಿ ಹೋಗಿ ಟಾಸ್ಕ್ ಪೂರ್ಣಗೊಳಿಸಬೇಕಾಗುತ್ತದೆ.

ಇವರೇ ನೋಡಿ ಬಿಗ್‌ ಸ್ಪರ್ಧಿಗಳು..'ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳೋ ಜನಕ, ಇಲ್ಲೇ ಕಾಣಬೇಕು ಬಿಗ್‌ ಬಾಸ್‌ ಮುಗಿಯೋ ತನಕ'!

 
 
 
 
 
 
 
 
 
 
 
 
 
 
 

A post shared by ColorsTV (@colorstv)

click me!