ಬಿಗ್ ಬಾಸ್ ಮನೆಗೆ ಬಂದ ರಾಮಾಚಾರಿ-ಚಾರು; ವೈಲ್ಡ್ ಕಾರ್ಡ್ ಸ್ಪರ್ಧಿಯಾಗ್ತಾರಾ ಮೌನಾ ಗುಡ್ಡೇಮನೆ!

By Sathish Kumar KH  |  First Published Nov 14, 2024, 7:49 PM IST

ಬಿಗ್ ಬಾಸ್ ಕನ್ನಡ 11ರಲ್ಲಿ 6ನೇ ವಾರದಲ್ಲಿ ಮೌನಾ ಗುಡ್ಡೇಮನೆ ಅವರು ಕಾಣಿಸಿಕೊಂಡಿದ್ದಾರೆ. ಟಾಸ್ಕ್‌ನ ತೀರ್ಪುಗಾರರಾಗಿ ಬಂದಿರುವ ಅವರು, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧಿಯಾಗುತ್ತಾರಾ ಎಂಬ ಚರ್ಚೆಗಳು ನಡೆಯುತ್ತಿವೆ.


ಬೆಂಗಳೂರು (ನ.14): ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 11ರಲ್ಲಿ ಇದೀಗ 6ನೇ ವಾರ ನಡೆಯುತ್ತಿದೆ. ಈವರೆಗೆ 5 ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದು, ಒಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದಾರೆ. ಆದರೆ, ಇದೀಗ ಪುನಃ ರಾಮಾಚಾರಿ ಧಾರಾವಾಹಿಯ ಮೌನಾ ಗುಡ್ಡೇಮನೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರೇನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸ್ಪರ್ಧಿ ಆಗುತ್ತಾ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಬಿಗ್ ಬಾಸ್ ಸೀಸನ್ 11ರಲ್ಲಿ 5 ವಾರಗಳಲ್ಲಿ 5 ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಪೈಕಿ ಮೂವರು (ಯಮುನಾ ಶ್ರೀನಿಧಿ, ಹಂಸಾ ಹಾಗೂ ಮಾನಸಾ) ಎಲಿಮಿನೇಟ್ ಆಗಿ ಮನೆಯಿಂದ ಹೋಗಿದ್ದಾರೆ. ಉಳಿದಂತೆ ಲಾಯರ್ ಜಗದೀಶ್ ಮತ್ತು ನಟ ಸೂರ್ಯ ರಂಜಿತ್ ಅವರು ಮನೆಯಲ್ಲಿ ಬಿಗ್ ಬಾಸ್ ನಿಯಮಗಳನ್ನು ಉಲ್ಲಂಘನೆ ಮಾಡಿಕೊಂಡು ಮನೆಯಿಂದ ಹೊರಹಾಕಲ್ಪಟ್ಟಿದ್ದಾರೆ. ಆದರೆ, ಇಬ್ಬ ವ್ಯಕ್ತಿ ಗಾಯಕ ಹನುಮಂತು ಮಾತ್ರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಬಂದಿದ್ದಾರೆ. ಇದರ ಜೊತೆಗೆ, ಇದೀಗ ಟಾಸ್ಕ್ ಆಡಿಸಲಿಕ್ಕೆ ರಾಮಾಚಾರಿ ಧಾರಾವಾಹಿಯ ಜೋಡಿ ರಾಮಾಚಾರಿ @ ರಿತ್ವಿಕ್ ಕೃಪಾಕರ್ ಹಾಗೂ ಚಾರು @ ಮೌನಾ ಗುಡ್ಡೇಮನೆ ಒಳಗೆ ಬಂದಿದ್ದಾರೆ. ಇವರು ಸ್ಪರ್ಧಿಗಳು ನಡೆಸಲಿರುವ ಟಾಸ್ಕ್ ಆಧಾರದಲ್ಲಿ ಅಂಕಗಳನ್ನು ಕೊಡಲಿದ್ದಾರೆ. ಈ ಮೂಲಕ ಮೌನಾ ಗುಡ್ಡೇಮನೆ ಬಿಗ್ ಬಾಸ್ ಮನೆಗೆ ಕೇವಲ ತೀರ್ಪುಗಾರರಾಗಿ ಒಂದು ಟಾಸ್ಕ್‌ ನಡೆಸಲು ಮಾತ್ರ ಬಂದಿದ್ದಾರೆ ಎಂಬುದು ಖಚಿತವಾಗಿದೆ.

