ಶೋಕಿ ಮಾಡ್ಕೊಂಡು, ಡೈವೋರ್ಸ್‌ ಕೊಟ್ಟು ಹೋಗ್ತಾರೆ ಅಷ್ಟೇ; 'ರಾಜ ರಾಣಿ'ಯಲ್ಲಿ ಜಯಶ್ರೀ ಕಾಲೆಳೆದ ನೆಟ್ಟಿಗರು

First Published | Jun 18, 2024, 12:05 PM IST

ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವ ಜೋಡಿಗಳನ್ನು ಫ್ಯಾಮಿಲಿ ಶೋನಲ್ಲಿ ಇರುವ ಕಾರಣ ವೀಕ್ಷಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಜ ರಾಣಿ ಸೀಸನ್ 3 ಆರಂಭವಾಗಿದೆ. ಈ ಸಲ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಜಯಶ್ರೀ ಆರಾಧ್ಯ ಮತ್ತು ಪಾರ್ಟನರ್‌ ಸ್ಟೀವಿನ್‌ ಕಾಣಿಸಿಕೊಂಡಿದ್ದಾರೆ. 

ಖ್ಯಾತ ನಟಿ ಮಾರಿಮುತ್ತು ಮೊಮ್ಮಗಳು ಆಗಿರುವ ಜಯಶ್ರೀ ಈಗಾಗಲೆ ಎರಡು ಮೂರು ಬ್ಯುಸಿನೆಸ್‌ಗಳನ್ನು ನಡೆಸಿಕೊಂಡು ಸಖತ್ ಹೆಸರು ಮಾಡುತ್ತಿದ್ದಾರೆ.

Latest Videos


ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಯಶ್ರೀ ಶೋಗೆ ಬಂದಿರುವ ಖುಷಿ ಎಷ್ಟು ಇದೆಯೋ ಅಷ್ಟೇ ಬೇಸರ ಕಿರುತೆರೆ ವೀಕ್ಷಕರಲ್ಲಿ ಇದೆ. 

ಇದು ಫ್ಯಾಮಿಲಿ ನೋಡುವ ಕಾರ್ಯಕ್ರಮ ಇದರಲ್ಲಿ ಮದುವೆಯಾಗಿರುವವರು ಇದ್ದರೆ ಎಲ್ಲರಿಗೂ ಮಾದರಿ ಲಿವ್‌ ಇನ್‌ ರಿಲೇಷನ್‌ಶಿಪ್‌ನವರನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತೀರಾ?

'ನಿಮ್ಮ ಕಾರ್ಯಕ್ರಮ ಕುಟುಂಬ ಸಮೇತ ಕೂತು ನೋಡುವಂತಹ ಕಾರ್ಯಕ್ರಮ ಆದರೆ ನೀವು ಸ್ಪರ್ಧಿಗಳನ್ನು ಕರೆಸುವಾಗಲು ಎಚ್ಚರ ವಹಿಸಬೇಕಾಗುತ್ತದೆ ಏಕೆಂದರೆ ಸಮಾಜಕ್ಕೆ ಈ ಕಾರ್ಯಕ್ರಮ ಮೂಲಕ ಏನು ಸಂದೇಶ ಕೊಡಬೇಕೆಂದು ನೀವು?' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

'ನಾವು ಅಫೀಶಿಯಲ್ ಆಗಿ ಮದುವೆ ಆಗಿಲ್ಲ ಅಥವಾ ತಾಳಿ ಕಟ್ಟಿಲ್ಲ ಬಿಟ್ಟರೆ ಗಂಡ ಹೆಂಡತಿ ರೀತಿ ಇದ್ದೀವಿ, ಈ ಕ್ಷಣವೂ ನಾವು ಮದುವೆ ಆಗಿಲ್ಲ ಅನ್ನೋ ಫೀಲ್ ಇಲ್ಲ' ಎಂದು ವೇದಿಕೆ ಮೇಲೆ ಜಯಶ್ರೀ ಹೇಳಿದ್ದರು. 

click me!