ಬಿಗ್‌ ಬಾಸ್‌ಗೆ ಎಂಟ್ರಿಯಾದ 'ರಾಜಿ' ಹಂಸ, ಪುಟ್ಟಕ್ಕನಿಗೆ ಕೊನೆಗೂ ಕಾಟ ತಪ್ಪಿತಲ್ಲ!

Published : Sep 29, 2024, 10:51 PM IST
ಬಿಗ್‌ ಬಾಸ್‌ಗೆ ಎಂಟ್ರಿಯಾದ 'ರಾಜಿ' ಹಂಸ, ಪುಟ್ಟಕ್ಕನಿಗೆ ಕೊನೆಗೂ ಕಾಟ ತಪ್ಪಿತಲ್ಲ!

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನೆಗೆಟವ್ ರೋಲ್‌ನ ರಾಜಿ ಪಾತ್ರದಲ್ಲಿ ಮಿಂಚಿದ್ದ ಹಂಸ ನಾರಾಯಣಸ್ವಾಮಿ ಬಿಗ್‌ ಬಾಸ್‌ ಮನೆಗೆ 10ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಇದರ ಬೆನ್ನಲ್ಲಿಯೇ ಬಿಗ್‌ ಬಾಸ್‌ ಅಭಿಮಾನಿಗಳು ಈಗಲಾದರೂ ಪುಟ್ಟಕ್ಕನಿಗೆ ನೆಮ್ಮದಿ ಸಿಗಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ.

ಬೆಂಗಳೂರು (ಸೆ.29): ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತರುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ರಾಜಿಯಾಗಿ ನೆಗೆಟಿವ್‌ ರೋಲ್‌ನಲ್ಲಿ ಖಡಕ್‌ ಆಗಿ ಮಿಂಚಿದ್ದ ಹಿರಿಯ ನಟಿ ಹಂಸಾ ನಾರಾಯಣಸ್ವಾಮಿ ಬಿಗ್‌ ಬಾಸ್‌ ಮನೆಗೆ 10ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ತಮ್ಮ ಪಾತ್ರಕ್ಕೆ ವಿದಾಯ ಹೇಳಿ ಅವರು ಬಿಗ್‌ ಬಾಸ್‌ ವೇದಿಕೆ ಏರಿದ್ದರು. ಅವರೊಂದಿಗೆ ಬಿಗ್‌ ಬಾಸ್‌ ವೇದಿಕೆಯಲ್ಲಿದ್ದ ಮಾನಸಾ ಸಂತೋಷ್‌ ನರಕಕ್ಕೆ ಪ್ರವೇಶ ಪಡೆದರೆ, ಹಂಸಾ ನಾರಾಯಣಸ್ವಾಮಿ ಸ್ವರ್ಗಕ್ಕೆ ಎಂಟ್ರಿ ಪಡೆದುಕೊಂಡರು. ಹಂಸಾ ನಾರಾಯಣಸ್ವಾಮಿ ಹಲವು ವರ್ಷಗಳಿಂದ ಕನ್ನಡ ಸೀರಿಯಲ್‌ಗಳು ಹಾಗೂ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ಕನ್ನಡ ಕಿರುತರೆಗೆ ಅವರು ಚಿರಪರಿಚಿತರು. ಆದರೆ, ಬಿಗ್‌ ಬಾಸ್‌ನ ರಿಯಲ್‌ ಲೈಫ್‌ನಲ್ಲಿ ಅವರು ಹೇಗಿರುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿಯೂ ಇದೆ.

ಸೀರಿಯಲ್‌ಗಳಲ್ಲಿ ನೆಗೆಟಿವ್‌ ಶೇಡ್‌ ಮಾತ್ರಗಳಲ್ಲೇ ಮಿಂಚುತ್ತಿದ್ದ ಹಂಸಾ ನಾರಾಯಣಸ್ವಾಮಿ ಬಿಗ್‌ ಬಾಸ್‌ ಮನೆಯಲ್ಲಿ ಪಾಸಿಟವ್‌ ಅಥವಾ ನೆಗೆಟವಿವ್‌ ಯಾವ ರೋಲ್‌ ನಿಭಾಯಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿದೆ.
ಇನ್ನು ವೇದಿಕೆಯಲ್ಲಿಯೇ ಮಾನಸಾ ಸಂತೋಷ್‌ ಅವರ ಬಳಿಕ ಹಂಸ ಅವರ ಬಗ್ಗೆ ಅಭಿಪ್ರಾಯ ಕೇಳಲಾಯಿತು. ಇವರು ಹೆಚ್ಚು ದಿನ ಪೈಪೋಟಿ ನೀಡಲ್ಲ. ಟಫ್​ ಸ್ಪರ್ಧಿ ಅಂತ ಅನಿಸುತ್ತಿಲ್ಲ. ಕೆಲವೇ ವಾರಗಳಲ್ಲಿ ಹೊರಗೆ ಬರುತ್ತಾರೆ ಎಂದು ಹೇಳಿದಾಗ ಹಂಸ ಮುಖ ಪೆಚ್ಚಾಗಿತ್ತು, ಇನ್ನು ಮಾನಸಾ ಅವರ ಬಗ್ಗೆ ಹಂಸ ಕೂಡ ಇದೇ ಅಭಿಪ್ರಾಯ ಹೇಳಿದರು. ಮಾನಸಾ ಮನರಂಜನೆ ಏನೂ ನೀಡ್ತಾರೆ. ಆದರೆ, ಹೆಚ್ಚು ದಿನ ಶೋನಲ್ಲಿ ಇರೋ ಹಾಗೆ ಕಾಣ್ತಿಲ್ಲ ಎಂದರು.

