ಡಾ ರಾಜ್‌ ಮನೆಗೆ ಹೋದೋರಿಗೆ ಏನೋ ಒಂದು ಹೇಳ್ತಾರೆ, ಕೊಡ್ತಾರೆ; ಗುಟ್ಟು ಹೇಳಿದ ಶಿವರಾಜ್‌ಕುಮಾರ್!

By Shriram Bhat  |  First Published Nov 14, 2024, 4:45 PM IST

ಶಿವರಾಜ್‌ಕುಮಾರ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಹಲವರಿಗೆ ಗೊತ್ತಿಲ್ಲದ, ಡಾ ರಾಜ್‌ಕುಮಾರ್ ಫ್ಯಾಮಿಲಿಯ ಕೆಲವು ಸೀಕ್ರೆಟ್‌ಗಳನ್ನು ಬಿಚ್ಚಿಟ್ಟಿದ್ದಾರೆ. ಅಪ್ಪಾಜಿ ಕಾಲದಿಂದಲೂ..


ಕನ್ನಡ ಚಿತ್ರರಂಗದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ (Shiva rajkumar) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಹಲವು ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಹಲವರಿಗೆ ಗೊತ್ತಿಲ್ಲದ, ಡಾ ರಾಜ್‌ಕುಮಾರ್ (Dr Rajkumar) ಫ್ಯಾಮಿಲಿಯ ಕೆಲವು ಸೀಕ್ರೆಟ್‌ಗಳನ್ನು ಬಿಚ್ಚಿಟ್ಟಿದ್ದಾರೆ. ಅಪ್ಪಾಜಿ ಕಾಲದಿಂದಲೂ ಹೀಗೇ ನಡೆದುಕೊಂಡು ಬಂದಿದೆ ಅಂತ ಶಿವಣ್ಣ ಕೆಲವು ವಿಷಯ ರಿವೀಲ್ ಮಾಡಿದ್ದಾರೆ. ಹಾಗಿದ್ದರೆ ಅದೇನು? ಮುಂದೆ ನೋಡಿ..

ನಮ್ಮನೇಲಿ ಅಪ್ಪಾಜಿ ಕಾಲದಿಂದ ಬಂದಿದೆ ಅದು.. ನಾವು ಮದ್ರಾಸ್‌ನಲ್ಲಿ ಇರೋ ಕಾಲದಿಂದನೂ ಅದು ಹಾಗೇ ನಡಕೊಂಡು ಬಂದಿದೆ. ಊಟದ ವಿಷ್ಯದಲ್ಲಿ ಮಾತ್ರ ಯಾವುದೇ ತಾರತಮ್ಯ ಇರಲ್ಲ ನಮ್ಮನೆಲ್ಲಿ, ಅವ್ರಿಗೆ ಬೇರೆ ಊಟ ಇವ್ರಿಗೆ ಬೇರೆ ಊಟ ಅಂತ ಇರೋದೇ ಇಲ್ಲ.. ಅಪ್ಪಾಜಿ ಸಿನಿಮಾ ಮಾಡ್ತಿದ್ದಾಗ್ಲೂ ಅಷ್ಟೇ, ಅವ್ರು ಒಮ್ಮೆ ಎಲ್ಲರೂ ಊಟ ಮಾಡ್ತಿದ್ದ ಜಾಗಕ್ಕೆ ಹೋಗ್ಬಿಟ್ಟಿದಾರೆ.. ಅಲ್ಲಿ ಎಲ್ಲರೂ ಏನ್ ಊಟ ಮಾಡ್ತಿದಾರೆ ಅಂತ ನೋಡಿ, ಊಟ ಚೆನ್ನಾಗಿದ್ಯಾ ಅಂತ ಕೇಳಿದ್ರಂತೆ.. ಅಲ್ಲಿ ಏನೋ ನೋಡಿ, ನಿಮಗೆ ನಾನ್‌ವೆಜ್ ಬಂದಿಲ್ವಾ? ಅಂತ ಕೇಳಿದ್ರಂತೆ.. 

Tap to resize

Latest Videos

undefined

ರಿಯಲ್ ಸ್ಟಾರ್ ಹೇಳಿರೋ ಈ ಕಥೆ ಗೊತ್ತಾ? ಉಪ್ಪಿನ ಸುಮ್ನೆ ಹೇಳಿಲ್ವಂತೆ ಬುದ್ಧಿವಂತ ಅಂತ!

