ಧರ್ಮಸ್ಥಳ ಮಾದರಿ ಯೋಜನೆ ದೇಶವ್ಯಾಪಿ ಜಾರಿಗೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

By Kannadaprabha News  |  First Published Nov 15, 2024, 6:06 AM IST

ಹೆಚ್ಚಿನ ಸರ್ಕಾರಿ ಯೋಜನೆಗಳಲ್ಲಿ ಕೆಲವೊಮ್ಮೆ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಇರುತ್ತವೆ. ಆದರೆ ಧರ್ಮಸ್ಥಳದ ಸಂಸ್ಥೆಗಳು ಯಾವುದೇ ಯೋಜನೆಗಳನ್ನು ಸದಾ ಪರಿ ಶೀಲನೆ ಮಾಡುವುದರಿಂದ ಅವು ಸಮರ್ಪ ಕವಾಗಿ ಅನುಷ್ಠಾನಗೊಳ್ಳುತ್ತಿವೆ.  ಕೇಂದ್ರ ಸರ್ಕಾರ ತನ್ನ ನೀತಿಗಳಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸುವತ್ತ ಚಿಂತಿಸಿದಲ್ಲಿನವ ಭಾರತದ ನಿರ್ಮಾಣ ಸಾಧ್ಯವಾಗಲಿದೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 


ಬೆಳ್ತಂಗಡಿ(ನ.15):  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶಕ್ಕೇ ಮಾದರಿಯಾಗಿದೆ. ಈ ಮಾದರಿ ಯನ್ನು ನಬಾರ್ಡ್ ದೇಶಾದ್ಯಂತ ಅನುಷ್ಠಾನ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. 

ಗುರುವಾರ ಧರ್ಮಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಿಸಿ ಅವರು ಮಾತನಾಡಿದರು. ಹೆಚ್ಚಿನ ಸರ್ಕಾರಿ ಯೋಜನೆಗಳಲ್ಲಿ ಕೆಲವೊಮ್ಮೆ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳು ಇರುತ್ತವೆ. ಆದರೆ ಧರ್ಮಸ್ಥಳದ ಸಂಸ್ಥೆಗಳು ಯಾವುದೇ ಯೋಜನೆಗಳನ್ನು ಸದಾ ಪರಿ ಶೀಲನೆ ಮಾಡುವುದರಿಂದ ಅವು ಸಮರ್ಪ ಕವಾಗಿ ಅನುಷ್ಠಾನಗೊಳ್ಳುತ್ತಿವೆ.  ಕೇಂದ್ರ ಸರ್ಕಾರ ತನ್ನ ನೀತಿಗಳಲ್ಲಿ ಇಲ್ಲಿನ ಮಾದರಿಯನ್ನು ಅಳವಡಿಸುವತ್ತ ಚಿಂತಿಸಿದಲ್ಲಿನವ ಭಾರತದ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು. 

Latest Videos

ಮೇಣದಲ್ಲಿ ಮೈದಳೆದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಹೆಗ್ಗಡೆ ಪ್ರತಿರೂಪ: ತದ್ರೂಪ ಕಂಡು ವೀರೇಂದ್ರ ದಂಪತಿ ಮೂಕವಿಸ್ಮಿತ!

2047 ವೇಳೆಗೆ ಭಾರತ ಸಂಪೂರ್ಣವಾಗಿ ಅಭಿವೃದ್ಧಿ ಭಾರತವಾಗಿ ಕಂಗೊಳಿಸಬೇಕು ಎಂಬ ಕನಸು ಪ್ರಧಾನಿ ಮೋದಿಯವರದ್ದು. ಸರ್ಕಾರ ಹಳ್ಳಿಗಳ ಸಶಕ್ತಿಕರಣಕ್ಕೆ ಆದ್ಯತೆ ನೀಡುತ್ತಿದೆ. ಇದಕ್ಕೆ ಮಹಿಳೆಯರ ಪಾಲು ಅಧಿಕವಾಗಬೇಕು. ಸ್ವಸಹಾಯ ಸಂಘಗಳ ಮಾದರಿ ಈಗ ಕೇವಲ ಕಲ್ಯಾಣದ ಅಥವಾ ಸಹಾಯ ನೀಡುವ ಕ್ರಮವಷ್ಟೇ ಆಗಿ ಉಳಿದಿಲ್ಲ. ಇದು ಮಹಿಳೆಯರಿಗೆ ಆದಾಯ ಗಳಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿ ಯಾಗಲು ಬೇಕಾದ ಸಂಪನ್ಮೂಲಗಳನ್ನೂ ಒದಗಿಸುತ್ತದೆ. ಇಂಥ ಗುಂಪು ಗಳಲ್ಲಿ ಭಾಗವಹಿಸಿದ ಮಹಿಳೆಯರು ಗಳಿಸುತ್ತಿರುವ ಲಾಭ ಅವರಿಗೆ ಗೌರವ ಮತ್ತು ಆತ್ಮವಿಶ್ವಾಸ ನೀಡುತ್ತದೆ. ಸರ್ಕಾರಿ ಯೋಜನೆಗಳು, ಧರ್ಮಸ್ಥಳ ಯೋಜನೆಯಂಥ ಎನ್‌ಜಿಒಗಳು ಗ್ರಾಮೀಣ ಮಹಿಳೆಯರಿಗೆ ಪ್ರಗತಿಯ ಅವಕಾಶ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದರು. 

ಧರ್ಮಸ್ಥಳದ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತಿದ್ದು,ಈಮಾದರಿಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವಲ್ಲಿ ನೆರವಾಗಿವೆ. ಧರ್ಮಸ್ಥಳ ಯೋಜನೆಗಳ ಮಾದರಿಯ ಯಶಸ್ಸಿನಲ್ಲಿ ಒಂದು ಮುಖ್ಯ ಅಂಶವೇನೆಂದರೆ ನೈತಿಕ ಹೊಣೆ. ಧರ್ಮಸ್ಥಳದಂತಹ ಸಂಸ್ಥೆಗಳು ತಮ್ಮ ಯೋಜನೆಗಳಲ್ಲಿ ನೈತಿಕ ನಿಯಂತ್ರಣವನ್ನು ನಿರ್ವಹಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

click me!