ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಕಲಾವಿದೆ ಯಮುನಾ ಶ್ರೀನಿಧಿ ಮೂಲತಃ ಮೈಸೂರಿನವರು. ಭರತನಾಟ್ಯ ನೃತ್ಯಗಾರ್ತಿ ಮತ್ತು ಸಂಯೋಜಕಿ ಆಗಿದ್ದಾರೆ.
ಸುಮಾರು 15 ವರ್ಷಗಳ ಕಾಲ ಅಮೆರಿಕಾದಲ್ಲಿದ್ದ ಯಮುನಾ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಹೇಳಿಕೊಟ್ಟಿದ್ದಾರೆ. 2012ರಲ್ಲಿ ಭಾರತಕ್ಕೆ ಹಿಂತಿರುಗಿ ಬರುತ್ತಿದ್ದಂತೆ ಸಾಲು ಸಾಲು ಸೀರಿಯಲ್‌ಗಳನ್ನು ಒಪ್ಪಿಕೊಂಡರು.
ಬಿಗ್ ಬಾಸ್ ಸೀಸನ್ 11ರ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಆಗಿರುವ ಯಮುನಾ ಶ್ರೀನಿಧಿ ಮೊದಲ ದಿನವೇ ಟ್ರೋಲ್ ಆಗಿದ್ದಾರೆ. ಮಾತನಾಡುವ ಶೈಲಿ ಮತ್ತು ಮುಖದ ಎಕ್ಸ್‌ಪ್ರೆಶನ್ ಓವರ್ ಆಗಿದೆ ಎಂದು ಆಗಲೇ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಹೀಗಾಗಿ ಓವರ್ ಆಕ್ಟಿಂಗ್ ಆಂಟಿ ಎನ್ನುವ ಕಾಮೆಂಟ್‌ಗಳು ವೈರಲ್ ಆಗುತ್ತಿದೆ. ಅಲ್ಲದೆ ವಯಸ್ಸಿಗೆ ಮೀರಿದ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಮನೆಯಲ್ಲಿ ಓಡಾಡಲು ಕಷ್ಟ ಪಡುತ್ತಿದ್ದದನ್ನು ನೋಡಿ ನಕ್ಕಿದ್ದಾರೆ.
ಎರಡನೇ ಸ್ಪರ್ಧಿಯಾಗಿ ಎಂಟ್ರಿ ಆಗಿರುವ ಯಮುನಾ ಶ್ರೀನಿಧಿ ಸದ್ಯ ಸ್ವರ್ಗದಲ್ಲಿ ಇದ್ದಾರೆ. ಅಮೆರಿಕಾದಲ್ಲಿ ಇದ್ದ ಬಂದವರು ಸರಿಯಾದ ಕ್ರಮದಲ್ಲಿ ಇನ್ನಿತರ ಸ್ಪರ್ಧಿಗಳನ್ನು ಸ್ವರ್ಗ ಮತ್ತು ನರಕ ಆಯ್ಕೆ ಮಾಡಿಲ್ಲ ಎನ್ನುವ ಅಭಿಪ್ರಾಯವಿದೆ.
ಅಶ್ವಿನಿ ನಕ್ಷತ್ರ, ಅಮೃತವರ್ಷಿಣಿ, ಒಂದೂರಲ್ಲಿ ರಾಜಾ ರಾಣಿ, ಮದುಮಗಳು, ಸಾಕ್ಷಿ, ತ್ರಿವೇಣಿ ಸಂಗಮ, ನಾಗಕನ್ನಿಕೆ, ಕಮಲಿ, ಮನದಾರೆ ಮತ್ತು ಕನ್ಯಾಕುಮಾರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಯಮುನಾ ನಟಿಸಿದ್ದಾರೆ.