
ಚನ್ನರಾಯಪಟ್ಟಣ(ನ.15): ಗಂಡನ ಶವವೆಂದು ಹಾರ ಹಾಕಿ ದುಃಖ ಪಟ್ಟು ರೋಧಿಸಿದ ಮಹಿಳೆಯೊಬ್ಬಳು ಈತ ತನ್ನ ಗಂಡನಲ್ಲ ಎಂದು ತಿಳಿದು ಹೆಣ ಬಿಟ್ಟು ಕಾಲ್ಕಿತ್ತ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸಂತೆಮಳದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಪೊಲೀಸರು ಜಾಲತಾಣದಲ್ಲಿ ವ್ಯಕ್ತಿಯ ಫೋಟೋ ಚಹರೆಯನ್ನು ಬಿತ್ತರಿಸಿದ್ದರು. ಇದನ್ನು ನೋಡಿದ ಶ್ರೀಧರ್, ಇದು ತನ್ನ ಅಳಿಯ ಪ್ರಮೋದ ಎಂದು ಭಾವಿಸಿ ಮಗಳೊಂದಿಗೆ ದೌಡಾಯಿಸಿದರು.
ಹಾಸನಾಂಬೆ ಹುಂಡಿ ಎಣಿಕೆ: 9 ದಿನದಲ್ಲಿ ಸಂಗ್ರಹವಾಯ್ತು 12.63 ಕೋಟಿ ಹಣ, 51 ಗ್ರಾಂ ಚಿನ್ನ!
ಪ್ರಮೀಳಾ ಶವಕ್ಕೆ ಹಾರ ಹಾಕಿ ಅತ್ತಳು. ವಿಚಾರ ತಿಳಿಸಲು ನೆಂಟರಿಷ್ಟರಿಗೆ ಶ್ರೀಧರ್ ಕರೆ ಮಾಡುವಾಗ ಪ್ರಮೀಳಾ ಗಂಡ ಪ್ರಮೋದನ ಮೊಬೈಲ್‌ಗೂ ಕರೆ ಹೋಗಿದ್ದು, ಆತ ಬದುಕಿರುವುದು ತಿಳಿದಿದೆ.