Tap to resize

Latest Videos

undefined

ಇದನ್ನೂ ಓದಿ: ಬಿಗ್ ಬಾಸ್ 11: ಐಶ್ವರ್ಯಾ ಜೊತೆ ಡ್ಯಾನ್ಸ್ ಮಾಡಿದ ಶಿಶಿರ್‌ಗೆ ಹೊಡೆದ ಧರ್ಮ ಕೀರ್ತಿರಾಜ್

ಬಿಗ್ ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್‌ಗಳನ್ನು ನಡೆಸಲಾಗುತ್ತಿದ್ದು, ಮಣ್ಣಿನ ಟಾಸ್ಕ್, ಸ್ಟ್ಯಾಚೂ ಟಾಸ್ಕ್‌ಗಳನ್ನು ಮಾಡಲಾಗಿದೆ. ಇದೀಗ ಡ್ಯಾನ್ಸ್ ಮಾಡುವ ಟಾಸ್ಕ್‌ ಅನ್ನೂ ಕೊಡಲಾಗಿದ್ದು, ಆಯಾ ಜೋಡಿಗಳು ಒಂದೊಂದು ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ. ಅದರಲ್ಲಿ ಡ್ಯಾನ್ಸ್ ಟಾಸ್ಕ್‌ನ ತೀರ್ಪುಗಾರರಾಗಿ ಮೌನಾ ಗುಡ್ಡೇಮನೆ ಹಾಗೂ ರಿತ್ವಿಕ್ ಆಗಮಿಸಿದ್ದು, ಸ್ಪರ್ಧಿಗಳ ಡ್ಯಾನ್ಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಎಲ್ಲ ಸ್ಪರ್ಧಿಗಳು ಕೂಡ ಉತ್ತಮವಾಗಿ ಡ್ಯಾನ್ಸ್ ಪ್ರದರ್ಶನ ಮಾಡಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಹಾಸ್ಯ ಪ್ರಸಂಗಗಳೂ ನಡೆದಿವೆ.

ರಾಮಾಚಾರಿ-ಚಾರುಗಾಗಿ ಗಾನಾ-ನಾಟ್ಯ ಹಂಗಾಮ!

ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/N7lppPuO8H

— Colors Kannada (@ColorsKannada)

ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರಾ ಮೌನಾ, ರಿತ್ವಿಕ್:
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಮ್ಮ ಕೃಷ್ಣನಿಗೆ ರುಕ್ಕುನನ್ನು ಜೋಡಿ ಮಾಡಿ ಮದುವೆ ಮಾಡಿಕೊಡಲಿಕ್ಕೆ ಇಡೀ ಕುಟುಂಬವೇ ಒಂದಾಗಿ ಪ್ರಯತ್ನ ಮಾಡುತ್ತಿದೆ. ಅದರಲ್ಲಿ ರಾಮಾಚಾರಿ ಸೀರೆ ಧರಿಸಿ ಮಹಿಳಾ ಪಾತ್ರವನ್ನೂ ಮಾಡುತ್ತಿದ್ದಾನೆ. ಇತ್ತ ರುಕ್ಕುನನ್ನು ಕರೆದುಕೊಂಡು ಹೋಗಲು ಅವರ ಮನೆಗೆ ಬಂದ ಚಾರು ಹಾಗೂ ಅವರ ಅತ್ತೆ ಇಬ್ಬರೂ ರೌಡಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಿಡಿಸಲು ಬಂದ ರಾಮಾಚಾರಿ ಕೂಡ ಸಿಕ್ಕಿ ಬಿದ್ದಿದ್ದಾನೆ. ಇನ್ನೇನು ಎಲ್ಲವನ್ನೂ ಎದುರಿಸಿ ರುಕ್ಕು ಕರೆದುಕೊಂಡು ಹೋಗಿ ಕೃಷ್ಣನಿಗೆ ಮದುವೆ ಮಾಡಿದರೆ ಇಡೀ ಧಾರಾವಾಹಿ ಮುಕ್ತಾಯ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ಈ ಧಾರಾವಾಹಿ ಮುಗಿದ ನಂತರ ರಾಮಾಚಾರಿಯ ಮೌನಾ ಗುಡ್ಡೇಮನೆ ಹಾಗೂ ರಿತ್ವಿಕ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಲಿದ್ದಾರೆಯೇ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಇದನ್ನೂ ಓದಿ: ಗಂಡು ಮಕ್ಕಳಿಗೆ ಮಾತ್ರ ಪ್ರೈವೇಟ್ ಪಾರ್ಟ್‌ ಇರೋದಾ? ಹೆಣ್ಣುಮಕ್ಕಳಿಗೂ ಇರುತ್ತೆ; ಗೋಲ್ಡ್‌ ಸುರೇಶ್‌ ವಿರುದ್ಧ ಗೌತಮಿ ಗರಂ

click me!