ಲಾರಿ ಡ್ರೈವರ್ ತಂದೆಯನ್ನು ಕಳೆದುಕೊಂಡ ತ್ರಿವಿಕ್ರಮ್, ಕಾಲಿಗೆ ಪೆಟ್ಟು ಬಿದ್ದ ಕೆಲಸ ಹೋಯ್ತು; ನೋವು ಕೇಳಿ ನೆಟ್ಟಿಗರು ಶಾಕ್

First Published | Nov 15, 2024, 12:32 PM IST

ತ್ರಿವಿಕ್ರಮ್‌ಗೆ ಹೆಚ್ಚಾದ್ರು ಮಹಿಳಾ ಅಭಿಮಾನಿಗಳು....ಲಾರಿ ಡ್ರೈವರ್‌ ಪುತ್ರನ ಹಿಂದಿದೆ ಕಷ್ಟ ಸುಖಗಳು....

ಪದ್ಮಾವತಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ತ್ರಿವಿಕ್ರಮ್ ವಯಸ್ಸು ಈಗ 31 ವರ್ಷ. ಮದುವೆಯಾಗಲು ಪರ್ಫೆಕ್ಟ್‌ ವಯಸ್ಸು ಹೊಂದಿರುವ ನಟ ಇದೀಗ ಬಿಗ್ ಬಾಸ್‌ ಮನೆಯಲ್ಲಿದ್ದಾರೆ.

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿರುವ ನಟ ತ್ರಿವಿಕ್ರಮ್ ಸುಮಾರು 45 ದಿನಗಳಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳು ಮದುವೆ ಪ್ರಪೋಸಲ್ ಮುಂದಿಡುತ್ತಿದ್ದಾರೆ.

Tap to resize

ಬಿಗ್ ಬಾಸ್‌ ಮನೆಯಲ್ಲಿ ಟಫ್‌ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ತ್ರಿವಿಕ್ರಮ್ ಮೂಲತಃ ತುಮಕೂರಿನವರು. ಗುಬ್ಬಿಯಲ್ಲಿ ಹುಡುಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತ್ರಿವಿಕ್ರಮ ತಂದೆ ಸುಮಾರು 40 ವರ್ಷಗಳ ಕಾಲ ಲಾರಿ ಡ್ರೈವರ್‌ ಅಗಿ ಕೆಲಸ ಮಾಡಿದ್ದಾರೆ ಮತ್ತು ತಾಯಿ ಗೃಹಿಣಿ. ಕೆಲವು ವರ್ಷಗಳ ಹಿಂದೆ ತಂದೆ ವಿಧಿವಶರಾದರು. ತಂದೆ ತಾಯಿ ಹೆಚ್ಚಾಗಿ ಓದಿಲ್ಲವಾದರೂ ಮಗನಿಗೆ ಯಾವ ಕೊರತೆ ಮಾಡಿಲ್ಲ.

ತುಮಕೂರಿನ ಎಸ್‌ಇಎಸ್‌ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದ ತ್ರಿವಿಕ್ರಮ್, ಪಿಯುಸಿಯನ್ನು ಸವೋರ್ದಯ ಕಾಲೇಜಿನಲ್ಲಿ ಮುಗಿಸಿದ್ದಾರೆ. ಇದಾದ ಮೇಲೆ ಕರೆಸ್ಪಾಂಡೆನ್ಸ್‌ನಲ್ಲಿ ಎಂಬಿಎ ಶಿಕ್ಷಣ ಪಡೆದು 2-3 ತಿಂಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ಕೆಲಸ ಮಾಡುತ್ತಿರುವ ಕ್ರಿಕೆಟ್‌ ಆಫರ್‌ ಹುಡುಕಿಕೊಂಡು ಬಂದಿದೆ. ಕ್ರಿಕೆಟರ್ ಆಗಬೇಕು ಅನ್ನೋದು ತ್ರಿವಿಕ್ರಮ ಬಾಲ್ಯದ ಕನಸು ಹೀಗಾಗಿ ಸುಮಾರು 8 ವರ್ಷಗಳ ಕಾಲ ಕ್ರಿಕಟ್‌ ಆಡಿದ್ದಾರೆ. ಆದರೆ ಕಾಲಿಗೆ ದೊಡ್ಡ ಪೆಟ್ಟು ಬಿದ್ದ ಕಾರಣ ಕ್ರಿಕೆಟ್‌ ಕನಸುಗೆ ಬ್ರೇಕ್ ಹಾಕುತ್ತಾರೆ.

ಸೆಲೆಬ್ರಿಟಿ ಜಿಮ್ ಟ್ರೈನರ್ ಆಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದ ತ್ರಿವಿಕ್ರಮ್‌ಗೆ ಸಿನಿಮಾ ಮತ್ತು ಸೀರಿಯಲ್‌ಗಳಿಂದ ಸಿಕ್ಕಾಪಟ್ಟೆ ಆಫರ್‌ಗಳು ಬಂತು. ಪದ್ಮಾವತಿ, ಜೊತೆ ಜೊತೆಯಲಿ, ನವರಾತ್ರಿ, ಪ್ರೇಮ ಬರಹ ಮತ್ತು ರಂಗನಾಯಕಿಯಲ್ಲಿ ನಟಿಸಿದ್ದಾರೆ.

Latest Videos

click me!