ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳಲ್ಲಿ ಕೆಲವರು ದೇವಿ ಅವತಾರದಲ್ಲಿ ಕಾಣಿಸಿಕೊಂಡ್ರೆ ಇನ್ನೂ ಕೆಲವರು ಸೀರೆ ಧರಿಸಿ ಫೋಟೊ ಶೂಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಳ್ಳುತ್ತಿದ್ದರು, ಇದೀಗ ನಟಿ ಚೈತ್ರಾ ಆಚಾರ್ (Chaithra Achar) ಕೂಡ ಹೊಸದಾಗಿ ಫೋಟೊ ಶೂಟ್ ಮಾಡಿ ಶೇರ್ ಮಾಡಿದ್ದಾರೆ.
ಚೈತ್ರಾ ಆಚಾರ್ ನಾರಿ ಎನ್ನುವ ಕಾನ್ಸೆಪ್ಟ್ ಅಡಿಯಲ್ಲಿ ಫೋಟೊ ಶೂಟ್ ಮಾಡಿಸಿದ್ದು, ಸೀರೆ ಉಟ್ಟಿದ್ದರೂ ಸಖತ್ ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಚೈತ್ರಾ ಆಚಾರ್.
ಕೆಂಪು ಬಣ್ಣದ ಜರಿ ಸೀರೆ, ಕೈತುಂಬಾ ಕೆಂಪು ಬಳೆಗಳು, ಕಿವಿಯಲ್ಲಿ ಜುಮುಕಿ, ಹಣೆಯಲ್ಲಿ ಕೆಂಪು ಬೊಟ್ಟು ತೊಟ್ಟು ಸುಂದರವಾಗಿ ಕಾಣಿಸ್ತಿರೋ ಚೈತ್ರಾ ಆಚಾರ್ ಬ್ಲೌಸ್ ಲೆಸ್ ಆಗಿ ಫೋಟೊ ಶೂಟ್ ಮಾಡಿಸಿದ್ದಾರೆ.
ಹೌದು ಇಷ್ಟೊಂದು ಟ್ರೆಡಿಶನಲ್ (traditional) ಆಗಿ ರೆಡಿಯಾಗಿರುವ ಚೈತ್ರಾ ಆಚಾರ್, ಬ್ಲೌಸ್ ಹಾಕದೇ, ಬರಿ ಬೆನ್ನು ತೋರಿಸುತ್ತಾ, ಕೆಲವೆಡೆ ಸೀರೆಯನ್ನೇ ಮೈ ಪೂರ್ತಿ ಸುತ್ತಿ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೊವನ್ನು ಜನ ಮೆಚ್ಚಿಕೊಂಡಿದ್ದಾರೆ.
ನಟಿ ಚೈತ್ರಾ ಆಚಾರ್ ತಮ್ಮ ಬೋಲ್ಡ್ ಮಾತು, ಬೋಲ್ಡ್ ನಟನೆ ಮತ್ತು ಬೋಲ್ಡ್ ನೆಸ್ ನಿಂದಾನೆ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. ಅದು ಸಾಂಪ್ರದಾಯಿಕ ಸೀರೆ ಇರ್ಲಿ, ಮಾಡರ್ನ್ ಡ್ರೆಸ್ ಇರ್ಲಿ ಎಲ್ಲದರಲ್ಲೂ ಬೋಲ್ಡ್ ನೆಸ್ ಸೇರಿಸುವ ಮೂಲಕ ನೋಡುಗರು ಮೂಗಿನ ಮೇಲೆ ಬೆರಳಿಡುವಂತೆ ಮಾಡ್ತಾರೆ ಚೈತ್ರಾ.
ಕೆಲದಿನಗಳ ಹಿಂದೆ ಕೂಡ ಚೈತ್ರಾ ಬಿಳಿ ಬಣ್ಣದ ಕೇರಳ ಸೀರೆಯನ್ನು ಧರಿಸಿದ್ದಾಗಲೂ ಬ್ಲೌಸ್ ಧರಿಸಿರಲಿಲ್ಲ. ಆಗಲೂ ತಮ್ಮ ನಗ್ನ ಬೆನ್ನು ತೋರಿಸಿ ಪೋಸ್ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಫೋಟೋ ಶೂಟ್ ಮಾಡಿಸಿದ್ದಾರೆ.
ಚೈತ್ರಾ ಆಚಾರ್ ಸೋಶಿಯಲ್ ಮೀಡಿಯಾ (social media) ನೋಡಿದ್ರೆ ಅಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಫೋಟೊ ಶೂಟ್ ಗಳನ್ನ ಕಾಣಬಹುದು. ಯಾವಾಗಲೂ ಹೊಸತನಕ್ಕೆ ಸಾತ್ ನೀಡುವ ಚೈತ್ರಾ ತಮಗೆ ಓಕೆ ಅನಿಸಿದ್ರೆ ಅದೆಷ್ಟೋ ಬೋಲ್ಡ್ ಆಗೋದಕ್ಕೂ ರೆಡಿ.
ಚೈತ್ರಾ ಈ ಹಿಂದೆ ಹಲವಾರು ಸಂದರ್ಶನಗಳಲ್ಲಿ ಇದನ್ನ ಹೇಳಿದ್ದಾರೆ. ನಾನು ಬೋಲ್ಡ್ ಆಗೋಕೆ ರೆಡಿ ಅಂತ ಅಗತ್ಯ ಇಲ್ಲ ಅಂದ್ರೂ ಅಂತಹ ಪಾತ್ರಗಳನ್ನ ನೀಡಿದ್ರೆ ಮಾಡೋದಕ್ಕೆ ನಾನು ತಯಾರಿಲ್ಲ, ಆದ್ರೆ ಪಾತ್ರಕ್ಕೆ ಅದು ಅಗತ್ಯವಿದೆ ಅಂದ್ರೆ ಎಂತಹ ಪಾತ್ರ ಮಾಡೋಕ್ಕೂ ರೆಡಿ ಎಂದಿದ್ದರು.
ಚೈತ್ರಾ ಆಚಾರ್ ಕೇವಲ ಬೋಲ್ಡ್ ಬ್ಯೂಟಿ ಮಾತ್ರವಲ್ಲ, ಅದ್ಭುತ ನಟಿ ಕೂಡ ಹೌದು, ಕಣ್ಣಲ್ಲೇ ಎಲ್ಲಾ ಹೇಳಿ ಬಿಡುವ ಸುಂದರಿ ಚೈತ್ರಾ ಆಚಾರ್. ಅದಕ್ಕೆ ಉದಾಹರಣೆ ಅಂದ್ರೆ ಟೋಬಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ.
ನಟಿಯಾಗಿ ಮತ್ತು ಗಾಯಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಆಚಾರ್ ಕೈಯಲ್ಲಿ ಸದ್ಯ ಮೂರು ಸಿನಿಮಾಗಳಿವೆ. ಸ್ಟ್ರಾಬೆರಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಉತ್ತರಕಾಂಡ ಸಿನಿಮಾ ಶೂಟಿಂಗ್ ನಡೆಯುತ್ತಿದೆ, ಅಷ್ಟೇ ಅಲ್ಲ ನಟ ಸಿದ್ಧಾರ್ಥ ಜೊತೆ ತಮಿಳು ಸಿನಿಮಾದಲ್ಲೂ ಚೈತ್ರಾ ನಟಿಸುತ್ತಿದ್ದಾರೆ.