ಕನ್ನಡ ಚಿತ್ರ ಜನ‌‌‌ ನೋಡೋದಿಲ್ಲ ಎಂಬುದನ್ನು ಸುಳ್ಳು ಮಾಡಿದ ಕನ್ನಡಿಗರು: ನಟ ಶಿವರಾಜ್ ಕುಮಾರ್

Published : Nov 24, 2024, 06:09 PM IST
ಕನ್ನಡ ಚಿತ್ರ ಜನ‌‌‌ ನೋಡೋದಿಲ್ಲ ಎಂಬುದನ್ನು ಸುಳ್ಳು ಮಾಡಿದ ಕನ್ನಡಿಗರು: ನಟ ಶಿವರಾಜ್ ಕುಮಾರ್

ಸಾರಾಂಶ

ಚಿಕಿತ್ಸೆಗಾಗಿ ಮುಂದಿನ ತಿಂಗಳು ಅಮೆರಿಕಾಕ್ಕೆ ಹೋಗುತ್ತಿದ್ದೇನೆ. ಸಣ್ಣ ಚಿಕಿತ್ಸೆ ಆಗಬೇಕಿದೆ. ಆದರೆ ಆ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಮಫ್ತಿ‌ 2 ಚಿತ್ರ ನಿರ್ಮಾಣಗೊಳ್ಳಲಿದೆ. ಹಾಗೆಯೇ ಈಸೂರು ದಂಗೆ ಚಿತ್ರ ನಿರ್ಮಾಣದ ‍‍ಬಗ್ಗೆ ನಿರ್ಮಾಪಕರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದ ಶಿವಣ್ಣ 

ಶಿವಮೊಗ್ಗ(ನ.24):  ಬೈರತಿ ರಣಗಲ್ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರವನ್ನು ಜನ‌‌‌ ನೋಡುವುದಿಲ್ಲ‌ ಎಂಬುದನ್ನು ಜನ‌ ಸುಳ್ಳು ಮಾಡಿದ್ದಾರೆ. ನಿರ್ಮಾಪಕರು ಹಾಕಿದ್ದ ಹಣ ವಾಪಸ್ ಬರುವುದರಲ್ಲಿ ಯಾವುದೇ ಅನುಮಾನ‌ ಇಲ್ಲ. ನಾನು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದೇನೆ. ಚಿತ್ರ ಇನ್ನು ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. 

ಬೈರತಿ ರಣಗಲ್ ಚಿತ್ರದ ಪ್ರಚಾರರಾರ್ತವಾಗಿ ಇಂದು(ಭಾನುವಾರ) ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದ್ದರು. ಪತ್ನಿ ಗೀತಾ ಅವರೊಂದಿಗೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಚಿತ್ರಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಕೆಲ ಸಮಯ ‌ಚಿತ್ರ‌‌ ವೀಕ್ಷಿಸಿದ್ದಾರೆ. 

'ಭೈರತಿ ರಣಗಲ್' ಬಡ ಕುಟುಂಬ ಹುಡುಗಿ ಪಾತ್ರದಲ್ಲಿ 'ಚುಕ್ಕಿತಾರೆ' ಪುಟ್ಟಿ; ಯಾರು ಈ ಮಹಿತಾ?

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್ ಅವರು, ಚಿಕಿತ್ಸೆಗಾಗಿ ಮುಂದಿನ ತಿಂಗಳು ಅಮೆರಿಕಾಕ್ಕೆ ಹೋಗುತ್ತಿದ್ದೇನೆ. ಸಣ್ಣ ಚಿಕಿತ್ಸೆ ಆಗಬೇಕಿದೆ. ಆದರೆ ಆ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಮಫ್ತಿ‌ 2 ಚಿತ್ರ ನಿರ್ಮಾಣಗೊಳ್ಳಲಿದೆ. ಹಾಗೆಯೇ ಈಸೂರು ದಂಗೆ ಚಿತ್ರ ನಿರ್ಮಾಣದ ‍‍ಬಗ್ಗೆ ನಿರ್ಮಾಪಕರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ಶಿವಣ್ಣ ತಿಳಿಸಿದ್ದಾರೆ. 

ಭೈರತಿ ರಣಗಲ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‌: ಮಫ್ತಿ-2 ಬಗ್ಗೆ ಮಹತ್ವದ ಅಪ್‌ಡೇಟ್‌ ಕೊಟ್ಟ ಶಿವಣ್ಣ

ಚಿತ್ರದುರ್ಗ:  ಭೈರತಿ ರಣಗಲ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ(ಶುಕ್ರವಾರ) ಕೋಟೆನಾಡು ಚಿತ್ರದುರ್ಗಕ್ಕೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಆಗಮಿಸಿದ್ದರು. 

