ಧನು ರಾಶಿಯವರು ರಿಲೇಶನ್ ಶಿಪ್ ನಲ್ಲಿ ಮಾಡೋ ತಪ್ಪುಗಳಿವು

First Published Apr 25, 2022, 12:43 PM IST

Astrology tips in Kannada: ಧನು ರಾಶಿಯು ಉತ್ತಮ ಸಮಯ ಮತ್ತು  ಒಳ್ಳೆಯತನವನ್ನು ಆನಂದಿಸುವ ಚಿಹ್ನೆಯಾಗಿದೆ. ಈ ರಾಶಿಯ ಜನರು ಸಂಬಂಧದಲ್ಲಿ ತುಂಬಾನೇ ಫ್ರೀ ಆದ ಮನೋಭಾವವನ್ನು ಬೆಳೆಸುತ್ತಾರೆ ಮತ್ತು ಪ್ರಯಾಣ ಮತ್ತು ಕಲಿಕೆಯನ್ನು ತುಂಬಾನೇ ಪ್ರೀತಿಸುತ್ತಾರೆ. ಅಷ್ಟೇ ಅಲ್ಲ ಇವರು ರೋಮಾಂಚನವನ್ನು ಬಯಸುವ ಈ ರಾಶಿಯವರು ಒಂದು ಸಾಮಾನ್ಯ ರಾತ್ರಿಯನ್ನು ಕೂಡ ಒಂದು ಪಾರ್ಟಿಯಾಗಿ ಬದಲಾಯಿಸುತ್ತಾರೆ. ಅಂತಹ ಬಿಂದಾಸ್ ಜನ ಇವರಾಗಿರುತ್ತಾರೆ.
 

ಧನು ರಾಶಿಯೊಂದಿಗಿನ(Sagittarius) ಡೇಟಿಂಗ್ ವಿಷಯಕ್ಕೆ ಬಂದಾಗ, ಇದು ವಿನೋದ ಮತ್ತು ರೋಮಾಂಚಕಾರಿ ಅನುಭವ ನೀಡುತ್ತದೆ.  ನೀವು ಉತ್ಸಾಹ, ಪ್ಯಾಷನ್  ಮತ್ತು ಸಾಹಸದಂತಹ ಗುಣಗಳನ್ನು ಅವರಿಂದ ಕಲಿಯಬಹುದು. ಆದಾಗ್ಯೂ, ಕೆಲವೊಮ್ಮೆ ರಿಲೇಷನ್ಶಿಪ್ ಗಳಲ್ಲಿ ಕೆಲ ತಪ್ಪುಗಳನ್ನು ಧನು ರಾಶಿಯವರು ಮಾಡುತ್ತಾರೆ  ಮತ್ತು ಇದನ್ನು ತಪ್ಪಿಸಲು ಇಲ್ಲಿದೆ ಇಸಿ ಮಾರ್ಗಗಳು

1. ಸಂಬಂಧದ(Relationship) ಸಮಸ್ಯೆಗಳ ಬಗ್ಗೆ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು : 
ಧನು ರಾಶಿಯವರು ತಮ್ಮ ಸಂಗಾತಿ ಜೊತೆ ಜಗಳ ಮಾಡಿದಾಗಲೆಲ್ಲಾ ಅದನ್ನು ರಹಸ್ಯವಾಗಿಡಲು ಹೆಚ್ಚು ಒಲವು ತೋರುತ್ತಾರೆ ಮತ್ತು ಅದರ ಬಗ್ಗೆ ಮಾತನಾಡುವುದಿಲ್ಲ, ಆದಾಗ್ಯೂ, ಸ್ವಲ್ಪ ಸಮಯದ ನಂತರ, ಅವರು ತಮ್ಮ ಸ್ನೇಹಿತರೊಂದಿಗೆ ಪ್ರತಿಯೊಂದು ವಿವರವನ್ನು ಅತಿಯಾಗಿ ಹಂಚಿಕೊಳ್ಳುತ್ತಾರೆ.
 

