ಬಿಗ್ ಬಾಸ್ 11: ಐಶ್ವರ್ಯಾ ಜೊತೆ ಡ್ಯಾನ್ಸ್ ಮಾಡಿದ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್

Published : Nov 14, 2024, 07:14 PM IST
ಬಿಗ್ ಬಾಸ್ 11: ಐಶ್ವರ್ಯಾ ಜೊತೆ ಡ್ಯಾನ್ಸ್ ಮಾಡಿದ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ವೇಳೆ  ನಟಿ ಐಶ್ವರ್ಯಾ ಸಿಂಧೋಗಿ ಜೊತೆಗೆ ಡ್ಯಾನ್ಸ್ ಮಾಡಿದ ಶಿಶಿರ್ ಅವರಿಗೆ ನಟ ಧರ್ಮ ಕೀರ್ತಿರಾಜ್ ಸಿನಿಮಾ ಸ್ಟೈಲ್‌ನಲ್ಲಿ ಹೊಡೆದು ಸ್ಟೇಜ್‌ನಿಂದ ಕೆಳಗಿಳಿಸಿದ್ದಾರೆ. 

ಬೆಂಗಳೂರು (ನ.14): ಬಿಗ್ ಬಾಸ್ ಮನೆಯ ಲವರ್ ಬಾಯ್ ಆಗಿರುವ ನಟ ಧರ್ಮ ಕೀರ್ತಿರಾಜ್ ತನ್ನ ನಟಿ ಐಶ್ವರ್ಯಾ ಸಿಂಧೋಗಿ ಜೊತೆಗೆ ಡ್ಯಾನ್ಸ್ ಮಾಡುತ್ತಿದ್ದ ಶಿಶಿರ್‌ಗೆ ಸಿನಿಮಾ ಸ್ಟೈಲ್‌ನಲ್ಲಿ ಹೊಡೆದು ಹೊರಗಿಟ್ಟು ತಾನು ಐಶ್ವರ್ಯಾಳೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಇದನ್ನು ನೋಡಿದ ನಟಿ ಅನುಷಾ ರೈ ಮಾತ್ರ ದೊಡ್ಡ ಬಾಂಬ್‌ನಂತೆ ಸಿಡಿಯಲು ಸಿದ್ಧರಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇದೀಗ ಜೋಡಿ ಟಾಸ್ಕ್ ಆರ್ಭಟ ಜೋರಾಗಿದ್ದು, ಹೊಂದಾಣಿಕೆ ಇಲ್ಲದವರೂ ಕೂಡ ಒಬ್ಬೊಬ್ಬರಾಗಿ ತಮ್ಮ ಜೋಡಿಗಳೊಂದಿಗೆ ಅನಿವಾರ್ಯವಾಗಿ ಇದೀಗ ಮನಃಪೂರ್ವಕವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಕ್ಯಾಡ್ಬರಿ ಬಾಯ್ ಧರ್ಮ ಕೀರ್ತಿರಾಜ್ ಮತ್ತು ನಟಿ ಅನುಷಾ ರೈ ಅವರು ಪ್ರೇಮ ಪ್ರಣಯ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ, ಅವರಿಬ್ಬರೂ ನಾವು ಒಳ್ಲೆಯ ಸ್ನೇಹಿತರು ಎಂದು ಹೇಳಿದ್ದಾರೆ. ಇದೀಗ ಬಿಗ್ ಬಾಸ್ ಮನೆಯ ಜೋಡಿ ಟಾಸ್ಕ್‌ನಲ್ಲಿ ಧರ್ಮ ಮತ್ತು ಅನುಷಾ ರೈ ಅವರನ್ನು ದೂರ ಮಾಡಿ, ಧರ್ಮನ ಜೊತೆಗೆ ಐಶ್ವರ್ಯಾ ಸಿಂಧೋಗಿಯನ್ನು ಜೋಡಿ ಮಾಡಲಾಗಿದೆ.

