ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಅನಾರೋಗ್ಯದಿಂದ ಹುಲಿ ಸಾವು

Published : Nov 24, 2024, 07:03 PM ISTUpdated : Nov 24, 2024, 07:04 PM IST
ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಅನಾರೋಗ್ಯದಿಂದ ಹುಲಿ ಸಾವು

ಸಾರಾಂಶ

Mycoplasma, Cytauxzonosis ಮತ್ತು Babesiosis ಎಂಬ ವಿರಳ ರೋಗದಿಂದ ಹುಲಿ ಬಳಲುತ್ತಿತ್ತು. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೇ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಿಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. 

ಬೆಳಗಾವಿ(ನ.24): ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಹುಲಿಯೊಂದು ಬಹು ಅಂಗಾಂಗ ವೈಫಲ್ಯದಿಂದ ಇಂದು(ಭಾನುವಾರ) ಬೆಳಗ್ಗೆ ಕೊನೆಯುಸಿರೆಳೆದಿದೆ.

ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯದಲ್ಲಿದ್ದ 13 ವರ್ಷದ "ಶೌರ್ಯ" ಎಂಬ ಹೆಸರಿನ ಗಂಡು ಹುಲಿ ಮೃತಪಟ್ಟಿದೆ. Mycoplasma, Cytauxzonosis ಮತ್ತು Babesiosis ಎಂಬ ವಿರಳ ರೋಗದಿಂದ ಹುಲಿ ಬಳಲುತ್ತಿತ್ತು. ಕಳೆದ 21 ದಿನಗಳಿಂದ ವನ್ಯಜೀವಿ ವೈದ್ಯ ತಜ್ಞರ ಸಲಹೆಯಂತೆ ಮೃಗಾಲಯದಲ್ಲೇ ಶೌರ್ಯನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಿಗ್ಗೆ 9.40ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾರಿಯಾ ಕ್ರಿಷ್ಟು ರಾಜಾ ತಿಳಿಸಿದ್ದಾರೆ.

ಮಂಗ್ಳೂರಿನ ಪಿಲಿಕುಳದಲ್ಲಿ ಹುಲಿಗಳ ಕಾದಾಟ: ‘ನೇತ್ರಾವತಿ’ ಸಾವು

ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಕೇಂದ್ರ ಸರ್ಕಾರದ ನಿಯಮನಾಸಾರ ಗೌರವಪೂರ್ವಕವಾಗಿ ಮೃಗಾಲಯದ ಆವರಣದಲ್ಲೇ ಶೌರ್ಯನ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಡಿಎಫ್‌ಓ ಮರಿಯ ಕ್ರಿಷ್ಟು ರಾಜಾ, ಆರ್‌ಎಫ್ಓ ನಾಗರಾಜ್ ಬಾಳೆಹೊಸೂರ ಮೃಗಾಲಯದ ವೈದ್ಯ ಡಾ.ನಾಗೇಶ ಹುಯಿಲಗೋಳ, ಡಾ. ಪ್ರಶಾಂತ ಕಾಂಬಳೆ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 2020 ರಲ್ಲಿ ಬನ್ನೇರುಘಟ್ಟದಿಂದ ಬೆಳಗಾವಿಗೆ ಮೂರು ಹುಲಿಗಳ ಆಗಮನವಾಗಿದ್ದವು. ಆ ಪೈಕಿ ಗಂಡು ಹುಲಿ ಶೌರ್ಯ ಅನಾರೋಗ್ಯದಿಂದ ಸಾವನ್ನಪ್ಪಿದೆ.

6 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಸಾವು: ದೇಶದಲ್ಲೇ ಮೂರನೇ ಸ್ಥಾನ

ಭೋಪಾಲ್‌:  ಈ ವರ್ಷದ ಮೊದಲ 6 ತಿಂಗಳಲ್ಲಿ 12 ರಾಜ್ಯಗಳಲ್ಲಿ 75 ಹುಲಿಗಳು ಸಾವನ್ನಪಿವೆ. ಕರ್ನಾಟಕದಲ್ಲಿ 11 ಹುಲಿಗಳು ಸಾವನ್ನಪ್ಪಿದ್ದು, ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. 
ಕಳೆದ ವರ್ಷಕ್ಕಿಂತ ಈ ವರ್ಷ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆ ಒಂದು ಕಡಿಮೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ-ಅಂಶಗಳ ಪ್ರಕಾರ, ಮಧ್ಯ ಪ್ರದೇಶದಲ್ಲಿ 23, ಮಹಾರಾಷ್ಟ್ರದಲ್ಲಿ 14 ಹುಲಿಗಳು ಸಾವನ್ನಪ್ಪಿವೆ.