ಇನ್ನು ಸೋಶಿಯಲ್‌ ಮೀಡಿಯಾದಲ್ಲೂ ಹಂಸಾ ನಾರಾಯಣಸ್ವಾಮಿ ಬಿಗ್‌ ಬಾಸ್‌ ವೇದಿಕೆಗೆ ಏರಿದ್ದರ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಬಂದವು. 'ಇವರು ಹೋಗಿದ್ದರಿಂದ ಇನ್ನು ಮೇಲೆ ಪುಟ್ಟಕ್ಕನಿಗೆ ಕಾಟ ತಪ್ಪಿತು' , ಪುಟ್ಟಕ್ಕನಿಗೆ ಕಾಟ ಕೊಡೋಕೆ ರಾಜಿ ಈಗ ಇಲ್ಲ. ಇನ್ನು ನಮ್ಮ ಡೈರೆಕ್ಟರ್‌ ಯಾರನ್ನ ಕರೆದುಕೊಂಡು ಬರ್ತಾರೆ ಅಂತಾ ನೋಡ್ಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ.

ಇವರು ಆಡೋದನ್ನ ನೋಡಿದ್ರೆ, ಮೊದಲ ವೀಕ್‌ ಇವರೇ ಎಲಿಮಿನೇಷನ್‌ ಆಗೋ ರೀತಿ ಕಾಣ್ತಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇವರನ್ನ ನೋಡಿದ್ರೆ ಕಳೆದ ಸೀಸನ್‌ನಲ್ಲಿದ್ದ ತನೀಷಾ ಕುಪ್ಪಂಡ ರೀತಿ ಕಾಣ್ತಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. ‘20 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಯಾವುತ್ತೂ ಸೆಲೆಬ್ರಿಟಿ ಫೀಲ್​ ಬಂದಿರಲಿಲ್ಲ. ಆದರೆ ಬಿಗ್​ ಬಾಸ್​ಗೆ ಸೆಲೆಕ್ಟ್​ ಆದ ದಿನದಿಂದ ಆ ರೀತಿ ಫೀಲ್​ ಆಗುತ್ತಿದೆ. ನೆಗೆಟಿವ್​ ಪಾತ್ರ ಹೆಚ್ಚಾಗಿ ಮಾಡಿದ್ದೇನೆ. ಆದರೆ ರಿಯಲ್ ಲೈಫ್​ನಲ್ಲಿ ಆ ರೀತಿ ಹಿಂದಿನಿಂದ ಕುತಂತ್ರ ಮಾಡಲ್ಲ. ನೇರರಾದ ಬೋಲ್ಡ್​ ವ್ಯಕ್ತಿತ್ವ ನನ್ನದು’ ಎಂದು ಹಂಸಾ ಹೇಳಿಕೊಂಡಿದ್ದಾರೆ.

BBK11: 2 ಲಕ್ಷ ವೋಟ್‌ ಪಡೆದುಕೊಂಡು ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗಕ್ಕೆ ಬಂದ ಲಾಯರ್‌ ಜಗದೀಶ್‌!

ಈಗಾಗಲೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮನೆಗೆ ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್‌ ಆಚಾರ್‌, ಗೌತಮಿ ಯಾದವ್‌, ಅನುಷಾ ರೈ, ಧರ್ಮ ಕೀರ್ತಿರಾಜ್‌, ಲಾಯರ್‌ ಜಗದೀಶ್‌, ಶಿಶಿರ್‌ ಶಾಸ್ತ್ರಿ, ತ್ರಿವಿಕ್ರಮ್‌, ಹಂಸಾ ನಾರಾಯಣಸ್ವಾಮಿ, ಮಾನಸಾ ಸಂತೋಷ್‌, ಗೋಲ್ಡ್‌ ಸುರೇಶ್‌, ಐಶ್ವರ್ಯಾ, ಮಂಜು ಹಾಗೂ ಮೋಕ್ಷಿತಾ ಪೈ ಎಂಟ್ರಿ ಆಗಿದ್ದಾರೆ.

ನವಗ್ರಹದ ಕ್ಯಾಡ್ಬರಿ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ; ನಮ್ ಸಪೋರ್ಟ್ ನಿಮ್ಗೆ ಎಂದ ದರ್ಶನ್ ಫ್ಯಾನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಷೋ ತೆರೆಮರೆಯ ರೋಚಕ ರಹಸ್ಯವಿದು! ಅಸಲಿಗೆ ಅಲ್ಲಿ ನಡೆಯೋದೇನು, ನಡೆಸೋರು ಯಾರು?
ಆಗ ಊಟಕ್ಕೂ ಪರದಾಟ, ಈಗ ಬಿಗ್​ ಬಾಸ್ ಕಿರೀಟ? ವೋಟಿಂಗ್​ ಲೆಕ್ಕದಲ್ಲಿ ಗಿಲ್ಲಿನೇ ನಂ.1 ಸ್ಪರ್ಧಿ!