ಈ ತಪ್ಪುಗಳು ಹನಿಮೂನ್ ನ ರೋಮ್ಯಾಂಟಿಕ್ ಮೂಡ್ ನ್ನೆ ಹಾಳು ಮಾಡುತ್ತೆ

First Published | Apr 19, 2022, 7:30 PM IST

ಮದುವೆಯ ಆಯಾಸವನ್ನು ನಿವಾರಿಸಲು ಮಧುಚಂದ್ರಕ್ಕಿಂತ (honeymoon) ಉತ್ತಮ ಸಮಯ ಬೇರೊಂದಿಲ್ಲ. ಆದರೆ, ಅನೇಕ ಬಾರಿ ಅವಸರದಲ್ಲಿ, ದಂಪತಿಗಳು ನಂತರ ಪಶ್ಚಾತ್ತಾಪ ಪಡುವ ಏನನ್ನಾದರೂ ಮಾಡುತ್ತಾರೆ. ಹನಿಮೂನ್ ಸಮಯದಲ್ಲಿ ನೀವು ಮಾಡುವ ಕೆಲವೊಂದು ತಪ್ಪುಗಳು ನಿಮ್ಮ ಮಧುರ ರೋಮ್ಯಾಂಟಿಕ್ ಕ್ಷಣಗಳನ್ನು ಹಾಳು ಮಾಡುತ್ತೆ. ಅಂತಹ ಮಿಸ್ಟೇಕ್ ಗಳು ಯಾವುವು ತಿಳಿಯಿರಿ... 
 

ಹನಿಮೂನ್ ಯೋಜನೆ (honeymoon plan)

ಹೊಸದಾಗಿ ಮದುವೆಯಾದ ದಂಪತಿಗಳು ಮಧುಚಂದ್ರದ ಯೋಜನೆಯಲ್ಲಿ ಅನೇಕ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಆ ವಿಷಯಗಳು ಯಾವುವು ಎಂದು ತಿಳಿದುಕೊಳ್ಳೋಣ. ಅಷ್ಟೇ ಅಲ್ಲ, ಹನಿಮೂನ್ ಸಮಯದಲ್ಲಿ ಈ ತಪ್ಪುಗಳು ಆಗದೇ ಇರುವಂತೆ ಗಮನ ಹರಿಸಿದ್ರೆ ಹನಿಮೂನ್ ಸಖತ್ತಾಗಿ ಎಂಜಾಯ್ ಮಾಡಲು ಸಾಧ್ಯವಾಗುತ್ತದೆ.  

 ಆತುರ ಬೇಡ
ನೀವು ಮೊದಲ ಬಾರಿಗೆ ನಿಮ್ಮ ಸಂಗಾತಿಯೊಂದಿಗೆ ಹನಿಮೂನ್ ನ ಮಧುರ ಕ್ಷಣವನ್ನು ಕಳೆಯಲು ಹೊರಟಾಗ, ಆತುರಪಡಬೇಡಿ. ನಿಮ್ಮ ಮಧುಚಂದ್ರದ ಮನಸ್ಥಿತಿಯನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಪ್ರತಿ ಕ್ಷಣವನ್ನು ಎಂಜಾಯ್ ಮಾಡಬೇಕಾಗಿರುವುದರಿಂದ ಸರಿಯಾದ ನಿರ್ಧಾರವನ್ನೆ ತೆಗೆದುಕೊಳ್ಳಿ. 

Tap to resize

ಮುಂಗಡ ಬುಕ್ ಮಾಡದೇ ಇರೋದು 
ಹನಿಮೂನ್ ಗೆ ಹೋಗುವ ಬಗ್ಗೆ ನೀವು ಮದುವೆ ಮೊದಲೇ ಪ್ಲಾನ್ ಮಾಡಿರುತ್ತೀರಿ. ಪ್ಲ್ಯಾನ್ ಮಾಡಿದರೆ ಸಾಲದು ಅದನ್ನು ಕಾರ್ಯಗತ ಸಹ ಮಾಡಬೇಕು. ಅದಕ್ಕಾಗಿ ಸಮಯಕ್ಕೆ ಸರಿಯಾಗಿ ಟಿಕೆಟ್ ಕಾಯ್ದಿರಿಸುವುದು (book your ticket) ಮುಖ್ಯವಾಗಿದೆ. ಇಲ್ಲವಾದರೆ ಟಿಕೆಟ್ ಬುಕ್ ಮಾಡಲು ದೀರ್ಘ ಸಮಯ ತೆಗೆದುಕೊಳ್ಳಬಹುದು. ನೀವು ಹೋಗುತ್ತಿರುವ ತಾಣವನ್ನು ನಿರ್ಧರಿಸಿದ ನಂತರ ಬುಕಿಂಗ್ ಅನ್ನು ವಿಳಂಬ ಮಾಡಬೇಡಿ.