ಹೀಗೆ ಮಾಡೋದರಿಂದ ಸಂಬಂಧದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಏಕೆಂದರೆ ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡ ಕ್ಷಣ, ಇತರರ ಅಭಿಪ್ರಾಯಗಳು ಅವರ ತಲೆಯ ಸುತ್ತಲೂ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವರಿಗೆ ಗೊಂದಲವನ್ನು ಉಂಟುಮಾಡುತ್ತವೆ. ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿಯನ್ನು(Partner) ನೇರವಾಗಿ ಸಂಪರ್ಕಿಸುವುದು ಮತ್ತು ನಿಮ್ಮಿಬ್ಬರ ನಡುವೆ ಸಮಸ್ಯೆಯನ್ನು ಬಗೆಹರಿಸುವುದು ಉತ್ತಮ ಮಾರ್ಗವಾಗಿದೆ.

2. ಅವರಿಗೆ ಸ್ಥಿರತೆ ಇಲ್ಲ
 ಧನು ರಾಶಿಯವರು ಸಾಹಸಮಯ ಮನೋಭಾವವನ್ನು ಹೊಂದಿರುತ್ತಾರೆ, ಅದು ಆನಂದದಾಯಕ ಮತ್ತು ರೋಮಾಂಚಕವಾಗಿದೆ. ಆದಾಗ್ಯೂ, ಕೆಲವೊಮ್ಮೆ, ಈ ಗುಣಲಕ್ಷಣಗಳು ಅವರನ್ನು ಏಕಾಂಗಿಯಾಗಿ(Lonely) ಮತ್ತು ಕೆಲವೊಮ್ಮೆ ಕಡಿಮೆ ಮೆಚ್ಚುಗೆಗೆ ಒಳಪಡಿಸಬಹುದು. ಈ ರಾಶಿಯವರಿಗೆ ಹೆಚ್ಚು ಸ್ಥಿರತೆ ಇರೋದಿಲ್ಲ. 


ಧನು ರಾಶಿಯವರು ಒಂದು ಸಂಬಂಧಕ್ಕೆ ಬದ್ಧರಾಗಿದ್ದರೂ, ಮೊದಮೊದಲು, ಅದು ವಿನೋದ(Happy) ಮತ್ತು ರೋಮಾಂಚನಕಾರಿಯಾಗಿ ತೋರಬಹುದು, ನಂತರ ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಸಾಹಸ ಮತ್ತು ತಿಳುವಳಿಕೆಯೊಂದಿಗೆ ಬೆರೆತ ಉತ್ತಮ ಸಮತೋಲಿತ ಸಂಬಂಧವನ್ನು ಕಂಡುಹಿಡಿಯುವುದು ಮತ್ತು ಅನುಸರಿಸುವುದು ಉತ್ತಮ ಮಾರ್ಗವಾಗಿದೆ.

 3. ಧನು ರಾಶಿಯವರು ಸುಲಭವಾಗಿ ಗಿವ್ ಅಪ್ (Give up)ಮಾಡುತ್ತಾರೆ 
ಧನು ರಾಶಿ ಬೆಂಕಿಯ ಸಂಕೇತವಾಗಿರುವುದರಿಂದ, ಹೆಚ್ಚಿನ ಸಮಯ ವಿನೋದವನ್ನು ಬಯಸುವವರಾಗಿರುತ್ತಾರೆ. ಇದರರ್ಥ ಅವರು ಒಂದೇ ಸ್ಥಳದಲ್ಲಿ ಉಳಿಯಲು ಅಥವಾ ದೀರ್ಘಕಾಲದವರೆಗೆ ಅದೇ ಕೆಲಸವನ್ನು ಮಾಡಲು ಒತ್ತಾಯಿಸಲ್ಪಟ್ಟರೆ ಅವರು ಬೇಸರಗೊಳ್ಳಬಹುದು. 