ಬಳಿಕ, ಅಲ್ಲಿ ಊಟ ಅವ್ರಿಗೆ ಬೇರೆ ಇವ್ರಿಗೆ ಬೇರೆ ಅಂತ ಗೊತ್ತಾದ ಕೂಡ್ಲೇ, 'ಏ ಬೇಡ ಬೇಡ, ಊಟದ ವಿಷ್ಯದಲ್ಲಿ ಯಾರಿಗೂ ಹಾಗೆ ಮಾಡ್ಬೇಡಿ..ನಂಗೂ ಅದೇ ಊಟ ತಗಂಡು ಬನ್ನಿ'ಅಂದ್ರಂತೆ ಅಪ್ಪಾಜಿ. ಅದಾದ್ಮೇಲೆ ಮಾರನೇ ದಿನದಿಂದ ಎಲ್ಲರಿಗೂ ಒಂದೇ ಊಟ ಬರ್ತಾ ಇತ್ತಂತೆ. ಅಪ್ಪಾಜಿ ಪಿಕ್ಚರ್ ಅಂದ್ರೆ, ನಿರ್ಮಾಪಕರು ಅವ್ರಿಗೆ ಬೇರೆ ಊಟ ಇವ್ರಿಗೆ ಬೇರೆ ಊಟ ಅಂತ ಮಾಡ್ತಾ ಇರ್ಲಿಲ್ವಂತೆ. ನಮ್ ಅಮ್ಮ ಪಾರ್ವತಮ್ಮ ಅವ್ರ (Parvathamma Rajkumar) ಹೋಮ್ ಪ್ರೊಡಕ್ಷನ್‌ನಲ್ಲೂ ಅಷ್ಟೇ, ಎಲ್ಲರಿಗೂ ಒಂದೇ ಊಟ..'ಅಂದಿದ್ದಾರೆ ಕರುನಾಡ ಚಕ್ರವರ್ತಿ. 

ನಮ್ಮ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ ಹಾಗೇ ಇತ್ತು, ಅದು ಈಗ ನಮ್ಮ ಗೀತಾ ಪಿಕ್ಚರ್ಸ್ನಲ್ಲೂ ಹಾಗೆ ಕಂಟಿನ್ಯೂ ಆಗಿದೆ. ಮನೆಗೆ ಯಾರೇ ಬಂದ್ರೂ ಏನಾದ್ರೂ ಕೊಡೋದು ನಮ್ಮನೆ ಪದ್ಧತಿ. ಅದ್ರಲ್ಲೂ ಊಟದ ಟೈಮಗೆ ಬಂದ್ರೆ 'ಊಟ ಮಾಡಿದ್ರಾ..?' ಅಂತ ಕೇಳೋ ಪದ್ಧತಿ ನಮ್ಮನೆಲ್ಲಿ ಇಲ್ಲಾ.. ಯಾರೇ ಬಂದ್ರೂ 'ಊಟ ಮಾಡಿ ಬನ್ನಿ.' ಅಂತಾನೇ ಅನ್ನೋದು. ಇದೂ ಕೂಡ ಅಪ್ಪಾಜಿನೇ ಹೇಳಿಕೊಟ್ಟಿದ್ದು. ನಮ್ಮ ಅಪ್ಪಾಜಿ ಹೇಳೋರು, ನಾವು ಯಾರನ್ನಾದ್ರೂ ಊಟ ಆಯ್ತಾ ಅಂತ ಕೇಳಿದ್ರೆ, ಅವ್ರು ಆಯ್ತು ಅಂದ್ಬಿಡ್ತಾರೆ. ಅದಕ್ಕೇ ಯಾರನ್ನೂ ಊಟ ಆಯ್ತಾ ಅಂತ ಕೇಳಬಾರ್ದು' ಅಂತಿದ್ರು. 

ಜೊತೆಯಲ್ಲಿ ನಟಿಸಿರುವ ಡಾಲಿ ಧನಂಜಯ್ ನಟ ಶಿವಣ್ಣಗೆ 'ಅರವಟ್ಟಿಗೆ' ಅಂದಿದ್ಯಾಕೆ?

'ಯಾರೇ ಬಂದ್ರೂ ಊಟ ಮಾಡೋಣ ಬನ್ನಿ ಅನ್ಬೇಕು. ಆಗ ಬಂದವ್ರು ಊಟಕ್ಕೆ ಬರ್ತಾರೆ. ಅವ್ರಿಗೆ ಊಟ ಆಗಿದ್ರೂ ಸರಿ, ಎಷ್ಟು ಬೇಕೋ ಅಷ್ಟು ತಿಂತಾರೆ' ಅನ್ನೋರು ಅಪ್ಪಾಜಿ. ಎಷ್ಟು, ಅಂದ್ರೆ ತುಂಬಾ ಸಣ್ಣ ಸಣ್ಣ ಲಾಜಿಕ್ಕು ಇತ್ತು ಅಪ್ಪಾಜಿ ಹತ್ರ ಅಂದ್ರೆ, ಅದನ್ನ ನಾವೂ ನೋಡ್ಕೊಂಡು ಬಂದಿದೀವಿ, ನಮಗೂ ಹಾಗೇ ಬಂದ್ಬಿಟ್ಟಿದೆ. ಅದು ಲೆಗ್ಗಸಿ ಥರ ಹಾಗೇ ಮುಂದುವರೆದುಕೊಂಡು ಹೋಗುತ್ತೆ, ಹೋಗ್ಬೇಕು ಅನ್ನೋದು ನಮ್ಮೆಲ್ಲರ ಆಸೆ..' ಅಂದಿದ್ದಾರೆ ಡಾ ರಾಜ್‌ಕುಮಾರ್ ಮಗ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. 

click me!