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಸನ್ನ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದ್ದರು. ಡಾ.ಶಿವರಾಜ್ ಕುಮಾರ್‌ಗೆ ಪತ್ನಿ ಹಾಗೂ ಸಿನಿಮಾದ ನಿರ್ಮಾಪಕಿ ಗೀತಾ ಸಾಥ್ ಕೊಟ್ಟಿದ್ದರು. 

ಇದೇ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು, ಎಲ್ಲ ಕಡೆ ಸಿನಿಮಾಗೆ ರೆಸ್ಪಾನ್ಸ್ ತುಂಬಾ ಚೆನ್ನಾಗಿ ಬರ್ತಿದೆ. ಥಿಯೇಟರ್‌ಗೆ ಜನ ಬರ್ತಿಲ್ಲ ಎಂಬ ಕಂಪ್ಲೆಂಟ್ ಇತ್ತು, ಇವಾಗ ಜನ ಬರ್ತಿದಾರೆ. ಎಲ್ಲರೂ ಸಿನಿಮಾವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಿರೋದ್ರಿಂದ ಮೊದಲು ಚಿತ್ರದುರ್ಗದಿಂದ ಶುರು ಮಾಡಿದ್ದೀವಿ. ಅಭಿಮಾನಿಗಳು ಸಿನಿಮಾ ನೋಡಲು ಬರುವುದೇ ನಮಗೆ ತುಂಬಾ ಖುಷಿ ವಿಚಾರವಾಗಿದೆ. ಇತ್ತೀಚೆಗೆ ಒಳ್ಳೆಯ ಸಿನಿಮಾಗಳು ಬರ್ತಿರೋದು ಒಳ್ಳೆ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದರು. 

ಕಂಗುವಾಗೆ ಬಿಸಿ ಮುಟ್ಟಿಸಿದ ಶಿವಣ್ಣನ ಭೈರತಿ ರಣಗಲ್!

ಆರೋಗ್ಯ ಚೆನ್ನಾಗಿದೆ ಒಂದು ಸರ್ಜರಿ ಇದೆ, ಮುಂದಿನ ತಿಂಗಳು ಅಮೆರಿಕಕ್ಕೆ ಹೋಗ್ತೀನಿ. ನಾವು ಯಾವಾಗಲೂ ಚಿತ್ರದುರ್ಗ ಮೂಲಕವೇ ಸಕ್ಸಸ್ ಮೀಟ್ ಶುರು ಮಾಡೋದು. ಮಫ್ತಿ-2 ಸಿನಿಮಾ ಖಂಡಿತ ಬರಲಿದೆ ಎಂದು ಶಿವಣ್ಣ ಸುಳಿವು ಕೊಟ್ಟಿದ್ದರು. 

ಈಸೂರು ದಂಗೆ ಕಥೆ ಚೆನ್ನಾಗಿದೆ, ಅದನ್ನು ಮಾಡಿಯೇ ಮಾಡ್ತೀನಿ. ಅದು ಸಾಧಾರಣವಾಗಿ ಮಾಡುವ ಸಿನಿಮಾ ಅಲ್ಲ, ನಾವು ಕೇರ್ ಫುಲ್ ಆಗಿ ಮಾಡಬೇಕು. ಮುಂದಿನ ಸಿನಿಮಾ 45 ಬರ್ತಿದೆ. ಅದ್ರಲ್ಲಿ ನಾನು ಉಪೇಂದ್ರ, ರಾಜ್ ಬಿ ಶೆಟ್ಟಿ ಇದೀವಿ. ಭೈರತಿ ರಣಗಲ್ ನಲ್ಲಿ ಮಾಸ್ ಲುಕ್, 45 ರಲ್ಲಿ ಶಿವಣ್ಣ ಫುಲ್ ಕ್ಲಾಸ್ ಇದೆ. ನಮ್ಮ ಬ್ಯಾನರ್ ನಲ್ಲಿಯೇ A ಫಾರ್ ಆನಂದ್ ಎನ್ನುವ ಸಿನಿಮಾ ಬರ್ತಿದೆ. ಅದೊಂದು ಮಕ್ಕಳ ಸಿನಿಮಾ, ವಿಭಿನ್ನವಾಗಿ ನಾವು ಟ್ರೈ ಮಾಡ್ತಾ ಇರ್ತೀವಿ. ಬೇರೆ ದೇಶದಲ್ಲಿಯೂ ಭೈರತಿ ರಣಗಲ್ ರಿಲೀಸ್ ಆಗಿದೆ. ಮುಂದಿನ ವಾರದಲ್ಲಿ ತಮಿಳು, ತೆಲುಗು ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