ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಸಂಸ್ಕಾರ ಇಲ್ಲದವರ ಹೆಸರೇಳಲು ಇಷ್ಟಪಡಲ್ಲ. ಆತನಿಗೆ ಸಮಾಜವೇ ಬುದ್ದಿ ಕಲಿಸುತ್ತದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಗೆ ಟಾಂಗ್ ನೀಡಿದರು.
ದಾಬಸ್‌ಪೇಟೆ (ನ.14): ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಸಂಸ್ಕಾರ ಇಲ್ಲದವರ ಹೆಸರೇಳಲು ಇಷ್ಟಪಡಲ್ಲ. ಆತನಿಗೆ ಸಮಾಜವೇ ಬುದ್ದಿ ಕಲಿಸುತ್ತದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಗೆ ಟಾಂಗ್ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಅವರ ಬಗ್ಗೆ ಕರಿಯ ಪದ ಮಾತನಾಡಿರುವುದು ಆತನ ಸಂಸ್ಕಾರ, ಸಂಸ್ಕೃತಿ ತಿಳಿಸುತ್ತದೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಂದು ತಾಯಿಯ ಮಕ್ಕಳಂತಿದ್ದಾರೆ. ಅದಕ್ಕೆ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು.
ಜಮೀರ್ ಖಾನ್ ಅವರನ್ನು ದೇವೇಗೌಡರ ಕುಟುಂಬವೇ ಸೃಷ್ಟಿ ಮಾಡಿದ್ದು, ಕುಮಾರಸ್ವಾಮಿ ಇರದಿದ್ದರೆ ಜಮೀರ್ ಅವರು ಬಸ್ ಇಟ್ಟುಕೊಂಡೆ ಇರಬೇಕಿತ್ತು. ಇದೀಗ ಬೇರೆ ಪಕ್ಷದಲ್ಲಿದ್ದೀನಿ ಅಂತ ಹಿಂದಿನದನ್ನು ಮರೆಯಬಾರದು. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಘನತೆ ಗೌರವವಿದೆ. ಬೇರೆಯವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು. ರಾಮನಗರ ಜಿಲ್ಲೆಯನ್ನು ಮಾಡಿದವರು ಕುಮಾರಸ್ವಾಮಿ, ಸತ್ತೆಗಾಲದಿಂದ ನೀರು ತಂದು ಇಡೀ ತಾಲೂಕನ್ನು ಹಸಿರು ಕ್ರಾಂತಿ ಮಾಡಿದ್ದಾರೆ. ಜಮೀರ್ ಖಾನ್ ಗೆ ನಾಚಿಕೆಯಾಗಬೇಕು.
undefined
108 ಸಿಬ್ಬಂದಿಗಳಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್
ಬಾಯಿಗೆ ಬಂದಹಾಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಸರ್ಕಾರ ಸತ್ತು ಹೋಗಿದೆ. ವೈಯಕ್ತಿಕ ಟೀಕೆಗಳನ್ನು ನಿಲ್ಲಿಸಬೇಕು. ಗೌರವಯುತವಾಗಿ ಮಾತನಾಡಬೇಕು ಎಂದು ಹೇಳಿದರು. ನನಗೆ ರಾಮನಗರ ಜಿಲ್ಲೆಯಲ್ಲಿ 45 ವರ್ಷಗಳ ಅನುಭವವಿದೆ. ನಾನೂ ರಾಮಗರದವನೇ ಆಗಿದ್ದು, ನಾನು ಸಹ ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ಬಾರಿ ಅಂತರದಲ್ಲಿ ಗೆಲುವು ಪಡೆಯಲಿದ್ದಾರೆ ಎಂದರು.
ಅಧಿಕಾರಿಗಳು - ಗುತ್ತಿಗೆದಾರರನ್ನು ಹೆದರಿಸಿ ಹಣ ವಸೂಲಿ: ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆಗಳಿಗಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪಿಸಿದರು. ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ನಿರ್ಲಿಪ್ತಗೊಂಡಿದೆ. ಒಂದು ತಪ್ಪು ಮುಚ್ಚಲು ಹೋಗಿ ಅನೇಕ ತಪ್ಪುಗಳನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ದೂರಿದರು.
ಈವರೆಗೂ ಡಿ.ಕೆ.ಶಿವಕುಮಾರ್ ಹೇಳಿದ್ದು ಒಂದೇ ಒಂದು ಮಾತು ನಿಜ. ಶಕ್ತಿ ಯೋಜನೆ ಸ್ಥಗಿತ ಮಾಡುವ ಬಗ್ಗೆ ಹೇಳಿರುವುದೇ ಅವರ ಜೀವನದ ಒಂದು ಸತ್ಯವಾಗಿದೆ. ಚನ್ನಪಟ್ಟಣ ಉಪ ಚುನಾವಣಾ ಫಲಿತಾಂಶದ ಬಳಿಕ ಅವರ ಮಾತು ನಿಜವಾಗಲಿದೆ. ಬಿ ಫಾರಂ ನೀಡುತ್ತೇವೆ ಎಂದರೂ, ಮ್ಯಾಚ್‌ಫಿಕ್ಸಿಂಗ್ ಮಾಡಿಕೊಂಡು ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಈ ಹಿಂದೆ ಸೈಕಲ್ ತುಳಿದಿದ್ದ ಅವರು 3 ತಿಂಗಳಿನಲ್ಲಿ ತಮ್ಮ ಸೈಕಲ್ ಪಂಚರ್ ಮಾಡಿಕೊಂಡರು ಎಂದು ಲೇವಡಿ ಮಾಡಿದರು. ದೇವೇಗೌಡರ ದೂರದೃಷ್ಟಿಯಂತೆ ಕ್ಷೇತ್ರದ ಅಭಿವೃದ್ಧಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಳ್ಳಬೇಕಿದೆ.
ಅಪರೂಪದ ಕಾಯಿಲೆಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧ: ಸಚಿವ ಶರಣ ಪ್ರಕಾಶ್ ಪಾಟೀಲ್
ಏನು ತಪ್ಪು ಮಾಡದೇ 2 ಬಾರಿ ಸೋಲು ಕಂಡಿರುವ ನಿಖಿಲ್ ಕುಮಾರಸ್ವಾಮಿ ಈ ಬಾರಿ ಗೆಲುವು ಸಾಧಿಸಲೇಬೇಕಿದೆ. ಚುನಾವಣೆಗೆ ಬಾಕಿ ಉಳಿರುವ 48 ಗಂಟೆಯೊಳಗೆ ಕಾಂಗ್ರೆಸ್ ತನ್ನ ಕೈ ಚಳಕ ತೋರಿಸಲಿದೆ. ಹೀಗಾಗಿ ನಮ್ಮ ಕಾರ್ಯಕರ್ತರು ಕಾಂಗ್ರೆಸ್‌ನ ಕಳ್ಳರ ಸಂತೆಗೆ ತಕ್ಕ ಉತ್ತರ ನೀಡಬೇಕು. ಮತದಾರರು ಕಾಂಗ್ರೆಸ್‌ನ ಹಣ ಪಡೆದುಕೊಳ್ಳಿ ಬೇಡ ಎನ್ನುವುದಿಲ್ಲ. ಆದರೆ, ಅವರ ಹೀನಾ ಕೃತ್ಯಗಳಿಗೆ ಬಲಿಯಾಗದೆ ಮನಸಾಕ್ಷಿಯಂತೆ ಮತ ಚಲಾಯಿಸಿ ಎಂದು ವಿ.ಸೋಮಣ್ಣ ಮನವಿ ಮಾಡಿದರು.