ಸ್ವತಃ ಶಿವಣ್ಣ ಈ ಬಗ್ಗೆ ಭಾವನಾತ್ಕವಾಗಿ ಮಾತನಾಡಿದ್ದಾರೆ. ತಮ್ಮ ಅನಾರೋಗ್ಯ ಕುರಿತಂತೆ ಸಹಜವಾಗಿಯೇ ಅವರಿಗೂ ಬೇಸರ ಇದ್ದೆ ಇದೆ. ಪದೇಪದೇ ಆ ಬೇಸರವನ್ನು ಹೊರಹಾಕಿ ತಮ್ಮ ಅಭಿಮಾನಿಗಳಿಗೂ ಬೇಸರ ಉಂಟುಮಾಡಬಾರದು ಎಂದು ನಟ ಶಿವಣ್ಣ..
ಕರುನಾಡ ಚಕ್ರವರ್ತಿ ಬಿರುದು ಹೊಂದಿರುವ ಕನ್ನಡದ ನಟ, ಅಣ್ಣಾವ್ರ ಹಿರಿಮಗ ಶಿವರಾಜ್‌ಕುಮಾರ್ (Shiva Rajkumar) ಅವರು ಅನಾರೋಗ್ಯಕ್ಕೆ ಒಳಗಾಗಿರುವುದು ಗೊತ್ತೇ ಇದೆ. ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿರುವ ಶಿವಣ್ಣ ಅವರು ಟ್ರೀಟ್‌ಮೆಂಟ್ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜನವರಿಯಲ್ಲಿ ಅಮೆರಿಕಾಕ್ಕೆ ತೆರಳಲಿದ್ದಾರೆ. ಅಲ್ಲಿ ಮೂರು ಹಂತದ ಚಿಕಿತ್ಸೆ ಬಳಿಕ ಒಂದು ಸರ್ಜರಿ ಕೂಡ ಆಗಲಿದೆಯೆಂದು ಸ್ವತಃ ಶಿವಣ್ಣ ಹೇಳಿದ್ದಾರೆ. ಸದ್ಯ ಅವರು ಭೈರತಿ ರಣಗಲ್ ಚಿತ್ರದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ.
ಎಲ್ಲವೂ ಓಕೆ. ಆದರೆ ನಟ ಶಿವಣ್ಣ ಹಾಗೂ ಯಾರೂ ಬಯಸದಿದ್ದರೂ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಸ್ವತಃ ಶಿವಣ್ಣ ಸೇರಿದಂತೆ ಅವರ ಎಲ್ಲ ಅಭಿಮಾನಿಗಳಿಗೂ ಸಹಜವಾದ ಆತಂಕದ ಜೊತೆ ಈ ಕ್ಯಾನ್ಸರ್ ಖಾಯಿಲೆ ವಕ್ಕರಿಸಿರುವ ಬಗ್ಗೆ ತುಂಬಾನೇ ಬೇಜಾರಿದೆ. ನಟ ಶಿವಣ್ಣ ಅವರಿಗೆ ಎಲ್ಲವೂ ಇದೆ. ಆದರೆ, ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ತೆಗೆದುಕೊಂಡಿದ್ದರು ಕೂಡ ಯಾಕೆ ಈ ಅನಾರೋಗ್ಯ ಕಾಡುತ್ತಿದೆ ಎಂಬ ಯಕ್ಷಪ್ರಶ್ನೆ ಎಲ್ಲರ ಮನದಲ್ಲಿ ಕಾಡುತ್ತಿದೆ.
undefined
ಕೊನೆಗೂ 'ರಿಯಲ್ ಹೀರೋ' ಯಾರು ಅನ್ನೋ ಸೀಕ್ರೆಟ್ ಬಿಚ್ಚಿಟ್ಟ ಅಣ್ಣಾವ್ರ ಮಗ ಶಿವಣ್ಣ!