ಮತ್ತೊಂದೆಡೆ, ಸಂಬಂಧಗಳಿಗೆ ತಾಳ್ಮೆಯ(Patience) ಅಗತ್ಯವಿದೆ. ಆದ್ದರಿಂದ, ಪ್ರೀತಿಗೆ ಅಂತ್ಯ ಹಾಡಲು ಬಯಸುವ ಧನು ರಾಶುಯವರು ಕೇವಲ ಸಮಸ್ಯೆಯಲ್ಲಿ ಮುಂದುವರಿಯುವ ಬದಲು, ಕಠಿಣ ಸನ್ನಿವೇಶಗಳನ್ನು ದಾಟಿ ಹೇಗೆ ಮುಂದೆ ಬರಬೇಕು ಎನ್ನುವ ಬಗ್ಗೆ ಕೆಲಸ ಮಾಡಲು ಕಲಿಯಬೇಕು.

4. ಅವರು ಬದ್ಧತೆಗೆ ಹೆದರುತ್ತಾರೆ ಧನು 

ಧನು ರಾಶಿಯವರು ಸಾಮನ್ಯವಾಗಿ ಬದ್ಧತೆಗೆ ಹೆದರುತ್ತಾರೆ. ಅವರು ಹೆಚ್ಚಾಗಿ ಕಮೀಟ್ ಆಗಲು ಇಷ್ಟ ಪಡೋದೆ ಇಲ್ಲ. ಧನು ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುವ(Love) ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸಲು ಇಷ್ಟಪಡುವ ವ್ಯಕ್ತಿಗಳು, ಆದ್ದರಿಂದ ತಮ್ಮನ್ನು ತಾವು ಕಟ್ಟಿಹಾಕಿಕೊಳ್ಳುವ ಮತ್ತು ಸಂಬಂಧದ ನಿಯಮಗಳಿಗೆ ಅಂಟಿಕೊಳ್ಳುವ ಆಲೋಚನೆಯು ಸಂಬಂಧಕ್ಕೆ ಬದ್ಧರಾಗಲು ಅವರನ್ನು ಹೆದರಿಸಬಹುದು. ಆದಾಗ್ಯೂ, ಪ್ರಾಮಾಣಿಕತೆಯ ಇತರ ಧನು ರಾಶಿಯ ಗುಣಲಕ್ಷಣವನ್ನು ನೋಡಿದರೆ, ಈ ಕೇರ್ ಫ್ರೀ ಜನರು ತಮ್ಮ ಸಂಗಾತಿಯೊಂದಿಗೆ ಆರೋಗ್ಯಕರ ಸಂಬಂಧವನ್ನು ಹೊಂದಬಹುದು. 
 

5. ಅವರು ಕೆಲವೊಮ್ಮೆ ಅತಿಯಾದ ಪ್ರಾಮಾಣಿಕರಾಗಿರುತ್ತಾರೆ : 
ಪ್ರತಿಯೊಂದು ಸಂಬಂಧದಲ್ಲೂ ಪ್ರಾಮಾಣಿಕತೆ(Honesty) ಅತ್ಯಗತ್ಯ, ಮತ್ತು ಧನು ರಾಶಿಯವರು ಸತ್ಯವನ್ನೆ ಹೆಚ್ಚಾಗಿ ಮಾತನಾಡುತ್ತಾರೆ. ಆದಾಗ್ಯೂ, ಕೆಲವೊಮ್ಮೆ, ತಮ್ಮನ್ನು ತಾವು ವ್ಯಕ್ತಪಡಿಸುವಾಗ ಅವರು ತುಂಬಾ ಮುಕ್ತವಾಗಿರಬಹುದು, ಇತರರ ಭಾವನೆಗಳ ಬಗ್ಗೆ ಕಾಳಜಿ ವಹಿಸದಿದ್ದಕ್ಕಾಗಿ ಅವರನ್ನು ಸಂವೇದನಾರಹಿತ ವ್ಯಕ್ತಿಯನ್ನಾಗಿ ಮಾಡಬಹುದು. ನೆನಪಿಡಿ, ಒಂದು ಚಮಚ ಜೇನುತುಪ್ಪವು ಔಷಧಿಯ ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಸ್ವಲ್ಪ ಮಾತನಾಡುವಾಗ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಸಿಹಿಯಾಗಿ ಮಾತನಾಡಿ. 

