ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸೂಕ್ತ ಆಟಗಾರರನ್ನು ಖರೀದಿಸಿದಿಲ್ಲ ಅನ್ನೋ ಅಭಿಮಾನಿಗಳ ಕೋಪ ತಾಪ ಹೆಚ್ಚಗುತ್ತಿದೆ. ವಿಜಯ್ ಮಲ್ಯ ಸಾಲ ಮರುಪಾವತಿಸಲು ಹಣ ಬಾಕಿ ಉಳಿಸಿಕೊಳ್ಳುತ್ತಿದ್ದೀರಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಜೆಡ್ಡಾ(ನ.24) ಐಪಿಎಲ್ 2025ರ ಮೆಗಾ ಹರಾಜು ನಡೆಯುತ್ತಿದೆ. ಪ್ರತಿ ತಂಡಗಳು ಪ್ರಮುಖ ಆಟಗಾರರ ಖರೀದಿಸುತ್ತಿದೆ. ಇದೇ ಕಾರಣದಿಂದ ರಿಷಬ್ ಪಂತ್ 27 ಕೋಟಿ ರೂಪಾಯಿ, ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಮಾರಾಟವಾಗಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏನು ಮಾಡುತ್ತಿದೆ ಅನ್ನೋ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ತಂಡಕ್ಕೆ ಅಗತ್ಯವಾಗಿ ಬೇಕಿದ್ದ ಆಟಗಾರರ ಖರೀದಿಗೆ ಆರ್‌ಸಬಿ ಮುಂದಾಗುತ್ತಿಲ್ಲ ಅನ್ನೋ ಆಕ್ರೋಶ ಹೆಚ್ಚಾಗುತ್ತಿದೆ. ಕೆಎಲ್ ರಾಹುಲ್ ಖರೀದಿಗೂ ಆಸಕ್ತಿತೋರದ ಆರ್‌ಸಿಬಿ ಮ್ಯಾನೇಜ್ಮಂಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.
ಕೆಎಲ್ ರಾಹುಲ್ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗಿತ್ತು.ಆದರೆ ಹರಾಜಿನಲ್ಲಿ ಆರ್‌ಸಿಬಿ ರಾಹುಲ್ ಖರೀದಿಸುವ ಮನಸ್ಸು ಮಾಡಲಿಲ್ಲ. 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೆಎಲ್ ರಾಹುಲ್ ಖರೀದಿಸಿತು. ಆರ್‌ಸಿಬಿ ಆರಂಭಿಕ ಹರಾಜಿನಲ್ಲಿ ಖರೀದಿಸಿದ್ದು ಕೇವಲ ಒಬ್ಬ ವಿದೇಶಿ ಆಟಗಾರನ ಮಾತ್ರ. ಲಿಯಾಮ್ ಲಿವಿಂಗ್‌ಸ್ಟೋನ್‌ಗೆ 8.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇನ್ನುಳಿದ ಯಾರನ್ನು ಖರೀದಿಸಲು ಆರ್‌ಸಿಬಿ ಆಸಕ್ತಿ ತೋರಿಲ್ಲ.
undefined
ಆರ್‌ಸಿಬಿ ಫ್ಯಾನ್ಸ್ ಕಾದು ಕುಳಿತಿದ್ದೇ ಬಂತು, ಕೆಎಲ್ ರಾಹುಲ್ ಸೋಲ್ಡ್ ...