ಸ್ವತಃ ಶಿವಣ್ಣ ಈ ಬಗ್ಗೆ ಭಾವನಾತ್ಕವಾಗಿ ಮಾತನಾಡಿದ್ದಾರೆ. ತಮ್ಮ ಅನಾರೋಗ್ಯ ಕುರಿತಂತೆ ಸಹಜವಾಗಿಯೇ ಅವರಿಗೂ ಬೇಸರ ಇದ್ದೆ ಇದೆ. ಪದೇಪದೇ ಆ ಬೇಸರವನ್ನು ಹೊರಹಾಕಿ ತಮ್ಮ ಅಭಿಮಾನಿಗಳಿಗೂ ಬೇಸರ ಉಂಟುಮಾಡಬಾರದು ಎಂದು ನಟ ಶಿವಣ್ಣ ಆದಷ್ಟೂ ಆ ಬಗ್ಗೆ ಪೊಸೆಟಿವ್ ಆಗಿಯೇ ಮಾತನಾಡುತ್ತಾರೆ. ಆದರೆ, ಎಲ್ಲೋ ಒಮ್ಮೆ ಮನಸ್ಸಿನಲ್ಲಿ ಇದ್ದುದು ಹೊರಬರಲೇಬೇಕಲ್ಲ! ಹಾಗೆ ಬಂದ ತಮ್ಮ ಮನಸ್ಸಿನ ಮಾತುಗಳನ್ನು ಶಿವಣ್ಣ ಹೇಳಿದ್ದಾರೆ. ಹಾಗಿದ್ದರೆ ನಟ ಶಿವಣ್ಣ ಹೇಳಿದ್ದೇನು?
ಈ ಬಗ್ಗೆ 'ಎಷ್ಟು ಕೋಟಿ ಹಣ, ಅದೆಷ್ಟು ಆಸ್ತಿ ಇದ್ದರೇನು? ಎಲ್ಲದಕ್ಕಿಂತ ಆರೋಗ್ಯವೇ ದೊಡ್ಡ ಆಸ್ತಿ ಅಲ್ವಾ? ನಾವು ಡಾಕ್ಟರ್ ಮೇಲೆ ನಂಬಿಕೆ ಇಡೋಣ, ಇಡಲೇಬೇಕು. ಏಕೆಂದರೆ, ಜೀವನ ಸಾಗಲೇಬೇಕು' ಎಂದು ಸಂದರ್ಶನವೊಂದರಲ್ಲಿ ನಟ ಶಿವಣ್ಣ ಹೇಳಿದ್ದಾರೆ. ಶಿವಣ್ಣರ ಬಾಯಿಂದ ಬಂದ ಈ ಮಾತು ಮಾನವ ಸಹಜ ನೈಜತೆ ಹೇಳುವ ಜೊತೆಜೊತೆಗೆ ಬಂದಿದ್ದನ್ನು ಹಾಗೇ ಸ್ವೀಕರಿಸುವ ನಟ ಶಿವಣ್ಣರ ದೊಡ್ಡ ಗುಣವನ್ನು ಸಹಾ ತೋರಿಸುತ್ತದೆ. ಇಲ್ಲಿ, ಎಲ್ಲದಕ್ಕಿಂತ ಹೆಚ್ಚಾಗಿ ಅವರ ಮಾತಿನ ಗೂಡಾರ್ಥ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!
ಈಗಾಗಲೇ ಖಾಯಿಲೆ ಬಂದಾಗಿದೆ. ಮೊಟ್ಟಮೊದಲನೆಯದಾಗಿ ಅದರ ವಿರುದ್ಧ ಮಾನಸಿಕ ಧೈರ್ಯ ತಂದುಕೊಳ್ಳಬೇಕು. ಜೊತೆಗೆ, ವೈದ್ಯರ ಮೊರೆ ಹೋಗಬೇಕು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಜೀವನದಲ್ಲಿ ಮುಂದುವರೆಯಬೇಕು. ಡಾಕ್ಟರ್ ಮೇಲೆ, ಅವರ ಚಿಕಿತ್ಸೆ ಮೇಲೆ ನಂಬಿಕೆ ಇಡಬೇಕು. ಏಕೆಂದರೆ, ನಮ್ಮ ಎಲ್ಲ ಪ್ರಯತ್ನ ಕೈ ಹಿಡಿಯದೇ ಇರುವಾಗ ನಮ್ಮ ಸಹಾಯಕ್ಕೆ ಬಂದ ಎಲ್ಲವನ್ನೂ ನಂಬಿ ಮುನ್ನಡೆಯಬೇಕು. ಏಕೆಂದರೆ, ಜೀವನ ಸಾಗಲೇಬೇಕು ಅಲ್ಲವೇ? ಇದನ್ನೇ ಶಿವಣ್ಣ ಹೇಳಿ, ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.