ಅರಣ್ಯ ಇಲಾಖೆಗೆ ಹೆಚ್ಚುವರಿ ಅನುದಾನಕ್ಕೆ ಖಂಡ್ರೆ ಬೇಡಿಕೆ

ಬೆಂಗಳೂರು: ಅರಣೀಕರಣ, ವನ್ಯಜೀವಿ ಆವಾಸತಾಣ ನಿರ್ವಹಣೆ, ಮಾನವ- ವನ್ಯಜೀವಿ ಸಂಘರ್ಷ ತಡೆಯುವುದು ಸೇರಿದಂತೆ ಅರಣ್ಯ ಇಲಾಖೆಗೆ ಅಗತ್ಯವಿರುವ ಹೆಚ್ಚುವರಿ ಹಣಕಾಸು ಬೇಡಿಕೆ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

ವಿಕಾಸಸೌಧದ ಕಚೇರಿಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯತರ ಪ್ರದೇಶಗಳಲ್ಲಿ ಅರಣೀಕರಣದ ಪ್ರಮುಖ ಕಾಮಗಾರಿಗಳು, ಮಾನವ-ವನ್ಯಜೀವಿ ಸಂಘರ್ಷ ತಡೆ ಸಂಬಂಧಿಸಿದಂತೆ ಹಲವು ವಿಸ್ತ್ರತ ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಹೆಚ್ಚಿನ ಹಣ ಒದಗಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳೊಂದಿಗೆ ಕಾದಾಡಿ ನಿತ್ರಾಣಗೊಂಡಿದ್ದ ಹುಲಿ ಸಾವು

ಗುಂಡ್ಲುಪೇಟೆ:  ಗಂಡು ಹುಲಿಯೊಂದು ನಿತ್ರಾಣಗೊಂಡ ಸ್ಥಿತಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ ಕಂಡು ಬಂದಿತಾದರೂ ಸಂಜೆಯ ವೇಳೆ ಸಾವನ್ನಪ್ಪಿದೆ.
ಮದ್ದೂರು ಕಾಲೋನಿಯ ಡಿ ಲೈನ್‌ ಬಳಿಯ ದೊಡ್ಡ ಕರಿಯಯ್ಯಗೆ ಸೇರಿದ ಜಮೀನಿನಲ್ಲಿ ಜೀವಂತ ಹುಲಿಯನ್ನು ಶುಕ್ರವಾರ ಮುಂಜಾನೆಯೇ ಕಂಡ ರೈತರು ಮದ್ದೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ತುಮಕೂರು ಅರಣ್ಯ ಇಲಾಖೆಗೆ ತಲೆ‌ ಬಿಸಿ ತಂದ ಹುಲಿ ಸಾವು ಪ್ರಕರಣ, ಸತ್ತಿರುವುದು ಹೊರ ರಾಜ್ಯದ ಹುಲಿ ಸಾಧ್ಯತೆ?

ಮಾಹಿತಿ ಸಿಕ್ಕಿದ ನಂತರ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ಸ್ಥಳಕ್ಕೆ ಧಾವಿಸಿ ನಿತ್ರಾಣಗೊಂಡು ಬಿದ್ದಿದ್ದ ಹುಲಿಯನ್ನು ವೀಕ್ಷಿಸಿದ ಬಳಿಕ ಬಂಡೀಪುರ ಅರಣ್ಯ ಇಲಾಖೆ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಕರೆಸಿದರು. ಶುಕ್ರವಾರ ಬೆಳಿಗ್ಗೆ ನಿತ್ರಾಣಗೊಂಡು ನಿಲ್ಲಲಾರದ ಸ್ಥಿತಿಯಲ್ಲಿದ್ದ ೩ರ ಪ್ರಾಯದ ಗಂಡು ಹುಲಿ ಕಾಡಿನೊಳಗೆ ವನ್ಯಜೀವಿಗಳ ಕಾದಾಟದಿಂದ ತಲೆ ಮತ್ತು ಮೈ ಮೇಲೆ ಗಾಯಗೊಂಡಿತ್ತು ಎಂದು ಎಸಿಎಫ್‌ ಜಿ.ರವೀಂದ್ರ ತಿಳಿಸಿದ್ದರು.

ಸತ್ತ ಹುಲಿ ಶವ ಪರೀಕ್ಷೆಯ ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾರ್ಗದರ್ಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