ದರ್ಶನ್ ನಟನೆ, ರಿಯಲ್ ಸ್ಟಾರ್ ಉಪೇಂದ್ರರ ಕಥೆ-ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ 'ಕಪಾಲಿ' ಚಿತ್ರವು ಸದ್ಯದಲ್ಲೇ ಶುರುವಾಗಲಿದೆ... ದರ್ಶನ್ ನಟನೆಯ 'ಡೆವಿಲ್' ಚಿತ್ರವು ಮುಗಿದ ಬಳಿಕ, ಈ ಕಪಾಲಿ ಬರುವುದು ಶತಃಸಿದ್ಧ. ಕಪಾಲಿ ರೂಪದಲ್ಲಿ ನಮ್ಮ ಬಾಸ್ ದರ್ಶನ್ ನೋಡಲು ತುದಿಗಾಲಲ್ಲಿ ಕುಳಿತಿರಿ'...
ಕನ್ನಡದ ಸ್ಟಾರ್ ನಟ, ಸದ್ಯ ಕೊಲೆ ಆರೋಪಿಯಾಗಿ ಸುದ್ದಿಯಲ್ಲಿರುವ ನಟ ದರ್ಶನ್‌ಗೆ ಸಂಬಂಧಪಟ್ಟು ನ್ಯೂಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಅದು 'ಕಪಾಲಿ' ಚಿತ್ರದ ಬಗ್ಗೆ ಬಂದಿರುವ ಸುದ್ದಿ. ಹೌದು, ನಟ ದರ್ಶನ್ ಹಾಗೂ ರಿಯಲ್ ಸ್ಟಾರ್ ಹಾಗೂ ಗ್ರೇಟ್ ಡೈರೆಕ್ಟರ್ ಉಪೇಂದ್ರ ಜೋಡಿಯಲ್ಲಿ ಸದ್ಯದಲ್ಲೇ ಸಿನಿಮಾವೊಂದು ಬರಬೇಕಿತ್ತು, ಆದರೆ ಈಗ ಅದು ಮುಂದಕ್ಕೆ ಹೋಗಿದೆ ಅಷ್ಟೇ.. ದರ್ಶನ್ ಕೊಲೆ ಆರೋಪದಿಂದ ಮುಕ್ತರಾದ ತಕ್ಷಣ ಆ ಸಿನಿಮಾ ಸೆಟ್ಟೇರಲಿದೆ ಎಂಬ ಭಾರೀ ನ್ಯೂಸ್ ಅಪ್ಪಳಿಸುತ್ತಿದೆ.
ಹೌದು, ನಟ ದರ್ಶನ್ ಅವರ 'ಬಾಸ್' ಸಿನಿಮಾ ಬರೋದಕ್ಕಿಂತ ಸ್ವಲ್ಪ ಮೊದಲು ರಮೇಶ್ ಯಾದವ್ ನಿರ್ಮಾಣದಲ್ಲಿ ನಟ ದರ್ಶನ್ ನಾಯಕತ್ವದಲ್ಲಿ 'ಕಪಾಲಿ' ಚಿತ್ರವು ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರವು ನಿಂತುಹೋಗಿತ್ತು. ಬಳಿಕ ಅದೇ ರಮೇಶ್ ಯಾದವ್ ಅವರು ದರ್ಶನ್ ನಟನೆಯ 'ಬಾಸ್' ಚಿತ್ರವನ್ನು ತೆರೆಗೆ ತಂದು ಸೂಪರ್ ಹಿಟ್ ಕೊಟ್ಟರು. ಆದರೆ, ಅವರು ಆ ಮೊದಲು ಘೋಷಿಸಿದ್ದ ಕಪಾಲಿ ಮುಂದುವರಿಯಲಿಲ್ಲ.
ರಿಯಲ್ ಸ್ಟಾರ್ ಹೇಳಿರೋ ಈ ಕಥೆ ಗೊತ್ತಾ? ಉಪ್ಪಿನ ಸುಮ್ನೆ ಹೇಳಿಲ್ವಂತೆ ಬುದ್ಧಿವಂತ ಅಂತ!
ಕಪಾಲಿ ಚಿತ್ರಕ್ಕೆ ಕನ್ನಡದ ಹೆಸರಾಂತ ನಿರ್ದೇಶಕ ಉಪೇಂದ್ರ ಅವರು ಕಥೆ=ಚಿತ್ರಕಥೆ ಸಿದ್ಧಪಡಿಸಿದ್ದು, ಅವರೇ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಏಕೆಂದರೆ, ಅದು ಸ್ಟೈಲಿನ ಸಿನಿಮಾ. ಹೀಗಾಗಿ ಅದಕ್ಕೆ ಉಪೇಂದ್ರ ವಾರ ಟಚ್ ಬೇಕೇ ಬೇಕು ಎನ್ನಲಾಗಿತ್ತು. ಆದರೆ, ಆಮೇಲೆ ಅದೇನಾಯ್ತು? ಉಪೇಂದ್ರ ಅವರು ಬದಲಾದ್ರಾ? ಅಥವಾ ದರ್ಶನ್ ಬೇಡ ಅಂದ್ರಾ? ಅಥವಾ, ನಿರ್ಮಾಪಕ ರಮೇಶ್ ಯಾದವ್ ಅದನ್ನು ಬೇರೆ ಯಾರಾದ್ರೂ ಹೀರೋ ಜೊತೆ ಘೋಷಣೆ ಮಾಡ್ತಾರಾ? ಎಂಬ ಪ್ರಶ್ನೆ ಎದ್ದು ತಣ್ಣಗಾಗಿತ್ತು!
