ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?

By Shriram Bhat  |  First Published Nov 14, 2024, 6:43 PM IST

ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಕಮಾಲ್ ಮಾಡಿದ್ದರು. ಶ್ರೀವಲ್ಲಿ ಹಾಗು ಪುಷ್ಪರಾಜ್ ಪಾತ್ರಗಳು ಸಿನಿಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದು, ಚಿತ್ರವು ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ಪ್ಯಾನ್ ಇಂಡಿಯಾ ..


ಕನ್ನಡತಿ, ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು 'ಪುಪ್ಪಾ-2' ಚಿತ್ರದ ನಾಯಕಿ ಎಂಬುದು ಗೊತ್ತೇ ಇದೆ. ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪಾ 2 (Pushpa 2) ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ್ ಹಂತದಲ್ಲಿದೆ. ಇದೀಗ ನಿಜವಾಗಿಯೂ ಯಾವ ಸ್ಟೇಜ್‌ ಎಂಬುದನ್ನು ಸ್ವತಃ ಆ ಚಿತ್ರದ ನಾಯಕಿ ನಟಿ ರಶ್ಮಿಕಾ ಮಂದಣ್ಣ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡಿರುವ ರಶ್ಮಿಕಾ ಅವರು ಇನ್ನೂ ಏನೋ ಹೇಳಿದ್ದಾರೆ ನೋಡಿ..

ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಈ 'ಪುಷ್ಪ 2' ಸಿನಿಮಾದ ಕೆಲಸಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಹೊಸ ಅಪ್​ಡೇಟ್​ ನೀಡಿದ್ದಾರೆ. ತಮ್ಮ ಪಾತ್ರಕ್ಕೆ ರಶ್ಮಿಕಾ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ದ್ದಾರೆ. ಮೊದಲರ್ಧ ಭಾಗದ ಡಬ್ಬಿಂಗ್ ಮುಕ್ತಾಯ ಆಗಿದೆ ಎಂದು ಅವರು ಹೇಳಿದ್ದಾರೆ. ದ್ವಿತೀಯಾರ್ಧದ ಡಬ್ಬಿಂಗ್ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಈ ಸಂಗತಿಯನ್ನು ಸ್ವತಃ ರಶ್ಮಿಕಾ ಹೀಗೆ ಬರೆದುಕೊಂಡಿದ್ದಾರೆ. 

Tap to resize

Latest Videos

undefined

ಡಾ ರಾಜ್‌ ಮನೆಗೆ ಹೋದೋರಿಗೆ ಏನೋ ಒಂದು ಹೇಳ್ತಾರೆ, ಕೊಡ್ತಾರೆ; ಗುಟ್ಟು ಹೇಳಿದ ಶಿವರಾಜ್‌ಕುಮಾರ್!

ನಟಿ ರಶ್ಮಿಕಾ ಅವರು 'ತಮಾಷೆ ಮತ್ತು ಆಟಗಳು ಮುಗಿದಿವೆ. ಈಗ ಬಿಸಿನೆಸ್ ಶುರು ಮಾಡೋಣ. ಇದರ ಅರ್ಥ ಏನೆಂದರೆ, ಪುಷ್ಪಾ 2 ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ ಆಗಿದೆ. ಈ ಸಿನಿಮಾದ ಫಸ್ಟ್ ಹಾಫ್‌ಗೆ ಬಹುತೇಕ ಡಬ್ಬಿಂಗ್ ಮುಗಿದಿದೆ. ಈಗ ನಾನು ಸೆಕೆಂಡ್ ಹಾಫ್‌ಗೆ ಡಬ್ಬಿಂಗ್ ಮಾಡುತ್ತಿದ್ದೇನೆ. ಈ ಚಿತ್ರದ ಮೊದಲಾರ್ಧ ಅದ್ಭುತವಾಗಿದೆ. ದ್ವಿತೀಯಾರ್ಧ ಇನ್ನೂ ಚೆನ್ನಾಗಿದೆ. ಅದನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನಿಮಗೂ ಅದ್ಭುತ ಅನುಭವ ಸಿಗಲಿದೆ' ಎಂದಿದ್ದಾರೆ. 

ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಕಮಾಲ್ ಮಾಡಿದ್ದರು. ಶ್ರೀವಲ್ಲಿ ಹಾಗು ಪುಷ್ಪರಾಜ್ ಪಾತ್ರಗಳು ಸಿನಿಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದು, ಚಿತ್ರವು ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಲ್ಲದೇ ನಾಯಕ ಅಲ್ಲು ಅರ್ಜುನ್ ಬೆಸ್ಟ್ ಆಕ್ಟರ್ ಅವಾರ್ಡ್ ಕೂಡ ಪಡೆದಿದ್ದಾರೆ. ಇದೀಗ ಪುಷ್ಪಾ ಚಿತ್ರದ ಪಾರ್ಟ್ 2 ಬರಲಿದ್ದು ಟಾಲಿವುಡ್ ಸೇರಿದಂತೆ, ಸಿನಿಮಾಪ್ರಿಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಚಿತ್ರವು ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳೂ ಇದ್ದು, ಪುಷ್ಪಾ 2 ಬಳಿಕ ರಶ್ಮಿಕಾ ಸಂಭಾವನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. 

ರಿಯಲ್ ಸ್ಟಾರ್ ಹೇಳಿರೋ ಈ ಕಥೆ ಗೊತ್ತಾ? ಉಪ್ಪಿನ ಸುಮ್ನೆ ಹೇಳಿಲ್ವಂತೆ ಬುದ್ಧಿವಂತ ಅಂತ!

click me!