ಸಂಗಾತಿಯಿಂದ ಸಜೆಶನ್ ತೆಗೆದುಕೊಳ್ಳದಿರುವುದು
ನೀವು ಏನನ್ನು ಯೋಜಿಸಿದರೂ, ನೀವು ಅದರಲ್ಲಿ ನಿಮ್ಮ ಸಂಗಾತಿಯನ್ನು ಸಹ ತೊಡಗಿಸಿಕೊಳ್ಳಬೇಕು. ಅನೇಕ ಬಾರಿ, ನೀವು ತೆಗೆದುಕೊಂಡಿರುವ ನಿರ್ಧಾರ ಸಂಗಾತಿಗೆ (partner)ಇಷ್ಟವಾಗದೇ ಹೋಗಬಹುದು, ಆದುದರಿಂದ ಇಬ್ಬರು ಜೊತೆಯಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗಿದೆ. 

ಬಜೆಟ್ ಬಗ್ಗೆ ಯೋಚಿಸದಿರುವುದು
ಮಧುಚಂದ್ರಕ್ಕೆ ಹೋಗಲು ನೀವು ಬಜೆಟ್ (budget) ಅನ್ನು ಮಾಡಬೇಕು, ಅದು ನಿಮ್ಮ ಮನೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆದುದರಿಂದ ಈ ಬಗ್ಗೆ ಮೊದಲೇ ಯೋಜನೆ ರೂಪಿಸಬೇಕು. ಎಷ್ಟು ಖರ್ಚು ಆಗಬಹುದು, ಟ್ರಾವೆಲ್, ಸ್ಟೇ, ಫುಡ್ ಎಲ್ಲವೂ ಸೇರಿ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಯೋಜನೆ ರೂಪಿಸಬೇಕು. 

ಚಿಂತೆಯನ್ನು ಬಿಟ್ಟುಬಿಡಿ
ಮನೆ ಮತ್ತು ಕಚೇರಿಯ ಬಗ್ಗೆ ಚಿಂತಿಸಬೇಡಿ ಮತ್ತು ಅದನ್ನು ಹನಿಮೂನ್ ಗೆ  ಕೊಂಡೊಯ್ಯುವ ತೊಂದರೆಯನ್ನು ತೆಗೆದುಕೊಳ್ಳಬೇಡಿ. ಅಫೀಸ್ ಅಥವಾ ಮನೆಯ ವಿಚಾರವನ್ನು ಹನಿಮೂನ್ ಗೆ ಕೊಂಡೊಯ್ದರೆ ಇದರಿಂದ ಹನಿಮೂನ್ ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ. 

Relಇತರ ದಂಪತಿಗಳನ್ನು ನೋಡಬೇಡಿ
ಹುಡುಗರು ಇತರ ಹುಡುಗಿಯರನ್ನು ಹೆಚ್ಚು ನೋಡುವುದನ್ನು ತಪ್ಪಿಸಬೇಕು. ಇದು ಸಂಗಾತಿಯನ್ನು ನೋಯಿಸಬಹುದು. ಹನಿಮೂನ್ ಗೆ ಹೋಗಿರುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯಬೇಕು. ಅದರ ಬದಲಾಗಿ ನೀವು ಇತರ ಹುಡುಗಿಯರನ್ನು ನೋಡಿದರೆ, ಅಥವಾ ಇತರ ದಂಪತಿಗಳನ್ನು ನೋಡಿ ಹೋಲಿಕೆ ಮಾಡಿದರೆ ಅದರಿಂದ ಸಮಸ್ಯೆ ಉಂಟಾಗುತ್ತದೆ. 

Latest Videos

click me!