ಜೋಡಿ ಟಾಸ್ಕ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯನ್ನು ನೀಡಲು ಕೆಲವು ಹಾಡುಗಳಿಗೆ ಎಲ್ಲ ಸ್ಪರ್ಧಿಗಳಿಂದ ಡ್ಯಾನ್ಸ್ ಮಾಡಿಸುತ್ತಿದ್ದಾರೆ. ಅದರಲ್ಲಿ ನಟ ಧರ್ಮನ ಜೋಡಿ ಆಗಿರುವ ಐಶ್ವರ್ಯಾ ಸಿಂಧೋಗಿ ಅವರೊಂದಿಗೆ ಶಿಶಿರ್ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿದ್ದಾನೆ. ಇದನ್ನು ಸಹಿಸದೇ ಶಿಶಿರ್‌ನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಹೊಡೆದು ಸ್ಟೇಜ್‌ನಿಂದ ಹೊರಗೆ ಹಾಕಿ ತಾನು ಐಶ್ವರ್ಯಾ ಅವರೊಂದಿಗೆ ಮಸ್ತ್‌ ಆಗಿ ಹೆಜ್ಜೆ ಹಾಕುತ್ತಾ ಮಜಾ ಮಾಡಿದ್ದಾರೆ. ಮೊದಲೇ ನಟ, ಅದರಲ್ಲಿಯೂ ಹೀರೋ ಬೇರೆ. ರಾ..ರಾ.. ರಕ್ಕಮ್ಮ... ಎಕ್ಕಾ.. ಸಕ್ಕಾ.. ಎಂದು ಐಶ್ವರ್ಯಾ ಅವರ ಬಳುಕುವ ಸೊಂಟವನ್ನು ನೋಡುತ್ತಾ ಸಖತ್ ಆಗಿ ಸ್ಟೆಪ್ ಹಾಕಿದ್ದಾನೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಅಸಲಿ ಮುಖ ಬಯಲು ಮಾಡಿದ ಬಿಗ್ ಬಾಸ್; ಬೆಂಬಲಿಗರಲ್ಲಿ ಆತಂಕ

ರಾಮಾಜಾರಿ-ಚಾರು ತೀರ್ಪುಗಾರರು:
ಬಿಗ್ ಬಾಸ್ ಮನೆಯ ಹಾಲಿ ಜೋಡಿ ಟಾಸ್ಕ್‌ನಲ್ಲಿ ಡ್ಯಾನ್ಸ್ ಮಾಡುವ ಟಾಸ್ಕ್‌ಗೆ ತೀರ್ಪುಗಾರರಾಗಿ ರಾಮಾಚಾರಿ ಧಾರಾವಾಹಿಯ ರಾಮಾಚಾರಿ ಹಾಗೂ ಚಾರು ಇಬ್ಬರೂ ಆಗಮಿಸಿದ್ದಾರೆ. ಯಾವ ಜೋಡಿ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆಯೋ ಅವರಿಗೆ ಡ್ಯಾನ್ಸ್ ಆಧಾರದಲ್ಲಿ ಅಂಕಗಳನ್ನು ಕೊಡಲಿದ್ದಾರೆ. ಇದರಿಂದ ಅಂತಿಮವಾಗಿ ಒಂದು ವಾರದ ನಂತರ ಯಾರು ಅತಿಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಅವರು ವಿನ್ನರ್ ಎಂದು ಘೋಷಣೆ ಮಾಡಲಾಗುತ್ತದೆ. ಇದೀಗ ಐಶ್ವರ್ಯಾ-ಧರ್ಮ ಡ್ಯಾನ್ಸ್ ಮಾತ್ರ ನೋಡುಗರಿಗೆ ಭರಪೂರ ಮನರಂಜನೆ ನೀಡುವುದಂತೂ ಸತ್ಯ.

