ಈ ಕಾರಣಕ್ಕೆ ಕಂಗುವಾದ ಒಂದು ಹಾಡಿಗೆ 21 ಬಾರಿ ಬಟ್ಟೆ ಬದಲಾಯಿಸಿದ್ದ ನಟಿ

First Published | Nov 15, 2024, 12:44 PM IST

ದಿಶಾ ಪಟಾನಿ ಕಂಗುವಾ ಚಿತ್ರದ ಯೋಲೋ ಹಾಡಿಗಾಗಿ 21 ಬಾರಿ ವಸ್ತ್ರಗಳನ್ನು ಬದಲಾಯಿಸಿದ್ದರಂತೆ ಹೀಗೆ ಒಂದು ಹಾಡಿಗೆ 21 ಬಾರಿ ಬಟ್ಟೆ ಬದಲಿಸಲು ಏನು ಕಾರಣ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

ಸೂರ್ಯ ಮತ್ತು ಬಾಲಿವುಡ್ ನಟ ಬಾಬಿ ಡಿಯೊಲ್ ನಟಿಸಿರುವ ಕಂಗುವಾ ಚಿತ್ರವು ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ 36 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಆದರೆ, ಥಿಯೇಟತ್ ಪರಿಣಿತರ ಲೆಕ್ಕಾಚಾರದ ಪ್ರಕಾರ, ವಿಶ್ವಾದ್ಯಂತ ಮೊದಲ ದಿನ  ಈ ಸಿನಿಮಾ 75 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಕಡಿಮೆ ಗಳಿಕೆ ಕಂಡಿದೆ. ಅದೇ ಸಮಯದಲ್ಲಿ, ಚಿತ್ರವು 1000 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದು ಚಿತ್ರ ನಿರ್ಮಾಪಕರು ಹೇಳುತ್ತಿದ್ದಾರೆ. ಅವರು ಹೇಳಿದಂತೆ 1000 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆಯೇ? ಇಲ್ಲವೇ? ಎಂಬುದನ್ನು ಕಾದು ನೋಡಬೇಕು.

ಈ ಮಧ್ಯೆ, ಚಿತ್ರಕ್ಕೆ ಸಂಬಂಧಿಸಿದ ಒಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಕಂಗುವಾ ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕಾಗಿ, ಪ್ರಮುಖ ನಟಿ ದಿಶಾ ಪಟಾನಿ 21 ಬಾರಿ ಬಟ್ಟೆಗಳನ್ನು ಬದಲಾಯಿಸಬೇಕಾಯಿತಂತೆ ಹೀಗೆ ಆಗಾಗ್ಗೆ ಬಟ್ಟೆ ಬದಲಿಸಿಯೇ ಅವರು ಸುಸ್ತಾದರು ಎಂದು ಹೇಳಲಾಗುತ್ತಿದೆ. ಆದರೆ ದಿಶಾ ಏಕೆ ಹಾಗೆ ಮಾಡಬೇಕಾಯಿತು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ, ಅದರ ಬಗ್ಗೆ ಇಲ್ಲಿದೆ ಮಾಹಿತಿ

Tap to resize

ದಿಶಾ ಪಟಾನಿ 21 ಬಾರಿ ವಸ್ತ್ರ ಬದಲಾಯಿಸಿದ್ದೇಕೆ?

ಸೂರ್ಯ ಮತ್ತು ದಿಶಾ ಪಟಾನಿ ನಟಿಸಿರುವ ಕಂಗುವಾ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಜನರಲ್ಲಿ ಭಾರಿ ಕುತೂಹಲವಿದೆ. ಈ ಮಧ್ಯೆ, ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕೆ ಸಂಬಂಧಿಸಿದ ಒಂದು ಘಟನೆ ಬೆಳಕಿಗೆ ಬಂದಿದೆ. ಅಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ದಿಶಾ, ಯೋಲೋ ಹಾಡಿನ ಚಿತ್ರೀಕರಣದ ಸಮಯದಲ್ಲಿ, ಸತತವಾಗಿ 21 ಬಟ್ಟೆಗಳನ್ನು ಬದಲಾಯಿಸಬೇಕಾಯಿತು ಎಂದು ಹೇಳಿದ್ದಾರೆ.

ಯೋಲೋ ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಲು ಚಿತ್ರತಂಡ ಬಯಸಿತ್ತು. ಅದಕ್ಕಾಗಿಯೇ ಹಲವು ಸ್ಥಳಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಇದರಿಂದ ದಿಶಾ ಮತ್ತು ಸೂರ್ಯ ಆಗಾಗ್ಗೆ ಸ್ಥಳಗಳನ್ನು ಬದಲಾಯಿಸಬೇಕಾಯಿತು. ಈ ಹಾಡಿಗಾಗಿ ದಿಶಾ 21 ಬಾರಿ ಬಟ್ಟೆಗಳನ್ನು ಬದಲಾಯಿಸಬೇಕಾಯಿತು. ಈ ಹಾಡಿನ ಚಿತ್ರೀಕರಣ 4 ದಿನಗಳ ಕಾಲ ನಡೆಯಿತು. ಹಾಡಿನ ಚಿತ್ರೀಕರಣದ ಸಮಯದಲ್ಲಿ, ಇಡೀ ತಂಡದ ಗಮನ ಅದರ ಮೇಲೆ ಇತ್ತು ಎಂದು ದಿಶಾ ಹೇಳಿದ್ದಾರೆ.

10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಂಗುವಾ

ಕಂಗುವಾ ಚಿತ್ರ ನಿನ್ನೆ 10 ಸಾವಿರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸೂರ್ಯ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಆದರೆ ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆಗೆ, ನಟರಾಜನ್ ಸುಬ್ರಮಣಿಯಂ, ಕೆ.ಎಸ್. ರವಿಕುಮಾರ್, ಯೋಗಿ ಬಾಬು,ರೆಡಿನ್‌ ಕಿಂಗ್ಸ್‌ಲಿ, ಕೋವೈ ಸರಳ ಮತ್ತು ಮನ್ಸೂರ್ ಅಲಿ ಖಾನ್ ಕೂಡ ನಟಿಸಿದ್ದಾರೆ.

ನಿರ್ದೇಶಕ ಶಿವ ನಿರ್ದೇಶನದ ಈ ಚಿತ್ರದ ಬಜೆಟ್ 350 ಕೋಟಿ ರೂಪಾಯಿ. ಕಂಗುವಾ ದೇಶದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಚಿತ್ರವನ್ನು 2019 ರಲ್ಲಿ ಕೋವಿಡ್ ಸಮಯದಲ್ಲಿ ಘೋಷಿಸಲಾಗಿತ್ತು. ಇದನ್ನು ನಿರ್ಮಿಸಲು ಸುಮಾರು 5 ವರ್ಷಗಳು ಬೇಕಾಯಿತು. 5 ವರ್ಷಗಳ ನಂತರ ಕಂಗುವಾ ತೆರೆಗೆ ಬಂದಿದೆ ಎಂಬುದು ಗಮನಾರ್ಹ.

Latest Videos

click me!