ಆರ್‌ಸಿಬಿ ಬಳಿ ಆಟಗಾರರ ಖರೀದಿಸಲು ಒಟ್ಟು 83 ಕೋಟಿ ರೂಪಾಯಿ ಹಣವಿತ್ತು. ಈ ಪೈಕಿ 8.75 ಕೋಟಿ ರೂಪಾಯಿ ನೀಡಿ ಲಿವಿಂಗ್‌ಸ್ಟೋನ್ ಖರೀದಿ ಬಿಟ್ಟರೆ ಇನ್ಯಾರನ್ನು ಖರೀದಿಸಿಲ್ಲ.ಹೀಗಾಗಿ ಕೆಎಲ್ ರಾಹುಲ್‌ನ ಸುಲಭವಾಗಿ ಆರ್‌ಸಿಬಿ ಖರೀದಿ ಮಾಡಬಹುದಿತ್ತು. ಇನ್ನು ತಂಡದ ಭಾಗವಾಗಿದ್ದ ವೇಗಿ ಮೊಹಮ್ಮದ್ ಸಿರಾಜ್‌ನನ್ನು ಆರ್‌ಸಿಬಿ ಖರೀದಿ ಮಾಡಿಲ್ಲ. ಸಿರಾಜ್ ಬಿಡ್ಡಿಂಗ್‌ನಲ್ಲೂ ಆರ್‌ಸಿಬಿ ಪಾಲ್ಗೊಳ್ಳದೇ ಮೌನವಹಿಸಿತ್ತು. ಗುಜರಾತ್ ಟೈಟಾನ್ಸ್ ತಂಡ 12.25 ಕೋಟಿ ರೂಪಾಯಿ ನೀಡಿ ಸಿರಾಜ್ ಖರೀದಿಸಿತು.
ಆರ್‌ಸಿಬಿ ಯಾರನ್ನೂ ಖರೀದಿಸದೇ ಹಣ ಉಳಿಸಿಕೊಳ್ಳುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆರ್‌ಸಿಬಿ ಮಾಜಿ ಚೇರ್ಮೆನ್ ವಿಜಯ್ ಮಲ್ಯ ಸಾಲ ಮರುಪಾವತಿಸುವ ಆಲೋಚನೆ ಏನಾದರೂ ಇದೆಯಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಆರ್‌ಸಿಬಿ ಕಪ್ ಯಾಕೆ ಗೆದ್ದಿಲ್ಲ ಅನ್ನೋದು ಹರಾಜು ನೋಡಿದರೆ ಅರ್ಥವಾಗುತ್ತೆ ಎಂದಿದ್ದಾರೆ. ಇದೇ ವೇಳೆ ಆರ್‌ಸಿಬಿ ತನ್ನ ಎಲ್ಲಾ ಹಣ ಬಾಕಿ ಉಳಿಸಿಕೊಳ್ಳುತ್ತಿದೆ. ಕೊನೆಗೆ ನೇರವಾಗಿ ಟ್ರೋಫಿಯನ್ನೇ ಖರೀದಿಸುತ್ತದೆ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಯಜುವೇಂದ್ರ ಚಹಾಲ್ ಬಿಡ್ಡಿಂಗ್ ವೇಳೆಯೂ ಆರ್‌ಸಿಬಿ ಆಸಕ್ತಿ ತೋರಿಲ್ಲ. ಆದರೆ ಪಂಜಾಬ್ ಕಿಂಗ್ಸ್ 18 ಕೋಟಿ ರೂಪಾಯಿ ನೀಡಿ ಚಹಾಲ್ ಖರೀದಿಸಿತು. ಆರ್‌ಸಿಬಿಯ ಈ ನಡೆ ಫ್ಯಾನ್ಸ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕರ್ನಾಟಕ ಐಪಿಎಲ್ ತಂಡದಲ್ಲಿ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಕನ್ನಡಿಗ ಇರಬೇಕು ಅನ್ನೋದು ಅಭಿಮಮಾನಿಗಳ ಆಸೆ. ಈ ಬಾರಿ ಕೆಎಲ್ ರಾಹುಲ್ ಖರೀದಿಸಿ ಎಲ್ಲಾ ಟೀಕೆಗಳು ಉತ್ತರಿಸಲು ಸಾಧ್ಯವಿತ್ತು. ಆದರೆ ಆರ್‌ಸಿಬಿಯ ಮೌನ ಅಭಿಮಾನಿಗಳ ರೊಚ್ಚಿಗೆಬ್ಬಿಸಿದೆ.
RCB out here saving all their money to finally buy the IPL trophy instead of players. 🏆😭
'If you can’t win it, just purchase it!'
😂 pic.twitter.com/SylruqiHB8