ಐಶ್ವರ್ಯಾ-ಧರ್ಮ ಡ್ಯಾನ್ಸ್‌ನಿಂದ ಬಾಂಬ್ ಆದ ಅನುಷಾ: ಕಳೆದ ಆರೇಳು ವರ್ಷಗಳಿಂದ ಕೆಲವು ಸಿನಿಮಾಗಳಲ್ಲಿ ನಟಿಸುತ್ತಾ ಜೋಡಿಯಾಗಿದ್ದ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಕನ್ನಡ ಸೀಸನ್ 11ರ ಕಂಟೆಸ್ಟೆಂಟ್‌ಗಳಾಗಿ ಹೋಗಿದ್ದಾರೆ. ಇನ್ನು ಇವರಿಬ್ಬರೂ ಪ್ರಣಯಕ್ಕೆ ಕೊಟ್ಟ ಮಹತ್ವವನ್ನು ಟಾಸ್ಕ್‌ಗಳಿಗೂ ನೀಡುತ್ತಿದ್ದರಿಂದ, ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ, ಇದೀಗ ಇಬ್ಬರನ್ನು ಜೋಡಿ ಟಾಸ್ಕ್‌ನಲ್ಲಿ ದೂರ ಮಾಡಿದ್ದರಿಂದ ಇದೀಗ ಧರ್ಮ-ಐಶ್ವರ್ಯಾ ಜೊತೆಗೆ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾನೆ. ಇದರಿಂದಾಗಿ ತನ್ನ ಆತ್ಮೀಯ ಸ್ನೇಹಿತ ಧರ್ಮ ಇನ್ನೊಬ್ಬ ಹುಡುಗಿಯೊಂದಿಗೆ ಹೆಜ್ಜೆ ಹಾಕುವುದನ್ನು ಸಹಿಸಲಾಗದೇ ಸಖತ್ ಗರಂ ಆಗಿದ್ದಾರೆ. ಇದೀಗ ದೊಡ್ಡ ಬಾಂಬ್‌ನಂತೆ ಆಗಿದ್ದು, ಯಾವಾಗ ಸಿಡಿಯುತ್ತಾರೋ ಅದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಂವಿಧಾನಕ್ಕಿಂತಲೂ ದೊಡ್ಡವರೇ ಬಿಗ್ ಬಾಸ್; ಚುನಾವಣಾ ರಾಯಭಾರಿ ಹನುಮಂತನ ಮತದಾನ ಹಕ್ಕು ಮೊಟಕು!

ಧರ್ಮನೊಂದಿಗೆ ಸಲುಗೆ ಬೆಳಸಿ ದೂರವಾಗಿದ್ದ ಐಶ್ವರ್ಯಾ: ಬಿಗ್ ಬಾಸ್ ಮನೆಯಲ್ಲಿ ಮೊದಲ ಎರಡು ವಾರಗಳಲ್ಲಿ ಧರ್ಮ ಮತ್ತು ಅನುಷಾ ಅವರ ನಡುವಿನ ಸ್ನೇಹ ಸಂಬಂಧ ತಿಳಿಯದೇ ಧರ್ಮನೊಂದಿಗೆ ಐಶ್ವರ್ಯಾ ಸಿಂಧೋಗಿ ಆತ್ಮೀಯತೆಯನ್ನು ಬೆಳೆಸಿಕೊಂಡದ್ದರು. ದಿನ ಕಳೆಯುತ್ತಿದ್ದಂತೆ ಧರ್ಮ, ಅನುಷಾಳೊಂದಿಗೆ ಇದ್ದ ಸ್ನೇಹ ಸಂಬಂಧವನ್ನು ಹೇಳಿಕೊಳ್ಳುತ್ತಿದ್ದಂತೆ ಅವರಿಂದ ದೂರವಾಗಿ ಅಂತರ ಕಾಯ್ದುಕೊಂಡಿದ್ದಳು. ಇದಾದ ನಂತರ ಕಿರುತೆರೆ ನಟ ಶಿಶಿರ್‌ನೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
Bigg Boss: ದೇವರ ಮುಂದೆ ಬಿಕ್ಕಿಬಿಕ್ಕಿ ಅತ್ತ ಚೈತ್ರಾ ಕುಂದಾಪುರ: ವೀಕೆಂಡ್​ ಹೊತ್ತಲ್ಲಿ ಅಂಥದ್ದೇನಾಯ್ತು?