6. ಅವರು ಸ್ವಾತಂತ್ರ್ಯದ ಅಗತ್ಯವನ್ನು ವ್ಯಕ್ತಪಡಿಸುವುದಿಲ್ಲ
 ಧನು ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಗೌರವಿಸುವ(Respect), ಸ್ವಾತಂತ್ರ್ಯದ ಇಷ್ಟ ಪಡುವ ಮತ್ತು ಪ್ರಕೃತಿಯಲ್ಲಿ ಹೊಂದಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಶಕ್ತಿಗಳಿಗೆ ಹೊಂದಿಕೆಯಾಗುವ ಸಂಗಾತಿಯನ್ನು ಹುಡುಕುತ್ತಾರೆ ಮತ್ತು ಸಂತೋಷದ ಸಂಬಂಧವನ್ನು ಹೊಂದಲು ತಮ್ಮಂತೆಯೇ ಇರುವ ಸಂಗಾತಿಯನ್ನು ಆರಿಸಲು ಇಷ್ಟ ಪಡುತ್ತಾರೆ. 

 ವಿಷಯಗಳು ವ್ಯತಿರಿಕ್ತವಾಗಿ ಸಂಭವಿಸಿದಾಗ ಅವರು ಸುಲಭವಾಗಿ ಇರಿಟೇಟ್(Irritate) ಆಗುತ್ತಾರೆ, ಧನು ರಾಶಿಯವರು ತಮ್ಮ ಸ್ವಾತಂತ್ರ್ಯದ ಅಗತ್ಯವನ್ನು  ಸಂಗಾತಿಗಳಿಗೆ ತಿಳಿಸುವುದು ಮತ್ತು ಸಂಬಂಧದಲ್ಲಿ ನಂಬಿಕೆ ಮತ್ತು ಮುಕ್ತತೆಯನ್ನು ಕಾಪಾಡಿಕೊಳ್ಳುವ ಮಾರ್ಗಗಳನ್ನು ಅನ್ವೇಷಿಸುವುದು ಯಾವಾಗಲೂ ಒಳ್ಳೆಯದು.

7. ಅವರು ಗತಕಾಲದ ಬಗ್ಗೆ ಯೋಚಿಸುವುದಿಲ್ಲ 
 ಧನು ರಾಶಿಯವರು ಗತಕಾಲದ ದ್ವೇಷದ ಬಗ್ಗೆ ಯೋಚನೆ ಮಾಡೋದಿಲ್ಲ.  ಅವರ ಸರಳ ಜೀವನ ನಿಯಮವೆಂದರೆ ಮುಂದೆ ಸಾಗುವುದು ಮತ್ತು ಪೂರ್ಣ ಉತ್ಸಾಹದಿಂದ ಭವಿಷ್ಯದತ್ತ(Future) ಗಮನ ಹರಿಸುವುದು. ಅವರ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಹರಿಯುತ್ತವೆ, ಆದ್ದರಿಂದಲೇ, ಈಗಾಗಲೇ ಕಳೆದುಹೋದ ಗತಕಾಲದ ಬಗ್ಗೆ ಯೋಚಿಸುವ ಬದಲು ತಮ್ಮ ಉದ್ದೇಶಗಳ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅವರು ನಂಬುತ್ತಾರೆ.

click me!