ಬಾಲಿವುಡ್ ನಟಿಯರ ರೇಂಜಲ್ಲಿ ಬೋಲ್ಡ್ ಆದ ಚೈತ್ರಾ ಆಚಾರ್, ಅಬ್ಬಬ್ಬಾ ಫ್ಯಾನ್ಸ್ ಸುಸ್ತು!

First Published Jun 21, 2024, 11:46 AM IST

ಕನ್ನಡ ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ಮತ್ತು ಗಾಯಕಿ ಚೈತ್ರಾ ಆಚಾರ್, ಸಿಕ್ಕಾಪಟ್ಟೆ ಬೋಲ್ಡ್ ಆಗಿರೋ ಫೋಟೋಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಚೈತ್ರಾ ಆಚಾರ್ (Chaithra Achar) ಹೆಸರು ಕೇಳಿದ್ರೆ ಸಾಕು ಸಿಕ್ಕಾಪಟ್ಟೆ ಬೋಲ್ಡ್ ನೆಸ್ ನೆನಪಾಗುತ್ತೆ. ಇವರೊಬ್ಬ ಅದ್ಭುತ ನಟಿ ಹಾಗೂ ಗಾಯಕಿ ಅನ್ನೋದು ನಿಜಾ. ಆದ್ರೆ ಅದಕ್ಕಿಂತ ಹೆಚ್ಚಾಗಿ ನೆನಪಾಗೋದು ಇವರ ಬೋಲ್ಡ್ ನೆಸ್. 
 

ಮಹಿರಾ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಚೈತ್ರಾ ಆಚಾರ್, ಬಳಿಕ ತಲೆ ದಂಡ, ಗಿಲ್ಕಿ, ಅದೃಶ್ಯ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟೋಬಿ ಮತ್ತು ಸಪ್ತಸಾಗರದಾಚೆ ಎಲ್ಲೋ (Saptasagaradache ello)  ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. 
 

ನಟಿ ಚೈತ್ರಾ ಅಧ್ಬುತ ಗಾಯಕಿ ಕೂಡ ಹೌದು, ಇವರು ಗರುಡ ಗಮನ ವೃಷಭ ವಾಹನ ಚಿತ್ರದ ಸೋಜುಗಾದ ಸೂಜು ಮಲ್ಲಿಗೆ ಹಾಡು ಹಾಡುವ ಮೂಲಕ ಫಿಲಂಫೇರ್ ಅವಾರ್ಡ್ ಸಹ ಪಡೆದಿದ್ದರು. ಆದರೆ ಈ ನಟಿ ಹೆಚ್ಚು ಸುದ್ದಿಯಾಗಿದ್ದು ಮಾತ್ರ ತಮ್ಮ ಹಾಟ್ ನೆಸ್ ನಿಂದ. 
 

ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾ ಆಕ್ಟೀವ್ ಆಗಿರುವ ಚೈತ್ರಾ ಆಚಾರ್, ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೋ ಶೂಟ್ ಮಾಡ್ತಾ, ಅದನ್ನ ಶೇರ್ ಮಾಡ್ತಾನೆ ಇರ್ತಾರೆ. ಆ ಮೂಲಕ ಪಡ್ಡೆಗಳ ನಿದ್ದೆ ಕೆಡಿಸ್ತಿರ್ತಾರೆ ಚೈತ್ರಾ. 
 

ಇತ್ತೀಚೆಗೆ ನಟಿ ಕೆಂಪು ಮತ್ತು ಪೀಚ್ ಬಣ್ಣದ ಮಾಡರ್ನ್ ಡ್ರೆಸ್ ಧರಿಸಿದ್ದು, ಬ್ಯಾಕ್ ಲೆಸ್ ಮತ್ತು ಡೀಪ್ ನೆಕ್ ಡ್ರೆಸಲ್ಲಿ ಚೈತ್ರ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಇವರ ಬೋಲ್ಡ್ ನೆಸ್ ಗೆ ಸ್ಯಾಂಡಲ್ ವುಡ್ ಹುಬ್ಬೇರಿಸಿ ನೋಡುವಂತಾಗಿದೆ. 
 

ಈ ಹಿಂದೆ ತಮ್ಮ ಬೋಲ್ಡ್ ಫೋಟೋಗಳಿಗೆ (bold photochoot) ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರಿಂದ ಕೋಪಗೊಂಡಿದ್ದ ಚೈತ್ರಾ, ಕ್ಲಾಸ್ ಕೂಡ ತೆಗೆದುಕೊಂಡಿದ್ರು. ಆದ್ರೆ ಬೋಲ್ಡ್ ಫೋಟೋ ಶೂಟ್ ಮಾಡಿಸೋದು ಮಾತ್ರ ಕಡಿಮೆ ಮಾಡಿಲ್ಲ. ಕೆಟ್ಟ ಕಾಮೆಂಟ್ ಗಳಿಂದ ದೂರ ಉಳಿಯಲು ಕಾಮೆಂಟ್ ಸೆಕ್ಷನ್ ರಿಸ್ಟ್ರಿಕ್ಟ್ ಮಾಡಿದ್ದಾರೆ ನಟಿ. 
 

ಸೋಶಿಯಲ್ ಮೀಡಿಯಾ ಟ್ರೋಲ್ ಪೇಜ್ ಗಳಲ್ಲಿ ಚೈತ್ರಾ ಫೋಟೋ ಮಾತ್ರಾ ತುಂಬಾನೆ ಸದ್ದು ಮಾಡುತ್ತಿರುತ್ತೆ. ಅಲ್ಲೆಲ್ಲ ನೆಟ್ಟಿಗರು ಚೈತ್ರಾ ಬೋಲ್ಡ್ ನೆಸ್ ನೋಡಿ ಬರ್ತಾ ಬರ್ತಾ ಇಷ್ಟೊಂದು ಬೋಲ್ಡ್ ಆದ್ರೆ ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ.
 

ಇನ್ನು ಕರಿಯರ್ ವಿಷ್ಯಕ್ಕೆ ಬಂದ್ರೆ ನಟಿ ಚೈತ್ರಾ ಸದ್ಯ ಬ್ಲಿಂಕ್ ಚಿತ್ರದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ನಡೆದ ಚಿತ್ತಾರ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ರೈಸಿಂಗ್ ಸ್ಟಾರ್ ಪ್ರಶಸ್ತಿ ಕೂಡ ಪಡೆದಿದ್ದರು. 
 

Latest Videos

click me!