ಇದೀಗ ಮತ್ತೆ ಸೋಷಿಯಲ್ ಮೀಡಿಯಾ ಮೂಲಕ ಕಪಾಲಿ ಚಿತ್ರದ ಬಗ್ಗೆ ಗುಲ್ಲು ಎದ್ದಿದೆ. ಆ ಚಿತ್ರಕ್ಕೆ ಅಂದು ಡಿಸೈನ್ ಮಾಡಲಾಗಿದ್ದ ಪೋಸ್ಟರ್ ಶೇರ್ ಮಾಡಿ, 'ಕಪಾಲಿ ಸದ್ಯದಲ್ಲೇ ಬರಲಿದೆ. ದರ್ಶನ್ ನಟನೆಯ 'ಡೆವಿಲ್' ಚಿತ್ರವು ಮುಗಿದ ಬಳಿಕ, ಈ ಕಪಾಲಿ ಬರುವುದು ಶತಃಸಿದ್ಧ. ಕಪಾಲಿ ರೂಪದಲ್ಲಿ ನಮ್ಮ ಬಾಸ್ ದರ್ಶನ್ ನೋಡಲು ತುದಿಗಾಲಲ್ಲಿ ಕುಳಿತಿರಿ' ಎಂದು ಯಾರೋ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?
ಉಪ್ಪಿ-ದಚ್ಚು ಕಂಬಿನೇಶನ್ ಈ ಸಿನಿಮಾವನ್ನು ಮುಂದೆ ನಿರ್ಮಾಪಕರಾದ ರಮೇಶ್ ಯಾದವ್ ಅವರು ನಿರ್ಮಿಸಿಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ವೈರಲ್ ಆಗಿರುವ ಈ ಸುದ್ದಿ ನಿರ್ಮಾಪಕ ರಮೇಶ್ ಯಾದವ್ ಅವರ ಕಿವಿಗೂ ಬಿದ್ದು, ಅವರು ಈ ಬಗ್ಗೆ ಮಾತನ್ನಾಡಿದ್ದಾರೆ. 'ಕಪಾಲಿ ಹೆಸರಲ್ಲಿ ನಾನು ಸಿನಿಮಾ ಘೋಷಣೆ ಮಾಡಿದ್ದು ನಿಜ. ಆದರೆ, ಆ ಬಳಿಕ ಆ ಹೆಸರಿನ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ.
ಆದರೆ, ಆ ಬಳಿಕ ದರ್ಶನ್ ಜೊತೆ ಬಾಸ್ ಸಿನಿಮಾ ನಿರ್ಮಿಸಿದೆ, ಸಿನಿಮಾ ಗೆದ್ದಿದೆ. ಆ ಸಿನಿಮಾದ ಬಳಿಕ ನಟ ದರ್ಶನ್ ಅವರನ್ನು ನಮ್ಮ ಸಿನಿಮಾದ 'ಬಾಸ್' ಹೆಸರಿನಿಂದಲೇ ಕರೆಯುತ್ತಾರೆ, ಬಳಿಕ ಅದು 'ಡಿ ಬಾಸ್' ಎಂದೂ ಬದಲಾಯಿತು. ಡಿ ಬಂತು ಅಷ್ಟೇ ಬಾಸ್ ಹೋಗಲಿಲ್ಲ. ಕಪಾಲಿ ಚಿತ್ರಕ್ಕೆ ಉಪೇಂದ್ರ ಅವರು ಕಥೆ ಬರೆಯುತ್ತಿದ್ದರು ಎಂಬುದೆಲ್ಲಾ ಸುಳ್ಳು. ನನ್ನ ತಲೆಯಲ್ಲೇ ಒಂದು ಸ್ಟೋರಿ ಲೈನ್ ಇತ್ತು. ಅದನ್ನು ನಮ್ಮ ಟೀಮ್ ಕಡೆಯಿಂದ ಬರೆದು, ನಾವೇ ಆ ಸಿನಿಮಾ ಮಾಡೋಣ ಅಂದುಕೊಂಡಿದ್ದೆವು. ಅದು 'ಓಂ' ರೀತಿಯ ಸಿನಿಮಾ. ಅದನ್ನು ನಾನು ಇವತ್ತಿಗೂ ಮರೆತಿಲ್ಲ' ಎಂದಿದ್ದಾರೆ 'ಬಾಸ್' ನಿರ್ಮಾಪಕ ರಮೇಶ್ ಯಾದವ್.
ಡಾ ರಾಜ್ ಮನೆಗೆ ಹೋದೋರಿಗೆ ಏನೋ ಒಂದು ಹೇಳ್ತಾರೆ, ಕೊಡ್ತಾರೆ; ಗುಟ್ಟು ಹೇಳಿದ ಶಿವರಾಜ್‌ಕುಮಾರ್!